Posts

Showing posts from 2017

ವರುಷ

Image
(Image Courtesy: Google) ವರುಷ ಕಳೆದಿದೆ-ಹೊಸತು ಹೊಸಿಲಲ್ಲಿದೆ, ಸಿಹಿ-ಕಹಿಗಳ ಸಮಾಗಮವೇ ಆದ ವರುಷ ಕಹಿಯೊಂದ ಬಿಟ್ಟು ಸಿಹಿಯೆಲ್ಲಾ ಹೀರಿ ಹಿಂದೆ ಸರಿದಿದೆ, ಇದ್ದ ಸಂತಸಗಳೇನಿಲ್ಲದಿದ್ದರೂ ಅರಿಯದ ಹೊಸ ವರುಷದಲಿ  ಏನಾಗಬಹುದೋ ಎಂಬ ಆತಂಕವಂತೂ ಇದೆ, ಎಲ್ಲರೊಂದಿಗೆ ಪ್ರಾರಂಭವಾಗಿದ್ದ ವರುಷ ಒಂಟಿ ಮಾಡಿ ಕಳೆದು ಹೋಗುತ್ತಿದೆ, ಇನ್ನಾಸಕ್ತಿಗಳೇನು ಇಲ್ಲ ಹರುಷ ಇಲ್ಲದಿರಲೂ ಪರವಾಗಿಲ್ಲ ಕಹಿಯ ಉಡುಗೊರೆ ಬೇಡ, ಕನಸುಗಳ ವ್ಯರ್ಥ ಪ್ರಯತ್ನವೇ ಮೇಲೋಗರವಾಗಿ ಮನದಲ್ಲೇನೂ ಆಸೆ ಇಲ್ಲ, ಇರುವ ಬದುಕೇ ಸಮಾಧಾನವಾಗಿ ಮುನ್ನಡೆದರೆ ಅದುವೇ ನನ್ನ ತೃಪ್ತಿ. *********************** 29-ಡಿಸೆಂಬರ್-2017 (Image Courtesy:Google) ಮನದುಂಬಿ ನಿಂತಿದೆ ಕಟ್ಟೆಯೊಡೆದರೇನಾಗಬಹುದೋ ಕಾಣೆ, ಇಷ್ಟು ದಿನ ಅನಿಸದ ನೋವು ದಡಾರನೆ ವರ್ಷಾಂತ್ಯಕ್ಕೆ ನುಗ್ಗಿದೆ, ತಣ್ಣಗಿದ್ದ ಮನವು ಕಳೆದೆಲ್ಲವ ನೆನೆ-ನೆನೆದು ಮೌನದಿ ಗೋಗರೆದಿದೆ, ಕಳೆದುಹೋದ ಕಾಲೇಜು-ಹಾಸ್ಟೆಲ್ಲು-ಆ ಊರು ಏನೂ ಇಲ್ಲದ ಈಗಿನ ಸ್ಥಿತಿಗೆ ಅತೀವ ವಿರೋಧಿಯಾಗಿದೆ, ಆ ಸುಸಮಯ ಮೆಲುಕು ಹಾಕಲೂ ಗತಿಯಿಲ್ಲದ ತಿರುಕನಂತಾಗಿ ಪ್ರಕೃತಿಯೇ ನನ್ನ ವಿರೋಧಿ ಎಂಬ ಭಾಸವಾಗಿದೆ.

ದಿಕ್ಕು

Image
(Courtesy: Google Images) ಏನಾಗಿದೆಯೋ ತಿಳಿಯದು ಮನವು ಕಾರಣಗಳು ನೂರು ಮನ ಹಿಂಡಲು, ಆಪ್ತವಾದೊಂದು ಹಂಗು ಸಾಕು  ಮನ ಕಾದಿದೆ ಆ ಒಂದು ಕ್ಷಣ  ಬರಬಹುದೆಂದು, ಬಾಗಿಲು ತೆರೆದಿದೆ ದನಿ ಒಣಗಿದೆ ಪುಟ ತೆರೆದಿದೆ, ಖಾಲಿತನ ಹಿಂಡುತ್ತಿದೆ. ಎದೆ ಹೊತ್ತಿ ಉರಿದಿದೆ  ಉಸಿರು ಬತ್ತಿ ಸಾಯುತಿದೆ, ದಿಕ್ಕು ಬದಲಾದಂತಾಗಿ  ಹಾದಿಯೇ ಬಯಲಾದಂತಾಗಿದೆ, ಏನಾದರೇನಂತೆ,  ಈಗ ನನ್ನ ದಾರಿ ಕಂಡಿದೆ ಅದೋ ಕೈ ಬೀಸಿ ಬಾ ಎಂದು ಕರೆದಿದೆ!! ಮಳೆಯಿಲ್ಲದ ಮುಗಿಲಲಿ ಮೌನವೇ ನನ್ನ ಸ್ನೇಹಿಯಾಗಿದೆ, ನಾ ಬರುತಿರುವೆ ದೂರ ಹೋಗದಿರು, ಅಲ್ಲೇ ನಿಂತಿರು ನನ್ನನಾಲಂಗಿಸಲು!!

ಚಳಿ

Image
(Courtesy: Google) ಚಳಿಗಾಳಿ ತುಂಬಿಹುದು ಮೈಯೆಲ್ಲಾ ನಡುಗಿಹುದು, ಮೇಲೇರುತಿಹ ಭಾಸ್ಕರನಿಗೂ ಕಿಂಚಿತ್ತೂ ಬೆಲೆ ಇಲ್ಲದಾಗಿಹುದು, ಮನಕೀಗ ಭಯವೇರಿ ಚಳಿಯಿದೋ?! ಅಸಖ್ಯವಿದೋ?! ದಾರಿ ತಪ್ಪಿದ ಮನದಂತೆ ದೇಹವೂ ಅದೇ ದಾರಿ ಹಿಡಿದಿಹುದು, ಅಭಯವೊಂದು ಸಿಗಲಿ  ಇಲ್ಲಾ, ಸರ್ವವೂ ನಶಿಸಿ ಹೋಗಲಿ.

