ದಿಕ್ಕು
(Courtesy: Google Images)
ಏನಾಗಿದೆಯೋ ತಿಳಿಯದು ಮನವು
ಕಾರಣಗಳು ನೂರು ಮನ ಹಿಂಡಲು,
ಆಪ್ತವಾದೊಂದು ಹಂಗು ಸಾಕು
ಮನ ಕಾದಿದೆ ಆ ಒಂದು ಕ್ಷಣ ಬರಬಹುದೆಂದು,
ಬಾಗಿಲು ತೆರೆದಿದೆ ದನಿ ಒಣಗಿದೆ
ಪುಟ ತೆರೆದಿದೆ, ಖಾಲಿತನ ಹಿಂಡುತ್ತಿದೆ.
ಎದೆ ಹೊತ್ತಿ ಉರಿದಿದೆ
ಉಸಿರು ಬತ್ತಿ ಸಾಯುತಿದೆ,
ದಿಕ್ಕು ಬದಲಾದಂತಾಗಿ
ಹಾದಿಯೇ ಬಯಲಾದಂತಾಗಿದೆ,
ಏನಾದರೇನಂತೆ,
ಈಗ ನನ್ನ ದಾರಿ ಕಂಡಿದೆ
ಅದೋ ಕೈ ಬೀಸಿ ಬಾ ಎಂದು ಕರೆದಿದೆ!!
ಮಳೆಯಿಲ್ಲದ ಮುಗಿಲಲಿ
ಮೌನವೇ ನನ್ನ ಸ್ನೇಹಿಯಾಗಿದೆ,
ನಾ ಬರುತಿರುವೆ ದೂರ ಹೋಗದಿರು,
ಅಲ್ಲೇ ನಿಂತಿರು ನನ್ನನಾಲಂಗಿಸಲು!!
Comments
Post a Comment