ಬಸ್ಸು-ಬೆಂಗಳೂರು
ಜೀವನ ಎಷ್ಟು ಸುಂದರ ಅಲ್ವಾ, ಜೀವನ ಅನ್ನೋ ದಾರೀಲಿ ಅದೆಷ್ಟು ಅನುಭವ ಪಡಿತೀವಿ, ಆದೆಷ್ಟು ತರಹದ ಜನ ನೋಡ್ತೀವಿ, ಜೀವನದಲ್ಲಿ ಏಗೋದು ತುಂಬಾ ಕಷ್ಟ ಆದ್ರೆ ಅಷ್ಟೇ ಅದ್ಭುತ. ಎಷ್ಟೋ ಜನ ಬಾಳಲ್ಲಿ ತುಂಬಾ ದಿನ ಇರ್ತಾರೆ ಅನ್ಕೊಂಡವ್ರು ಸಡನ್ ಮಾಯ ಆಗ್ತಾರೆ, ಕಮ್ಮಿ ದಿನ ಇದ್ದವ್ರು ಪರ್ಮನೆಂಟ್ ಆಗ್ಬಿಡ್ತಾರೆ ಏನೋಪಾ ಇದೆಲ್ಲಾ ಜೀವನದ ಹುಚ್ಚಾಟಗಳು.
ಯಾಕೆ ಇದೆಲ್ಲಾ ಅಂದ್ರೆ, ೧೮/೦೬/೨೦೧೭ ಕ್ಕೆ ಇ-ಲಿಟ್ಮಸ್ ಎಕ್ಸಾಮ್ ಬರಿಯಣ ಅಂತ ಬೆಂಗ್ಳೂರಿಗೆ ಹೋಗಿದ್ದೆ. ಬೆಳಿಗ್ಗೆ ೪:೩೦ ಕ್ಕೆ ಮೈಸೂರಿಂದ ಬಸ್ ಹತ್ತಿ ಹೊರಟೆ. ಸುಮಾರು ೭:೧೦ ಕ್ಕೆ ಸ್ಯಾಟಲೈಟ್ ಸ್ಟೇಷನ್ ಗೆ ಇಳ್ದು ಮ್ಯಾಪ್ ಹಾಕಿ ನೋಡಿದೆ, ೯ ಕಿ.ಮೀ. ಇತ್ತು ಬಾಲ್ಡ್ವಿನ್ ಹೈ ಸ್ಕೂಲ್ ಅಲ್ಲೇ ನನ್ ಎಕ್ಸಾಮ್ ಇದ್ದಿದ್ದು. ಅಲ್ಲಿಂದ ಮೇಲೆ ಇರೋ BMTC bus stand ಗೆ ಬಂದೆ. I was waiting for the bus no. K4 which was showing in Google maps. But it didn't arrive, ಸೋ I asked a Tea stall holder, he said "ಹಿಂದೆ ಹೋಗಿ ಸಿಗತ್ತೆ ", ಅರೇ ಅಲ್ಲಿಂದಾನೆ ಬಂದಿದೀನಿ ಅಲ್ಲಿ ಮೆಜಸ್ಟಿಕ್ ಕನೆಕ್ಷನ್ ಬಸ್ ಬಿಟ್ರೆ ಬೇರೆ ಯಾವ ಬಸ್ಸು ಬರಲ್ಲ. ಸರಿ ಅಲ್ಲೇ ಬಂದ ಬಸ್ಸಿನ ಕಂಡಕ್ಟರ್ ಕೇಳ್ದೆ ಅವ್ರ್ ಹೇಳಿದ್ರೂ ಆನಂದ ಭವನ್ ಎದುರುಗಡೆ ಸ್ವಲ್ಪ ಮುಂದಿರೋ ಬಸ್ ಸ್ಟಾಪ್ಗೆ ಹೋಗಿ ಅಂತ.