ಪುರಸ್ಕಾರ

ಕರ್ಣನ ಗೆಳೆಯ ರಾಮ ಒಂದು ಪ್ರಾಥಮಿಕ ಶಾಲೆಯ ಶಿಕ್ಷಕ, ಒಮ್ಮೆ ಅವನು ತನಗೆ ದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಇರುವುದಾಗಿಯೂ, ತಾನು ಅಲ್ಲಿಗೆ ಹೋಗುತ್ತಿರುವುದಾಗಿಯೂ ಹೇಳಿದ್ದ. ಹೋಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದದ್ದೂ ಆಯ್ತು ವಾಪಾಸ್ ಬಂದ. ಬಂದ ನಂತರ ಕರ್ಣನಿಗೆ ಒಂದು ದಿನ ಸಿಕ್ಕ ರಾಮನು ಅವನನ್ನು ತನ್ನ ಮನೆಗೆ ಕರೆದೊಯ್ದು ಟೀ ಕುಡಿಸಿದ ಸುಮ್ಮನಿರಲಾರದ ಕರ್ಣ ಎಲಿ, ನಿನಗೆ ಪ್ರಶ್ತಸ್ತಿ ಕೊಡಲು ಕಾರಣವೇನು ಹೇಳು ಎಂದ. ರಾಮ ತನ್ನ ಕೋಣೆಯಿಂದ ಎರಡು ಬೃಹತ್ತಾದ ಫೈಲುಗಳನ್ನು ಹೊತ್ತು ತಂದ. ಅದನ್ನ ತೆರೆದು "ಇಷ್ಟು ಕಡೆ ಸಭೆ ಮಾಡಿದ್ದೇನೆ, ಇಷ್ಟು ಕಾರ್ಯಕ್ರಮ ಆಯೋಜಿಸಿದ್ದೇನೆ, ಪ್ರಶಸ್ತಿ ನೀಡಿದ್ದೇನೆ, ರೈತ ಸಂವಾದಗಳನ್ನು ಮಾಡಿದ್ದೇನೆ, ಇತ್ಯಾದಿ" ಇದನ್ನೆಲ್ಲಾ ನೋಡಿ ಕರ್ಣ ಮಡಚಿ ಪಕ್ಕಕ್ಕಿಟ್ಟು, ಕರ್ಣ: ನಿನ್ನ ವೃತ್ತಿ ಏನು?! ರಾಮ: ಪ್ರಾಥಮಿಕ ಶಾಲಾ ಶಿಕ್ಷಕ. ಕರ್ಣ: ನಿನ್ನ ಶಾಲೆಗೆ ಮತ್ತು ನಿನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಏನು ಮಾಡಿದ್ದೀಯೇ ತೋರಿಸು. ರಾಮ ಅಲ್ಲೆ ದಂಗಾಗಿ ಹೋದ ತನ್ನ ಗೆಳೆಯನಿಂದ ಈ ಮಾತುಗಳನ್ನು ಅಪೇಕ್ಷಿಸಿರಲಿಲ್ಲ. ಆದರೆ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತಾನು ಮಾಡಬೇಕಾದ ಕೆಲಸವನ್ನು ಬಿಟ್ಟು ಬೇರೆಲ್ಲವನ್ನೂ ಮಾಡಿದ್ದ . ಎಲ್ಲರೂ ಅಷ್ಟೇ ಪುರಸ್ಕಾರಗಳು, ಲಾಭದ ಆಸೆಗೆ ಒಳಗಾಗದೆ ತಮ್ಮ ಕಾಯಕವನ್ನು ನಿಷ್ಠೆ ಇಂದ ಮಾಡಬೇಕು.

ಇಂಡೋ-ಅಮೇರಿಕನ್ ಶಾಲೆ

ಕರ್ಣ ತುಂಬಾ ಬುದ್ಧಿವಂತ, ಚಾಣಾಕ್ಷ, ಮೇಧಾವಿ.            ಒಂದಿನ ಗೆಳೆಯರೊಡಗೂಡಿ ಅವರ ಮಕ್ಕಳಿದ್ದ ಬೆಂಗಳೂರಿನ ಇಂಡೋ-ಅಮೇರಿಕನ್ ಶಾಲೆಗೆ ಹೋಗ್ತಾನೆ. ಎಷ್ಟೇ ಆಗಲಿ ಅವನದು ಮೇಷ್ಟ್ರ ಬುದ್ಧಿ ಅಲ್ಲೇ ಇದ್ದ ಹುಡುಗನನ್ನ ಕರೆದ. ಕರೆದು ಮಾತನಾಡಿದ, ಕರ್ಣ: ಏನಪ್ಪಾ, ಏನು ನಿನ್ನ ಹೆಸರು?! ಹುಡುಗ: ಚಂದನ್ ಕರ್ಣ: ಹೇಗಿದೆ ಶಾಲೆ?! ಹೇಗಿದೆ ವಾತಾವರಣ?! ಹುಡುಗ: ಶಾಲೆ ತುಂಬಾ ಚೆನ್ನಾಗಿದೆ, ಏನು ಬೇಕೋ ಎಲ್ಲಾ ಇದೆ. ಏನೂ ಕೊರತೆ ಇಲ್ಲ. ( ಹುಡುಗನ ಸ್ವಚ್ಚ ಕನ್ನಡ ಕೇಳಿ) ಕರ್ಣ: ಯಾವ ಊರು ನಿಂದು?! ಅಪ್ಪ-ಅಮ್ಮ ಏನ್ಮಾಡ್ತಿದಾರೆ?! ಹುಡುಗ: ಅವರು ಅಮೇರಿಕೆಯಲ್ಲಿದ್ದಾರೆ ದುಡಿಯುತ್ತಿದ್ದಾರೆ, ವರುಷಕ್ಕೊಮ್ಮೆ ಬರುತ್ತಾರೆ ನಾನೂ ಒಮ್ಮೆ ಹೋಗುತ್ತೇನೆ. ( ಸುಮ್ಮನಿರಲಾಗದ ಕರ್ಣ) ಕರ್ಣ: ಮಗೂ, ನಿಮ್ಮ ತಂದೆ-ತಾಯಿಯ ಬಗ್ಗೆ ನಿನ್ನ ಅನಿಸಿಕೆ ಏನು?! ಹುಡುಗ: ನಾನೂ ಜೀವನದಲ್ಲಿ ಒಂದು ಒಳ್ಳೆ ಕೆಲಸ ಹಿಡಿದು ಸಮಾಧಾನಕರ ಜೀವನ ನಡೆಸುವ ಸ್ಥಿತಿಗೆ ಬಂದ ಮೇಲೆ ಅವರನ್ನು ಇದೇ ಬೆಂಗಳೂರಿನ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ.             ಇಷ್ಟು ಹೇಳಿ ಹೊರಟು ಹುಡುಗ ಹೋದ, ಕರ್ಣ ಅಲ್ಲೇ ಅವಾಕ್ಕಾಗಿ ನಿಂತಿದ್ದ. ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳ ಅಳಿವು ಅವನ ಮುಂದೆ ಉದಾಹರಣೆಯಾಗಿ ನಿಂತಿತ್ತು. ಹುಟ್ಟಿನಿಂದ ೧೮ ವರ್ಷದವರೆಗಿನ ಆ ಹುಡುಗನ ಆ ಬೋರ್ಡಿಂಗ್ ಶಾಲೆಯ ಜೀವನ ಈ ಹಂತ ತಲುಪಿಸಿತ್ತು. ಎಲ್ಲಾ ಇದ್ದೂ ಅನಾಥನಾಗಿ ಬೆಳೆದಿದ್ದ, ತನಗೆ ಕಷ್ಟ ಇದ್

ಬಾಳು

"ಅನಿಶ್ಚಿತತೆ ದಾರಿ ಇಲ್ಲದ ಓಟ ಕನಸುಗಳ ಸಾಲು ಸಾಮಾಜಿಕ ಅನಿಷ್ಟ ಯಾರಿಲ್ಲದ ಬಾಳು ಬೆಂಬಿಡದ ಭೂತಗಳು" ಎಲ್ಲವೂ ಒಟ್ಟಾಗಿರೆ ಎಷ್ಟು ಓಡಿದರೇನು ಕೊನೆಯ ತಾಣ ತಿಳಿಯದಿರೆ ಏನು ಮಾಡಿ, ಸಿಗುವುದೇನು?!

