ಪುರಸ್ಕಾರ

ಕರ್ಣನ ಗೆಳೆಯ ರಾಮ ಒಂದು ಪ್ರಾಥಮಿಕ ಶಾಲೆಯ ಶಿಕ್ಷಕ,
ಒಮ್ಮೆ ಅವನು ತನಗೆ ದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಇರುವುದಾಗಿಯೂ,
ತಾನು ಅಲ್ಲಿಗೆ ಹೋಗುತ್ತಿರುವುದಾಗಿಯೂ ಹೇಳಿದ್ದ.
ಹೋಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದದ್ದೂ ಆಯ್ತು ವಾಪಾಸ್ ಬಂದ. ಬಂದ ನಂತರ ಕರ್ಣನಿಗೆ ಒಂದು ದಿನ ಸಿಕ್ಕ ರಾಮನು ಅವನನ್ನು ತನ್ನ ಮನೆಗೆ ಕರೆದೊಯ್ದು ಟೀ ಕುಡಿಸಿದ ಸುಮ್ಮನಿರಲಾರದ ಕರ್ಣ ಎಲಿ, ನಿನಗೆ ಪ್ರಶ್ತಸ್ತಿ ಕೊಡಲು ಕಾರಣವೇನು ಹೇಳು ಎಂದ.
ರಾಮ ತನ್ನ ಕೋಣೆಯಿಂದ ಎರಡು ಬೃಹತ್ತಾದ ಫೈಲುಗಳನ್ನು ಹೊತ್ತು ತಂದ. ಅದನ್ನ ತೆರೆದು "ಇಷ್ಟು ಕಡೆ ಸಭೆ ಮಾಡಿದ್ದೇನೆ, ಇಷ್ಟು ಕಾರ್ಯಕ್ರಮ ಆಯೋಜಿಸಿದ್ದೇನೆ, ಪ್ರಶಸ್ತಿ ನೀಡಿದ್ದೇನೆ, ರೈತ ಸಂವಾದಗಳನ್ನು ಮಾಡಿದ್ದೇನೆ, ಇತ್ಯಾದಿ" ಇದನ್ನೆಲ್ಲಾ ನೋಡಿ ಕರ್ಣ ಮಡಚಿ ಪಕ್ಕಕ್ಕಿಟ್ಟು,

ಕರ್ಣ: ನಿನ್ನ ವೃತ್ತಿ ಏನು?!

ರಾಮ: ಪ್ರಾಥಮಿಕ ಶಾಲಾ ಶಿಕ್ಷಕ.

ಕರ್ಣ: ನಿನ್ನ ಶಾಲೆಗೆ ಮತ್ತು ನಿನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಏನು ಮಾಡಿದ್ದೀಯೇ ತೋರಿಸು.

ರಾಮ ಅಲ್ಲೆ ದಂಗಾಗಿ ಹೋದ ತನ್ನ ಗೆಳೆಯನಿಂದ ಈ ಮಾತುಗಳನ್ನು ಅಪೇಕ್ಷಿಸಿರಲಿಲ್ಲ. ಆದರೆ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತಾನು ಮಾಡಬೇಕಾದ ಕೆಲಸವನ್ನು ಬಿಟ್ಟು ಬೇರೆಲ್ಲವನ್ನೂ ಮಾಡಿದ್ದ. ಎಲ್ಲರೂ ಅಷ್ಟೇ ಪುರಸ್ಕಾರಗಳು, ಲಾಭದ ಆಸೆಗೆ ಒಳಗಾಗದೆ ತಮ್ಮ ಕಾಯಕವನ್ನು ನಿಷ್ಠೆ ಇಂದ ಮಾಡಬೇಕು.

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