ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯ, ಹೊಸ ಕನ್ನಂಬಾಡಿ

 

This article was published in Prajavani on 06 May 2019 in Reformed format Please Read it Here click here    (Read Below)

           ಫೈನಲ್ ಇಯರ್, ಕಾಲೇಜು ಬೇರೆ ಇಲ್ಲ ಸೋಮವಾರ ಏನ್ಮಾಡೋದು ಅಂತಾ ಇದ್ದಾಗ,  ನಾನು ನೋಡದೇ ಇರೋ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಣ ಅಂತ ಡಿಸೈಡ್ ಮಾಡಿದೆ. ನಾನು ಮತ್ತೆ ಫ್ರೆಂಡ್ ಹೊರಟ್ವಿ ನಂದೇ ಬೈಕ್ ಅಲ್ಲಿ.


ಬೃಂದಾವನ ಗಾರ್ಡನ್ 

          ನಮ್ ಕಾಲೇಜಿಂದ ಸುಮಾರು 25 ಕಿ.ಮೀ. ಇರ್ಬಹುದು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊರಟ್ವಿ. ಅದೇ ದಾರೀಲಿ ಮೊದ್ಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಹಂಗೆ ಮುಂದೆ ಹೋದ್ವಿ.  ಮೈಸೂರಿಂದ ೧೪ ಕಿ.ಮೀ. ದೂರ ಅನ್ಸುತ್ತೆ ಅಲ್ಲಿ ಕೆ.ಅರ್.ಎಸ್ ಡ್ಯಾಮ್ & ಬೃಂದಾವನ ಗಾರ್ಡನ್ ಇದೆ. ನೋಡಿ ೨ ವರ್ಷ ಆಗಿದ್ರಿಂದ ನೋಡನ ಅಂತ ಹೋದೆ. ಒಬ್ಬರಿಗೆ ೨೫/- ಟಿಕೆಟ್ಟು, ಯಪ್ಪಾ ಹೆವೀ ಬಿಸಿಲು ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು . ಬೇಗ ಹೋಗಿ ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಾಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ೫ ರೂ ಟಿಕೆಟ್ ಸಖತ್ ಇತ್ತು ಹೋದ್ರೆ ಮರಿದೇ ನೋಡ್ಬೇಕು. ತರ-ತರದ ಮೀನು ಇದ್ವು ಡೆಕೋರೇಷನ್ ಫಿಷಸ್, ನೋಡಿ ಆ ಬಿಸಿಲಿಗೆ ಸ್ವಲ್ಪ ತಂಪಾದಂಗೆ ಆಯ್ತು.

ಮತ್ಸ್ಯಾಲಯದ ಗೋಲ್ಡ್ ಫಿಶ್

          ಸರಿ, ಅಲ್ಲಿಂದ ೮ ಕಿ.ಮೀ. ದೂರದಲ್ಲಿ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇರೋದು. ೩:೩೦ ಸುಮಾರಿಗೆ ಇಲ್ಲಿಂದ ಹೊರಟು ದಾರಿ ಗೊತ್ತಿಲ್ದೆ ಎಲ್ಲೆಲ್ಲೋ ಸುತ್ತಿ. ಹೊಸ ಕನ್ನಂಬಾಡಿ ಅನ್ನೋ ಊರು ಅಲ್ಲಿಂದ ಒಳಗೆ ೨ ಕಿ.ಮೀ. ಹೋದ್ರೆ ಅಲ್ಲೇ ದೇವಸ್ಥಾನ ಇರೋದು. ಕೆ.ಆರ್.ಎಸ್ ಹಿನ್ನೀರಿಗೆ ಹೊಂದಿಕೊಂಡಂತೆ ನಿರ್ಮಿಸಲಾಗಿದೆ.