ಭಾಸ

Image
ಸುಯ್ಯ್... ಸ್ಸ್.... ಎಂದು ಸದಾ ಸುತ್ತುತ್ತಿದ್ದ ಗಾಳಿ ಇಂದು ಸದ್ದಿಲ್ಲದೇ ನಿಂತು ಹೋಗಿದೆ | ಕೇಳದಿದ್ದ ಮೆಟ್ರೋ ಶಬ್ದ ಈಗ ನಾನೂ ಇಲ್ಲಿದ್ದೇನೆ ಎಂಬಂತೆ ಗರ್ವದಿಂದ ಗಿರಕಿ ಹೊಡೆಯುತ್ತಿದೆ | ಹುಚ್ಚು ಬಂದಂತೆ ಕುಣಿಯುತ್ತಿದ್ದ ಮರದ ರೆಂಬೆ ಕೊಂಬೆಗಳು ಶಾಕ್ ಹೊಡೆಸಿಕೊಂಡ ಕಾಗೆಗಳಂತೆ ಸೆಟೆದು ನಿಂತಿವೆ | ಅರೇ ನಾನಿರುವಲ್ಲಿಯೂ ಹಕ್ಕಿ-ಪಕ್ಷಿಗಳಿವೆ, ಅದೋ ಮದುವೆಯಾದ ಗಂಡಿನ ಕಷ್ಟವೂ  ಪಕ್ಕದ ಮನೆಯಿಂದ ಕೇಳುತಿದೆ | ಒಟ್ಟಿನಲ್ಲಿ, ಬಾಲ ಸುಟ್ಟ  ಬೆಕ್ಕಿನಂತೆ ತಿರುಗುತ್ತಿದ್ದ ಗಾಳಿಯು ಇಲ್ಲದಾಗಿ ಹೊಸತೇನೆನೋ ಕಾಣುತಿದ್ದರೂ, ಅತಿಮುಖ್ಯವಾದುದೇನೋ ಕಳೆದುಹೋಗಿರುವ ಭಾವ ಭಾಸವಾಗಿದೆ.

ಹೋರಾಟ

ಹುಟ್ಟು ಯಾಕಾಗತ್ತೆ ಸಾವು ಯಾವಾಗ ಬರತ್ತೆ?! ಯಾರ್ಗಾದ್ರೂ ಗೊತ್ತಾ?! ಎಲ್ಲಾ ಅನಿರೀಕ್ಷಿತ! ಜೀವನ ತುಂಬಾ ಏನೇನಕ್ಕೋ ಹೊಡೆದಾಟ ಹೋರಾಟ 😂       ನಾವು ನಡೆಯೋ ದಾರಿ ಸರೀನಾ?!  ತಪ್ಪಾ?! ಯಾರಿಗೂ ಗೊತ್ತಿಲ್ಲ ಆದ್ರೆ ಅದು ಎಲ್ಲಿಗೆ ಹೋಗತ್ತೆ?! ಏನಾಗತ್ತೆ?! ಅಂತ್ಯ ಏನು?! ಎಲ್ಲಾ ಪ್ರಶ್ನೆಗಳೇ.      ಇಷ್ಟು ದಿನ ಆಯ್ತು ಬರಿಯಕೇ ಆಗ್ಲಿಲ್ಲಾ ಏನನ್ನೂ 😂😂 ಯಾಕೆ ನಗ್ತಿದೀನಿ ಅಂತಾನಾ?! ಇದ್ನ ಯಾರು ಓದ್ತಾರೆ ಅಂತ ಹೇಳ್ಬೇಕು ನನಗೆ ನಾನೇ ಹೇಳ್ಕೊತಿದಿನಿ ಯಾಕಂದ್ರೆ ಇದ್ನ ನಾಳೆ ಓದೋನು ನಾನೇ 😃       ಓಕೆ, ಮುಂದೊಂದು ದಿನ ಏನೋ ಆಗ್ತೀನಿ ಅನ್ನೋ ಆಸೆ ಅಂತೂ ಇದೆ ಅದು ೧ವರ್ಷ ೫ ವರ್ಷ ೧೦ ವರ್ಷ ೩೦ ವರ್ಷ ಎಷ್ಟಾದ್ರೂ ಆಗ್ಬಹುದು ಸರಿ ಕಾಯ್ತೀನಿ, ಅದೇ ನಂಬಿಕೇಲಿ ಬರೀತೀನಿ.       ಕಾಲೇಜು ಮುಗೀತು ಎಲ್ಲಾ ಕಾಲೇಜಲ್ಲಿ ಕ್ಯಾಂಪಸ್ ಸೆಲೆಕ್ಟ್ ಆದವ್ರೂ ತಮ್ಮ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿನೂ ಆಯ್ತು ಆದ್ರೆ ನಾನಿಲ್ಲಿ ಅದೇ ಹಾಸ್ಟೆಲ್ ಅದೇ ಕಾಲೇಜ್ ಅದೇ ನೈಟ್ ಔಟ್ಸ್ ಇದೇ ನೆನಪಲ್ಲಿ ಇದೀನಿ.      ಈ ಯೂನಿವರ್ಸ್ ಅಲ್ಲಿ ನಮ್ಮ ಗ್ಯಾಲಾಕ್ಸಿ ಅದ್ರಲ್ಲಿ ಈ ಸೌರಮಂಡಲ ಅಲ್ಲಿ ಭೂಮಿ ಭಾರತ ಕನ್ನಡನಾಡು ನಾನು ನೀವು. ನಾನು ಇದರಲ್ಲಿ ತೃಣದಲ್ಲಿ ತೃಣಕ್ಕೆ ಸಮಾನ ಆದ್ರೆ ಈ ಜಗತ್ತು ಈ ಜೀವನ ಎಲ್ಲಾ ಎಷ್ಟು ಸುಂದರ 😍      ನಾನು ಕೆಲ್ಸ ಎಲ್ಲಾ ಹುಡುಕಿದೆ ಜಾಬ್ ಫೇರ್ ಅಟೆಂಡ್ ಮಾಡಿದೆ ಎಲ್ಲೂ ಸರಿ ಆಗ್ಲಿಲ್ಲ. ಮಹಾರಾಜ ಕಾಲೇಜಿನಲ್ಲಿ ನಡೆದ ಜಾಬ್ ಫ

