ವರುಷ

(Image Courtesy: Google)


ವರುಷ ಕಳೆದಿದೆ-ಹೊಸತು ಹೊಸಿಲಲ್ಲಿದೆ,
ಸಿಹಿ-ಕಹಿಗಳ ಸಮಾಗಮವೇ ಆದ ವರುಷ
ಕಹಿಯೊಂದ ಬಿಟ್ಟು ಸಿಹಿಯೆಲ್ಲಾ ಹೀರಿ ಹಿಂದೆ ಸರಿದಿದೆ,

ಇದ್ದ ಸಂತಸಗಳೇನಿಲ್ಲದಿದ್ದರೂ
ಅರಿಯದ ಹೊಸ ವರುಷದಲಿ 
ಏನಾಗಬಹುದೋ ಎಂಬ ಆತಂಕವಂತೂ ಇದೆ,

ಎಲ್ಲರೊಂದಿಗೆ ಪ್ರಾರಂಭವಾಗಿದ್ದ ವರುಷ
ಒಂಟಿ ಮಾಡಿ ಕಳೆದು ಹೋಗುತ್ತಿದೆ,
ಇನ್ನಾಸಕ್ತಿಗಳೇನು ಇಲ್ಲ
ಹರುಷ ಇಲ್ಲದಿರಲೂ ಪರವಾಗಿಲ್ಲ
ಕಹಿಯ ಉಡುಗೊರೆ ಬೇಡ,

ಕನಸುಗಳ ವ್ಯರ್ಥ ಪ್ರಯತ್ನವೇ ಮೇಲೋಗರವಾಗಿ
ಮನದಲ್ಲೇನೂ ಆಸೆ ಇಲ್ಲ, ಇರುವ ಬದುಕೇ
ಸಮಾಧಾನವಾಗಿ ಮುನ್ನಡೆದರೆ ಅದುವೇ
ನನ್ನ ತೃಪ್ತಿ.


***********************

29-ಡಿಸೆಂಬರ್-2017

(Image Courtesy:Google)

ಮನದುಂಬಿ ನಿಂತಿದೆ
ಕಟ್ಟೆಯೊಡೆದರೇನಾಗಬಹುದೋ ಕಾಣೆ,
ಇಷ್ಟು ದಿನ ಅನಿಸದ ನೋವು
ದಡಾರನೆ ವರ್ಷಾಂತ್ಯಕ್ಕೆ ನುಗ್ಗಿದೆ,
ತಣ್ಣಗಿದ್ದ ಮನವು ಕಳೆದೆಲ್ಲವ
ನೆನೆ-ನೆನೆದು ಮೌನದಿ ಗೋಗರೆದಿದೆ,
ಕಳೆದುಹೋದ ಕಾಲೇಜು-ಹಾಸ್ಟೆಲ್ಲು-ಆ ಊರು
ಏನೂ ಇಲ್ಲದ ಈಗಿನ ಸ್ಥಿತಿಗೆ ಅತೀವ ವಿರೋಧಿಯಾಗಿದೆ,
ಆ ಸುಸಮಯ ಮೆಲುಕು ಹಾಕಲೂ
ಗತಿಯಿಲ್ಲದ ತಿರುಕನಂತಾಗಿ
ಪ್ರಕೃತಿಯೇ ನನ್ನ ವಿರೋಧಿ ಎಂಬ ಭಾಸವಾಗಿದೆ.



Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