ಅಲ್ಲಿ ಹೋದೆ ಅಲ್ಲೂ ಯಾವ್ದ್ಯಾವ್ದೋ ಬಸ್ ಬರ್ತಿತ್ತು ಸರಿ ಅಂತ ಅಲ್ಲಿದ್ದ ಒಬ್ಬರ್ನ ಕೇಳ್ದೆ, ಅವ್ರು ಕೆ ಆರ್ ಮಾರ್ಕೆಟ್ ಹೋಗಿ ಅಲ್ಲಿಂದ ರಿಚ್ಮಂಡ್ ಟೌನ್ ಗೆ ಬಸ್ ಇರತ್ತೆ ಅಂದ. ಅದು ನಂಗೆ ಎಲ್ಲಿಂದ ಅರ್ಥ ಆಗ್ಬೇಕು, ಸರಿ ಅಂದು ಈ ಕಡೆ ಬಂದೆ, ಅವ್ನಿಗೆ ಗೊತ್ತಾಯ್ತು ನಂಗೆ ಅರ್ಥ ಆಗಿಲ್ಲ ಅಂತ ಆಮೇಲೆ ಅವ್ನೆ ಕರ್ದು ಜೊತೆಗೆ ಕರ್ಕೊಂಡು ಬಸ್ ಅಲ್ಲಿ ಹೋಗಿ ಮಾರ್ಕೆಟ್ ವರ್ಗೂ. ಎಕ್ಸಾಮ್ ಗೆ ಲೇಟ್ ಆಗತ್ತೆ ಅಂತ ಅಲ್ಲಿಂದ ಆಟೋದಲ್ಲಿ ಹೊರ್ಟು ನನ್ನ ಆ ಸ್ಕೂಲ್ ಹತ್ರ ಬಿಟ್ಟು ನಾನು ದುಡ್ಡು ಕೊಟ್ರೂ ಪಾಪ ಇಟ್ಕೋಳಿ ಪರ್ವಾಗಿಲ್ಲ ಅಂತ ತಾನೆ ದುಡ್ಡು ಕೊಟ್ಟು ಎಕ್ಸಾಮ್ ಚೆನ್ನಾಗಿ ಮಾಡಿ ಅಂತ ಹೇಳಿ ಹೊರಟ. ಹೆಸರು ಕರಿಯಪ್ಪ ಸ್ವಲ್ಪ ಕುಂಟುತಾ ಇದ್ದ ವಯಸ್ಸು ೨೪-೨೫ ವರ್ಷ ಆಸ್ಪತ್ರೆಲೀ ಏನೋ ಕೆಲ್ಸ ಮಾಡಿ ಜೀವನ ಸಾಗಿಸ್ತಾರಂತೆ.
ಎಕ್ಸಾಮ್ ಮುಗೀತು ರಿಚ್ಮಂಡ್ ಟೌನ್ ಬಸ್ ಸ್ಟಾಪ್ ಗೆ ಬಂದೆ ಅಲ್ಲೊಂದಿಷ್ಟು ಜನ ಇದ್ರು ಸ್ವಲ್ಪ ಹೊತ್ತು ನೋಡಿದೆ ಯಾವ ಬಸ್ಸು ಸ್ಯಾಟಲೈಟ್ ಕಡೆಗೆ ಬರ್ಲಿಲ್ಲ. ಅಲ್ಲೇ ಇದ್ದ ಒಬ್ಬ ಆಂಕಲ್ ನ ಕೇಳ್ದೆ ಅವ್ನು ಗೊತ್ತಿಲ್ಲ ಅಂದ. ಸ್ವಲ್ಪ ಹೊತ್ತಾದ್ಮೇಲೆ ಅಲ್ಲಿಗೆ ಒಬ್ಬ ನನ್ ವಯಸ್ಸವ್ನೇ ಸ್ಟೂಡೆಂಟ್ ಬಂದು ನನ್ ಹತ್ರ "ಮೆಜೆಸ್ಟಿಕ್ ಹೇಗೆ ಹೋಗದು"(ತಮಿಳಲ್ಲಿ) ಕೇಳ್ದಾ ನಾನಿನ್ನೂ ಬಾಯಿ ಬಿಡೋಕು ಮೊದ್ಲೇ ಪಕ್ಕದಲ್ಲಿದ್ದ ಆಂಕಲ್ ಇಡೀ ಬೆಂಗಳೂರು ಮ್ಯಾಪ್ನೇ ಎಕ್ಸ್ ಪ್ಲೈನ್ ಮಾಡ್ಬಿಟ್ರು. ಇದ್ನೆಲ್ಲಾ ನೋಡ್ತಿದ್ದ ಒಬ್ಬ ಮುಸ್ಲಿಂ ಮಹಿಳೆ ತಾನು ಬಸ್ ಹತ್ತುವಾಗ ನಂಗೆ K4 ಬಸ್ ಬರುತ್ತೆ ಆ ಬಸ್ ಅಲ್ಲಿ ಹೋಗಿ ಅಂದು ಬಸ್ ಹತ್ತಿ ಹೊರಟ್ರು.
ಆ ಬಸ್ ಹಿಂದೇನೇ ಕೆ-೪ ಬಸ್ ಬಂತು, ಬಸ್ ಹತ್ತಿ ಸ್ಯಾಟಲೈಟ್ ಬಸ್ಟಾಂಡ್ ಹೋಗಿ ಅಲ್ಲಿಂದ ಮೈಸೂರಿಗೆ ಬಂದೆ. ಇನ್ನು ಬರಿಯಕೆ ಮನ್ಸಿಲ್ಲ ಕಂಕ್ಲ್ಯೂಷನ್ ನೀವೇ ತಿಳ್ಕೊಳಿ.
Comments
Post a Comment