ನನಗಾಗಿ

Image
ಬಿದ್ದಂತಿಹುದು ಆಲಿಕಲ್ಲು ಕನಸಿನಲಿ ಬಿತ್ತಿಹಳಾ ರಾಗವ ಮನಸಿನಲಿ ಇರುವ ಹೊತ್ತು ಜೊತೆಗಿದ್ದು,  ಕರಗಿ ಹೋದಾಳೆಂಬ ಭಯ | ಕಣ್ಬಿಟ್ಟರೆ ಮಳೆಯೋ ಮಳೆ ಹರಿದಿಹಳು ಕೈಸಿಗದೆ ಝರಿಯಾಗಿ-ನದಿಯಾಗಿ ಒಡೆದಿತ್ತು ಕನಸುಗಳು ನೂರಾಗಿ ಅವಳ ನೆನಪಾಗಿ ... !! *** ಕಪ್ಪು ಕಮಲವ ಅರಳಿಸಿ ನೋಟ ಬಂದೀತೆಂಬ ಹಂಬಲ ಎದುರಿದ್ದರೂ ಬಾರದ ನೋಟ ಎಲ್ಲೆಲ್ಲೂ ಕನಸುಗಳ ಹಾವಳಿ ಒಂದೂ ನನಸಾಗುವ ಸುಳಿವಿಲ್ಲ ಹುಚ್ಚುಕೋಡಿ ಮನಸಂತೂ ಹರಿದಿದೆ ಅರಸುತ ಹೃದಯದ ಪೀಠ ... !! ***                             ಚಿತ್ರ ಕೃಪೆ: ಗೂಗಲ್ :ಒಂಬಗೆಯ ಮೋಹ: ಇತ್ತಿಂದೇನೂ ಹೇಳದೇ, ಅತ್ತಿಂದೇನೂ ಇಲ್ಲದೆ, ನೋಡಿ ನೋಡಿ ಸಂತೃಪ್ತನಾಗಿ, ಇದ್ದ ನಾಲ್ಕ್ ವರುಷ ಮುಳುಗಿ, ಉಳಿದೆಣಿಕೆಯ ದಿನಗಳಲಿ, ಬೇಕೋ-ಬೇಡವೋ ಎಂಬ ದ್ವಂದ್ವದಲಿ, ಮನದಾಳದಲ್ಲಚ್ಚೆ ಒತ್ತಿಹ ಮೊದಲ ಪ್ರೀತಿಯ, ಸುಂದರ ಕನಸುಗಳ ರೂವಾರಿಯ, ಮೆಲುಕು ಹಾಕುತ್ತಾ ಸಾಗುವುದೋ?! ಹೇಳಿ ಏನಾದರೊಂದು ಮಾಡುವುದೋ?! . . ಕನಸುಗಳ ಮಾರಿ ಏಕಾಂಗಿಯಾಗುವುದೋ?! Note: Originally written in July month of 2016, Later merged to one post, while rearranging the articles. (17th June 2017)

ನನ್ನ ತಾಯಿ

Image
ಹೌದು, ಇವಳೇ ನನ್ನ ತಾಯಿ, ಕೊಳಕಾದ ಮತ್ತು ಹರಿದ ಸೀರೆ ಉಟ್ಟಿದ್ದಾಳೆ, ದಾರಿ-ದಾರಿಯಲ್ಲಿ ನಿಂತು ತನ್ನ ಮಕ್ಕಳನ್ನು ಕಾಯುತ್ತಿದ್ದಾಳೆ. ತನ್ನ ಅಸ್ತಿತ್ವವೇ ಅಲುಗಾಡುತ್ತಿದ್ದರೂ ತನ್ನ ಮಕ್ಕಳೂ- ತನ್ನಲ್ಲಿರುವ ಇತರರಿಗೂ ಆಲಂಗಿಸಿ ತುತ್ತಿಟ್ಟಿದ್ದಾಳೆ-ಸಾಕಿದ್ದಾಳೆ. ತನ್ನ ಕೈಲಾದ ಮಟ್ಟಿಗೆ ಆಕೆ  ಎಲ್ಲರನ್ನೂ ಪ್ರೀತಿಸಿದ್ದಾಳೆ, ಆದರೆ, ತನ್ನ ಮಕ್ಕಳೇ ಬೇರೆ ಪ್ರೀತಿಗೆ ವಾಲಿದ್ದಾರೆಂದರೆ ಹೇಗೆ ತಡೆದುಕೊಂಡಾಳು?! ಬಂದವರೊಂದಿಗೆ ಸೇರಿ ತನ್ನಮ್ಮನನ್ನೇ ಹೊರಹಾಕಿದರೆ ಆಕೆ ಏನು ಮಾಡಿಯಾಳು?! ಮಾತು ಕೊಟ್ಟವಳನ್ನು ಮರೆತು, ಪರರಿಗೆ ಗುಲಾಮರಾದದ್ದನ್ನು ಕಂಡು, ಕೊರಗಿದ್ದಾಳೆ - ಮರುಗಿದ್ದಾಳೆ. ರಸ್ತೆ-ರಸ್ತೆಯಲ್ಲಿ ತನ್ನನ್ನು ಉಳಿಸುವಂತೆ ಕೋರಿದ್ದಾಳೆ. ಆಕೆಗೇನು ನೋಡಿ ನೋಡಿ ಕೊನೆಗೆ, ಮರುಗಿ ಮರೆಯಾಗುತ್ತಾಳೆ. ಆಮೇಲೆ, ಬೆಲೆಕಟ್ಟಲಾಗದಿಹ ಅವಳ ಪ್ರಸ್ತುತಿ ಇಲ್ಲದಿರೆ, ನಾವೆಲ್ಲಿ?! ಈ ನಾಡೆಲ್ಲಿ?!

ಬಸ್ಸು-ಬೆಂಗಳೂರು

Image
ಜೀವನ ಎಷ್ಟು ಸುಂದರ ಅಲ್ವಾ, ಜೀವನ ಅನ್ನೋ ದಾರೀಲಿ ಅದೆಷ್ಟು ಅನುಭವ ಪಡಿತೀವಿ, ಆದೆಷ್ಟು ತರಹದ ಜನ ನೋಡ್ತೀವಿ, ಜೀವನದಲ್ಲಿ ಏಗೋದು ತುಂಬಾ ಕಷ್ಟ ಆದ್ರೆ ಅಷ್ಟೇ ಅದ್ಭುತ. ಎಷ್ಟೋ ಜನ ಬಾಳಲ್ಲಿ ತುಂಬಾ ದಿನ ಇರ್ತಾರೆ ಅನ್ಕೊಂಡವ್ರು ಸಡನ್ ಮಾಯ ಆಗ್ತಾರೆ, ಕಮ್ಮಿ ದಿನ ಇದ್ದವ್ರು ಪರ್ಮನೆಂಟ್ ಆಗ್ಬಿಡ್ತಾರೆ ಏನೋಪಾ ಇದೆಲ್ಲಾ ಜೀವನದ ಹುಚ್ಚಾಟಗಳು. ಯಾಕೆ ಇದೆಲ್ಲಾ ಅಂದ್ರೆ, ೧೮/೦೬/೨೦೧೭ ಕ್ಕೆ ಇ-ಲಿಟ್ಮಸ್ ಎಕ್ಸಾಮ್ ಬರಿಯಣ ಅಂತ ಬೆಂಗ್ಳೂರಿಗೆ ಹೋಗಿದ್ದೆ. ಬೆಳಿಗ್ಗೆ ೪:೩೦ ಕ್ಕೆ ಮೈಸೂರಿಂದ ಬಸ್ ಹತ್ತಿ ಹೊರಟೆ. ಸುಮಾರು ೭:೧೦ ಕ್ಕೆ ಸ್ಯಾಟಲೈಟ್ ಸ್ಟೇಷನ್ ಗೆ ಇಳ್ದು ಮ್ಯಾಪ್ ಹಾಕಿ ನೋಡಿದೆ, ೯ ಕಿ.ಮೀ. ಇತ್ತು ಬಾಲ್ಡ್ವಿನ್ ಹೈ ಸ್ಕೂಲ್ ಅಲ್ಲೇ ನನ್ ಎಕ್ಸಾಮ್ ಇದ್ದಿದ್ದು. ಅಲ್ಲಿಂದ ಮೇಲೆ ಇರೋ BMTC bus stand ಗೆ ಬಂದೆ. I was waiting for the bus no. K4 which was showing in Google maps. But it  didn't arrive, ಸೋ I asked a Tea stall holder, he said "ಹಿಂದೆ ಹೋಗಿ ಸಿಗತ್ತೆ ", ಅರೇ ಅಲ್ಲಿಂದಾನೆ ಬಂದಿದೀನಿ ಅಲ್ಲಿ ಮೆಜಸ್ಟಿಕ್ ಕನೆಕ್ಷನ್ ಬಸ್ ಬಿಟ್ರೆ ಬೇರೆ ಯಾವ ಬಸ್ಸು ಬರಲ್ಲ. ಸರಿ ಅಲ್ಲೇ ಬಂದ ಬಸ್ಸಿನ ಕಂಡಕ್ಟರ್ ಕೇಳ್ದೆ ಅವ್ರ್ ಹೇಳಿದ್ರೂ ಆನಂದ ಭವನ್ ಎದುರುಗಡೆ ಸ್ವಲ್ಪ ಮುಂದಿರೋ ಬಸ್ ಸ್ಟಾಪ್ಗೆ ಹೋಗಿ ಅಂತ. ಅಲ್ಲಿ ಹೋದೆ ಅಲ್ಲೂ ಯಾವ್ದ್ಯಾವ್ದೋ ಬಸ್ ಬರ್ತಿತ್ತು ಸರಿ ಅಂತ ಅ

"ನನ್ನ ಹಣತೆ"

Image
ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ. ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ ಶತಮಾನದಿಂದಲೂ. ನಡು ನಡುವೆ ಒಂದಷ್ಟು ಬೆಳಕು ಬೇಕೆಂದು ಅಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ, ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ ಸುಟ್ಟಿದ್ದೇವೆ. ‘ತಮಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ. ನನಗೂ ಗೊತ್ತು, ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ, ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ, ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು ಇನ್ನೂ ಬೇಕು ಎನ್ನುವ ಬಯಕೆ. ಆದರೂ ಹಣತೆ ಹಚ್ಚುತ್ತೇನೆ ನಾನೂ ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ. - ಜಿ ಎಸ್ ಶಿವರುದ್ರಪ್ಪ

ಕುಂತಿಬೆಟ್ಟ - ಒಂದು ರಾತ್ರಿ

Image
              ಎಕ್ಸಾಮ್ ಮುಗೀತು, ಕಾಲೇಜು ಮುಗೀತು, ಇನ್ನೇನು ಪ್ರಾಜೆಕ್ಟ್ ಸಬ್ಮಿಷನ್ ಆದ್ರೆ ಮೈಸೂರಿನ ಜೊತೆ ೪ ವರ್ಷದ ಸಂಬಂಧನೂ ಮುಗಿಯತ್ತೆ. ಈ ಎಂಜಿನಿಯರಿಂಗ್ ಲೈಫ್ ಅಲ್ಲಿ ಏನು ಇಷ್ಟ ಆಗದಿದ್ರೂ ಹಾಸ್ಟೆಲ್ ಲೈಫ್ ಮಾತ್ರ ಜೀವನಪರ್ಯಂತ ಮರೆಯೋಕಾಗಲ್ಲ. ಅಂತಾ ಸಿಹಿ-ಕಹಿ ನೆನಪುಗಳನ್ನು ಕೊಟ್ಟಿದೆ. ಓಕೆ ಈಗ ಮ್ಯಾಟ್ರಿಗೆ ಬರೋಣ, ೨೫ ಮೇ ೨೦೧೭ ಗುರುವಾರ ಹಾಸ್ಟೆಲ್ ಅಲ್ಲಿ ಏನ್ ಕೆಲ್ಸಾನೂ ಇಲ್ಲ ಮಾಡಕೆ ಎಲ್ಲಾದ್ರೂ ಹೋಗಣ ಅಂತ ಮಾತಾಡ್ಕೊಂಡು ಕುಂತಿಬೆಟ್ಟಕ್ಕೆ ಹೊರಟ್ವಿ ರಾತ್ರಿ ೧೦:೦೦ ಗಂಟೆ ಸುಮಾರಿಗೆ. ಬೆಳಗಿನ ಸುಂದರ ನೋಟ ಕುಂತಿ ಬೆಟ್ಟದಿಂದ             ನಮ್ಮ ಚಾರಣದ ಬಗ್ಗೆ ಹೇಳುವ ಮುನ್ನ ಕುಂತಿ ಬೆಟ್ಟದ ಬಗ್ಗೆ ಮಾಹಿತಿ ನೀಡಲೇಬೆಕು. ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್‌ರಾಕ್ಸ್‌ಎಂದೂ ಹೆಸರಾಗಿತ್ತು. ಶ್ರೀರಂಗಪಟ್ಟಣ-ಪಾಂಡವಪುರ ಹಾದಿಯಲ್ಲಿ ಒಂದು ಫೋಟೊ    

ಚೀಲ

Image
ಕನಸುಗಳು ಚೂರಾಗಿ, ದಾರಿಯೇ ಮರೆಯಾಗಿ, ಬದುಕಿನಾಸರೆಯೇ ಇಲ್ಲದಿರೆ, ಎತ್ತ ಹೋಗುವುದು?! ಎಲ್ಲಿ ಉಳಿಯುವುದು?!೧!! ಓಡುತ್ತಿದ್ದ ಕುದುರೆ - ಓಡೋಡಿ ಸಾಕಾಗಿ, ನಡೆದು - ಕುಂಟಿ - ಕುಸಿದು ಬಿದ್ದಿದೆ, ಎಬ್ಬಿಸುವ ಸ್ಫೂರ್ತಿಯೊಂದು ಬೇಕಾಗಿದೆ, ಆದರೆ ಅದೆಲ್ಲೂ ಕಾಣದಾಗಿದೆ!!೨!! ಎಂದಿಗೂ ಜೊತೆ ಬಾಳುವವರಿಗಿಂದು ಜೀವ ಬೇಡವಾಗಿದೆ, ಸ್ವಪ್ನ ಚೀಲ ಹೊತ್ತ ಮನವು ಹೆಗಲೊಂದಿಲ್ಲದೆ ಸೊರಗಿದೆ!!೩!! ಯಾರಿಗೇನೊಲಿದರೇನಂತೆ? ಕೊನೆಗುಳಿಯುವುದು ನಿನಗೆ ನೀನೆ, ಆದರೇನಂತೆ ಈ ನೆಲದಲ್ಲಿ, ಚೀಲವ ತೂರದಿರೆ ಉಳಿಗಾಲವಿಲ್ಲ!!೪!!

ಸಗ್ಗ

Image
ತಮದೊಳಗಿಂದರಳಿ ಬರುವಾತನ ಕಾದು ಕುಳಿತು, ಏರಿ, ಮೋಡ ಮೈ ತಾಕುವಂತಿರುವ ಅವುಗಳ ನಡುವೆ ನಿಂತು, ಕಂಡ ಬಂಡೆಯ ಮೇಲೆ ಅಂಗಾತ ಮಲಗಿ ಮೇಲ್ನೋಡಿದೊಡೆ ಸಗ್ಗಕ್ಕೆ ಮೂರೇ ಇಂಚು!!

ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯ, ಹೊಸ ಕನ್ನಂಬಾಡಿ

Image
  This article was published in Prajavani on 06 May 2019 in Reformed format Please Read it Here  click here     (Read Below)            ಫೈನಲ್ ಇಯರ್, ಕಾಲೇಜು ಬೇರೆ ಇಲ್ಲ ಸೋಮವಾರ ಏನ್ಮಾಡೋದು ಅಂತಾ ಇದ್ದಾಗ,  ನಾನು ನೋಡದೇ ಇರೋ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಣ ಅಂತ ಡಿಸೈಡ್ ಮಾಡಿದೆ. ನಾನು ಮತ್ತೆ ಫ್ರೆಂಡ್ ಹೊರಟ್ವಿ ನಂದೇ ಬೈಕ್ ಅಲ್ಲಿ. ಬೃಂದಾವನ ಗಾರ್ಡನ್             ನಮ್ ಕಾಲೇಜಿಂದ ಸುಮಾರು 25 ಕಿ.ಮೀ. ಇರ್ಬಹುದು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊರಟ್ವಿ. ಅದೇ ದಾರೀಲಿ ಮೊದ್ಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಹಂಗೆ ಮುಂದೆ ಹೋದ್ವಿ.  ಮೈಸೂರಿಂದ ೧೪ ಕಿ.ಮೀ. ದೂರ ಅನ್ಸುತ್ತೆ ಅಲ್ಲಿ ಕೆ.ಅರ್.ಎಸ್ ಡ್ಯಾಮ್ & ಬೃಂದಾವನ ಗಾರ್ಡನ್ ಇದೆ. ನೋಡಿ ೨ ವರ್ಷ ಆಗಿದ್ರಿಂದ ನೋಡನ ಅಂತ ಹೋದೆ. ಒಬ್ಬರಿಗೆ ೨೫/- ಟಿಕೆಟ್ಟು, ಯಪ್ಪಾ ಹೆವೀ ಬಿಸಿಲು ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು . ಬೇಗ ಹೋಗಿ ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಾಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ೫ ರೂ ಟಿಕೆಟ್ ಸಖತ್ ಇತ್ತು ಹೋದ್ರೆ ಮರಿದೇ ನೋಡ್ಬೇಕು. ತರ-ತರದ ಮೀನು ಇದ್ವು ಡೆಕೋರೇಷನ್ ಫಿಷಸ್, ನೋಡಿ ಆ ಬಿಸಿಲಿಗೆ ಸ್ವಲ್ಪ ತಂಪಾದಂಗೆ ಆಯ್ತು. ಮತ್ಸ್ಯಾಲಯದ ಗೋಲ್ಡ್ ಫಿಶ್           ಸರಿ, ಅ

ಪ್ರಕೃತಿಯ ಮಡಿಲು

Image
ಕಲ್ಲು ಮಣ್ಣಿನ ಬೃಹತ್ ರಾಶಿ ಇಂದ ಹೊರಬರುವ ಬೆಂಕಿ ಚೆಂಡು! ಬಿಸಿಲು ನೆಲಕ್ಕೆ ತಾಕದಂತೆ ತಡೆಯುವ ಭುವಿಗಂಟಿದ ಜೀವಂತ ಮರದ ತುಂಡುಗಳು! ಬಗೆ ಬಗೆಯ ಬಣ್ಣದ ವಿಧ ವಿಧದ ಗಾತ್ರದ ಓಡಾಡುವ - ಹಾರಾಡುವ ಪದಾರ್ಥಗಳು! ಮಳೆ ಸುರಿದು ಕಾನನದ ತುಂಬಾ ಹರಿಯುವ ಜೀವಜಲ!! ಸುಂದರ ಪ್ರಕೃತಿ ಮಾತೆಯ ಮಡಿಲ ಜೀವನ ♡

ನರನಿಲ್ಲದ ನೀರವ ಮೌನ

ಕಾಡು-ಕಾನನ ಹರಿವ ಝರಿ ಗಿರಿ-ಬೆಟ್ಟಗಳು, ಅರಣ್ಯವಾಸಿಗಳ ಪರಮ ಬೀಡು, ನರನಿಲ್ಲದ ನೀರವ ಮೌನ, ಕಾಲಚಕ್ರಕ್ಕೆ ಹೊಂದಿಕೊಂಡ ಜೀವರಾಶಿ, ಭೂ ಲೋಕ ಸ್ವರ್ಗ ಅಲ್ಲಿತ್ತು  !!೧!! ಗುಡ್ಡದಿಂದ ಅನತಿ ದೂರಕ್ಕೆ ಮನೆ ಮಾಡಿ, ಬೆಳಗೆದ್ದು ಸಗಣಿ ಬಾಚಿ ಹಾಲ್ಕರೆದು, ಹೊಟ್ಟೆಯ ಕೂಳಿಗೆ ಉಳುಮೆ ಮಾಡಿ, ಮತ್ತದೇ ಪ್ರಕೃತಿಯೇ ತನ್ನ ಜೀವನಾಡಿಯಾಗಿ, ಮನತುಂಬಿ ಸಂಸ್ಕೃತಿ ಪರಂಪರೆ ಬೆಳೆಸಿದ ಇವರೇ ಪುಣ್ಯಾತ್ಮರು  !!೨!! ಗಿರಿ ಪರ್ವತಗಳ ಸಾವರಿಸಿ ಮರಗಿಡಗಳ ತುಂಡರಿಸಿ, ಆಗಸವನ್ನೇ ಮುಟ್ಟುವ ಕೃತಕ ಪರ್ವತ ನಿರ್ಮಿಸಿ, ಬಣ್ಣ ಬಣ್ಣಗಳ ಅಲಂಕಾರ, ಗಾಜಿನಿಂದಲೇ ನಿರ್ಮಿತ ಮಹಲುಗಳು, ಮುಂದೊಬ್ಬ ಟೊಪ್ಪಿ-ಕೋಲಿನ ಕೈಗೊಂಬೆ, ಏನಿದ್ದರೂ ಎಲ್ಲಾ ಬೇಕೆನ್ನುವ ಹಪಾಹಪಿ, ಕೊನೆಗೂ ತೀರದ ಬವಣೆ !!೩!!

India - Farmer

Image
Only people who live in the cities are citizen’s!!.Media and government actions seems to be in that way that, people who live in rural part are uncivilized suggestively. Each year’s budget or any yojanas ( projects) is confined only to cities like Bengaluru, No projects have been to useful to villages, none of projects made keeping villages solely in mind. Every year any party coming to power just makes lame effort to solve problems of farmers across. Even during the terrible famine governments just care for supplying water in any means to the cities but never they support villagers or farmers .Dam-lakes were built keeping main objective of agriculture ,providing water to farming ,but those built dam-lakes are now confined for supplying water to cities. Farmers are quitting agriculture, leaving villages due to unavailability of feeds to chattels and even unavailability water for farming. Due to no income by any means farmers are committing suicide . Even after such so many suic

ಯುಗಾದಿ ಚಂದ್ರ

Image
ಕಾದು ಕಾತರದಿ ತಡಕಿ ಎಲ್ಲರೊಂದಾಗಿ ಹುಡುಕಿದರೂ ಸಿಗದೆ ತಟ್ಟನೆ ಮೋಡಗಳಡಿಯಿಂದ ಹೊರಬಂದು ಕೈ ಮುಗಿದು ನಮಸ್ಕರಿಸಿ ನೋಡುವಲ್ಲಿ ಹೊಸ ವರ್ಷಕೆ ಹೊಸ ಚೈತನ್ಯ - ಹುರುಪು ತುಂಬಿ ಮರೆಯಾಗಿದ್ದಾನೆ. ಅಲ್ಲಿದ್ದಾನೆ ಕಂಡರೆ ನಮಸ್ಕರಿಸಿ 😀

ರೈತ - ಭಾರತ

Image
ನಗರಗಳಲ್ಲಿ ವಾಸಿಸುವವರು ಮಾತ್ರ ನಾಗರಿಕರು, ಗ್ರಾಮೀಣ ಭಾಗದಲ್ಲಿ ವಾಸಿಸುವವರು ಅನಾಗರಿಕರೇನೋ ಎಂಬ ಭಾವ ಮೂಡಿಸುವಂತೆ ಮಾಧ್ಯಮ ಹಾಗೂ ಸರ್ಕಾರದ ನಡೆಗಳು ತೋರುತ್ತವೆ. ಪ್ರತೀ ಬಾರಿಯ ಬಜೆಟ್ ಅಥವಾ ಯಾವುದೇ ಯೋಜನೆಗಳಲ್ಲಾದರೂ ಬೆಂಗಳೂರಿಗಿಷ್ಟು, ಬೆಳಗಾವಿಗಿಷ್ಟು ಎಂಬ ಯೋಜನೆ ಕೇಳಿದ್ದೇವೆಯೇ ಹೊರತು ಆ ಹಳ್ಳಿಗಿಷ್ಟು ಈ ಹಳ್ಳಿಗಿಷ್ಟು ಎಂದು ಎಲ್ಲೂ ಕೇಳೋಲ್ಲ. ಪ್ರತಿ ಬಾರಿಯೂ ರೈತನನ್ನು ಮುಂದಿಟ್ಟುಕೊಂಡು ಕಣ್ಣೊರೆಸುವ ನಾಟಕವನ್ನು ಎಲ್ಲಾ ಪಕ್ಷಗಳು ಮಾಡಿಯೇ ತೀರುತ್ತವೆ.              ಭಯಾನಕ ಬರಗಾಲದ ಸಮಯದಲ್ಲೂ ನಗರಗಳಿಗೆ ನೀರೊದಗಿಸಲು ಸರಕಾರಗಳು ಮುಂದಾಗುತ್ತವೆಯೇ ಹೊರತು ಹಳ್ಳಿಗರ ಗೋಳು ಎಂದಿಗೂ ಕೇಳಲಾರವು. ಕೃಷಿಯೇ ಮುಖ್ಯ ಉದ್ದೇಶವಾಗಿ ನಿರ್ಮಿಸಿದ ಆಣೆಕಟ್ಟೆ-ಕೆರೆ ಗಳು ಈಗ ನಗರಗಳಿಗೆ ನೀರು ಸರಬರಾಜು ಮಾಡುವ ಆಗರಗಳಾಗಿವೆ. ರಾಸುಗಳಿಗೆ ಮೇವಿಲ್ಲದೇ, ಇತ್ತ ಬೆಳೆಯೂ ಇಲ್ಲದೇ, ಬೆಳೆಸಾಲ - ಕುಡಿವ ನೀರಿಗೂ ಹಾಹಾಕಾರವಾಗಿ ಹಳ್ಳಿ ತೊರೆದು ರೈತ ಗುಳೇ ಹೊರಟಿದ್ದಾನೆ. ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾನೆ. ಇದೆಲ್ಲದರ ಮೇಲೂ ಸರಕಾರಗಳಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಮಹಾನಗರಗಳ ಹೆಸರು ಕಾಣಲು ಉತ್ಸಾಹ. ಸಾಯುವವರು ಸತ್ತರೆ ನಮಗೇನು ನಷ್ಟ ಎಂಬಂತೆ ಅವರ ಭಾವ.              ಇದನ್ನೇ ನೋಡುತ್ತಾ ಬೆಳೆಯುವ ಯುವ ಜನತೆ ಮುಂದೊಂದು ದಿನ ಊರ ಬಾಗಿಲು ಮುಚ್ಚಿ ನಗರ ಸೇರಿದರೆ ಅಚ್ಚರಿಯೇನಿಲ್ಲ.  ಎಲ್ಲರನ್ನೂ ತುಂಬಿಸಿಕೊಳ್ಳುವ ನಗರಗಳ ಗತಿ

ಇಳೆ-ಮಳೆ

Image
ಕಾದು ಕಾದು ಬಳಲಿ ಬೆಂಡಾಗಿ ರೋಸಿ ಹೋದ ಜೀವ, ಮಳೆಯೆಂಬ ಪುನರ್ಜನ್ಮ ಇಳೆ ತಣಿಸಿದಾಗ, ಅದ ಮುಟ್ಟಿ ಕಣ್ಣಿಗೊತ್ತಿಕೊಂಡ  ರೈತನ ಸಂತಸಕ್ಕೆ ಸರಿಸಮನಾದ ತೃಪ್ತಿ ಮತ್ತೊಂದಿಲ್ಲ. 💗

ಭಾರತ - ಕನ್ನಡ

Image
೧೮೫೭ ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭ ಆಯ್ತು. ಇದಾದ ನಂತರ ಅನೇಕ ಚಳುವಳಿಗಳು, ದಂಗೆಗಳು ನಡೆದು ಹೋದುವು. ಅಸಂಖ್ಯ ಹೊರಟಗಾರರು ನಡೆಸಿದ ಅವಿರತ ಪ್ರಯತ್ನದ ಫಲವಾಗಿ ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ತು. ಆದರೂ ಅಖಂಡ ಭಾರತದ ಕನಸು ಕನಸಾಗಿಯೇ ಉಳಿಯುವಂತಾಯ್ತು. ಇನ್ನು  ಸಂವಿಧಾನ ಅಸ್ತಿತ್ವಕ್ಕೆ ಬಂದದ್ದು ೧೯೫೦ ರಲ್ಲಿ. ಭಾಷಾವಾರು ಪ್ರಾಂತ್ಯಗಳ ರಚನೆ ಆಗಿದ್ದು ೧೯೫೬ ರಲ್ಲಿ.                ಇದೇ ರೀತಿ ಕನ್ನಡ ಭಾಷೆ, ಸುತ್ತಲಿನ ವಾತಾವರಣ ಹಾಗೂ ಅನೇಕ ನಿರ್ದಿಷ್ಟ ಕಾರಣಗಳೊಂದಿಗೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉಗಮವಾಯಿತು, ಕಾಲಾಂತರದಲ್ಲಿ ಇದು ಕರ್ನಾಟಕ ರಾಜ್ಯವೂ ಆಯ್ತು. ಕನ್ನಡ ಈಗ ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದು. ಸುಮಾರು ೧೭೦೦ ವರ್ಷಗಳಿಗೂ ಹಳೆಯ ಇತಿಹಾಸ ಹೊಂದಿರುವ ಭಾಷೆ. ತನ್ನ ಸಾಹಿತ್ಯವನ್ನು ವಿವಿಧ ಪ್ರಕಾರಗಳಲ್ಲಿ ಸಂಪನ್ನವಾಗಿಸಿಕೊಂಡಿದೆ.                   ೧೯೪೭ ಕ್ಕಿಂತ ಹಿಂದೆ ತಮ್ಮ ದೇಶ ಯಾವುದು ಎಂಬುದಕ್ಕೆ ಉತ್ತರಗಳೇ ಬೇರೆ ಇದ್ದವೋ ಏನೋ.! ಆದರೆ ಬ್ರಿಟಿಷರು ತೊಲಗಿದ ನಂತರ ಇದು ತಾಯಿ ಭಾರತಾಂಬೆಯ ಆಸ್ಥಾನವಾಯಿತು. ಮೊದಲ ದಂಗೆಯಿಂದ ಇಲ್ಲಿಯವರೆಗೂ ಸುಮಾರು ೧೫೦ ವರ್ಷಗಳಾಗಿರಬಹುದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಾರ ಏಕೋ ಕ್ರಮೇಣ ಬದಲಾಗುತ್ತಿರುವಂತೆ ತೋರುತ್ತಿದೆ. ಹಿಂದಿ ಬಹುಭಾಷಿಕರಿರುವ ನಮ್ಮ ದೇಶದಲ್ಲಿ, ಹಿಂದಿಯೇತರ ಭಾಷಾ ರಾಜ್ಯಗಳಲ್ಲಿ

ರಾಜಕೀಯ ಬಿಕ್ಕಟ್ಟು

Image
ನಮ್ಮದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲವೂ ಪ್ರಜೆಯ ಆಯ್ಕೆಯಂತೆಯೇ ನಡೆಯಬೇಕು. ಆದರೆ ಇದು ವಾಸ್ತವವಾಗುವುದು ಮಾತ್ರ ಕೆಲವೊಮ್ಮೆ.  ಹಲವು ಬಾರಿ ಆಯ್ಕೆ ಮಾಡುವಲ್ಲಿಗೆ ಅಂತ್ಯವಾಗುವ ಮತದಾರನ ಅಧಿಕಾರ. ಇದಕ್ಕೆ ಸಾಕ್ಷಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟುಗಳು.             ಸದಾ ಆರೋಪ ಪ್ರತ್ಯಾರೋಪ, ದಬ್ಬಾಳಿಕೆ, ಭ್ರಷ್ಟಾಚಾರ, ಹಗರಣ, ಅಧಿಕಾರ ದುರ್ಬಳಕೆ ಮತ್ತು ಇನ್ನಿತರೆ ಹತ್ತು ಹಲವು ಆಯಾಮಗಳೇ ನಮ್ಮ ಸದ್ಯದ ರಾಜಕೀಯ ಕಾರ್ಯವೈಖರಿಯ ಸಾಧನಗಳು. ಬೇಡದಿರುವ ಯೋಜನೆಗಳು, ಉಪಯುಕ್ತ ಯೋಜನೆಗಳ ಮೂಲೆಗುಂಪು, ನೆಪಮಾತ್ರದ ಅಧಿವೇಶನಗಳು, ಅಭಿವೃದ್ಧಿಗಿಂತ ಪ್ರಕೃತಿ ನಾಶಕ್ಕೆ ಒತ್ತು  ಹಾಗಂತ ಆಡಳಿತ ಪಕ್ಷಗಳೇ ಹೊಣೆಯಾಗಬೇಕಿಲ್ಲ. ಪರೋಕ್ಷವಾಗಿ ಇತರ ಪಕ್ಷಗಳು ಸಮಸ್ತ ನಾಗರಿಕರು ಸಮಾನ ಹೊಣೆಗಾರರು.             ರಾಜಕೀಯ ಬಿಕ್ಕಟ್ಟು ಒಂದು ರೀತಿ ಭಾರತದ ಸಂವಿಧಾನಕ್ಕೇ ಅಪಮಾನ ಇದ್ದಂತೆ. ವಿಶ್ವದಲ್ಲೇ  ಅತೀ ದೊಡ್ಡ ಸಂವಿಧಾನ ಇದಾಗಿದ್ದು ಅಂತಹ ಸಂವಿಧಾನವನ್ನೂ ಮೀರುವಂತೆ ನಮ್ಮ ಕೆಲವು ಚುನಾಯಿತ ರಾಜಕಾರಣಿಗಳು  ಕೆಲವೊಮ್ಮೆ ವರ್ತಿಸಿಬಿಡುತ್ತಾರೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿನ ತಂದೆ ಮಗನ ನಡುವಿನ ರಾಜಕೀಯ ಬಿಕ್ಕಟ್ಟು ಮತ್ತು  ಪಕ್ಕದ ತಮಿಳುನಾಡಿನ ಇತ್ತೀಚಿನ ಬೆಳವಣಿಗೆಗಳು. ಪ್ರಜೆಗಳು, ಯಾರಲ್ಲಿದೆ ಅಧಿಕಾರ ಎಂಬ ವಿಷಯ ಅರಿಯದೆ ಕಂಗಾಲಾಗುತ್ತಾರೆ. ಪರಸ್ಪರ ಉಚ್ಛಾಟನೆ -ಬೀದಿ ರಂಪಾಟಗಳೊಂದಿಗೆ ಓಟಿಗನ ಮೇಲೆ ಎಳ್ಳು

ಆಸೆ-ಹೊಸತು

ಅನಿಸಿದ್ದೆಲ್ಲಾ ಸಿಕ್ಕರೆ ಆಸೆಗೆ ಬೆಲೆಯೆಲ್ಲಿ ☺ ***** November 11, 2016 ಇರುವವೇ ಹುಳು ಹಿಡಿದುಕೊಂಡಿರುವಾಗ, ಹೊಸತು ಪದಕ್ಕೆ ಅರ್ಥವೆಲ್ಲಿ ..?