ಶ್ರೀ ವೇಣುಗೋಪಾಲಸ್ವಾಮಿ ದೇವಾಲಯ

          ಆ ದೇವಸ್ಥಾನಕ್ಕೆ ಇತಿಹಾಸವೂ ಇದೆ. ಅದೇನಂದ್ರೆ ತುಂಬಾ ಹಿಂದೆ ಹೊಯ್ಸಳರ ಕಾಲದಲ್ಲಿ ದೇವಸ್ಥಾನ ನಿರ್ಮಾಣ ಆಗಿತ್ತು ಆದರೆ ಕನ್ನಂಬಾಡಿ ನಿರ್ಮಾಣದ ನಂತ್ರ ಹಿನ್ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಯಿತು. ೨೦೦೩ರ ತೀವ್ರ ಬರಗಾಲದ ಸಂದರ್ಭದಲ್ಲಿ ನೀರು ಬತ್ತಿ ದೇವಸ್ಥಾನ ಪ್ರತ್ಯಕ್ಷವಾಯಿತು. ಆಗ ಅದನ್ನ ದಡದಲ್ಲಿ ಮತ್ತೆ ನಿರ್ಮಿಸಬೇಕು ಅಂತ ಆಯ್ತಂತೆ. ಖೋಡೆ ಅನ್ನುವವರ ಸಹಕಾರದಲ್ಲಿ ಅದು ನಿರ್ಮಾಣ ಆಗಿದೆ.  ಸೋಮನಾಥಪುರದ ಚೆನ್ನಕೇಶವ ದೇವಾಲಯದ ಮಾದರಿಯಲ್ಲಿಯೇ ಇದೆ ಅಂತ ನಂಗನ್ನಿಸ್ತು. ಸುತ್ತ ನೀರು-ಗಾಳಿ ಕೂರೋಕೆ ಕಲ್ಲಿನ ಚೇರ್ ಗಳು ಎದ್ದು ಬರೋಕೆ ಮನ್ಸಾಗಲ್ಲ. ಸನ್ ಸೆಟ್ ಅಂತೂ ಸಖತ್. ಈಗ ಬರಗಾಲ ಬೇರೆ ಅಷ್ಟು ನೀರು ಇರ್ಲಿಲ್ಲ. ನೀರು ಇದ್ರೆ ಇನ್ನೂ ಮಜಾ.

ದೇವಾಲಯದಿಂದ ಸೂರ್ಯಾಸ್ತಮಾನ

          ಸಂಜೆ ಹೊರಡ್ಬೇಕು, ಇಲ್ದೇ ಇರೋ ಮನದಲ್ಲಿ ೫:೪೦ ಕ್ಕೆ ಅಲ್ಲಿಂದ ಹೊರಟ್ವಿ. ಅಷ್ಟೊತ್ತು ಇದ್ದ ಬಿಸಿಲು ಮಾಯ ಆಗಿ, ಮೋಡ ಮುಚ್ಕೋತಪ್ಪ ಹೇಳ್ತೀನಿ ಫುಲ್ ಬ್ಲಾಕ್ ಮೋಡ. ಭಯಾನೇ ಆಯ್ತು ೩೦ ಕಿ.ಮೀ. ಬೇರೆ ಹೋಗ್ಬೇಕು. ಆಯ್ತು ಬೇಗ ಹೊರಟ್ವಿ ನಾನು ಬೈಕ್ ನ ೫೦ ರಲ್ಲೇ ಒಡಿಸ್ತಿದ್ದೆ. ಎಷ್ಟೇ ಆಗ್ಲೀ ಪ್ರಕೃತಿ ಮೀರಿಸೋಕಾಗತ್ತಾ?! ಬೆಳಗೋಳ ಅನ್ನೋ ಊರ ಹತ್ರ ಬಂದ್ವಿ. ಇನ್ನು ಆಗಲ್ಲ ಅಂತ ಅಲ್ಲೇ ಬೈಕ್ ನಿಲ್ಸಿ ಪಕ್ಕದಲ್ಲೇ ಇದ್ದ ಬೇಕರಿಗೆ ಓಡಿದ್ವಿ. ಅಲ್ಲಿ ಶೆಲ್ಟರ್ ಇತ್ತು ಅಲ್ಲಿ ನಿಂತ್ವಿ. ಮಳೆ ಹೊಡಿತು ಹೇಳ್ತೀನಿ ಅನಾಹುತ ಮಳೆ ಅನ್ಕೊಳಿ. ೬ ಗಂಟೆಯಿಂದ ಬರ್ತಾನೆ ಇತ್ತು.ಫ್ರೆಂಡ್ ಗೆ ೮ ಗಂಟೆಗೆ ಲಾಸ್ಟ್ ಟೈಮ್ ಏನ್ಮಾಡೋದು ಅನ್ನೋಭಯ. ಇನ್ನೂ ಕಮ್ಮೀ ಅಂದ್ರು ೧೫ ಕಿ.ಮೀ. ಹೋಗ್ಬೇಕಿತ್ತು. ಅಂತೂ ಇಂತೂ ಗಡುಗು-ಮಿಂಚು ಸಹಿತ ಭರ್ಜರಿ ಮಳೆ ೬:೪೦ ಕ್ಕೆ ನಿಲ್ತು. ನಾವು ಅಲ್ಲಿಂದ ಹೊರಟ್ವಿ. ಆವಾಗ ಬೈಕ್ ರೈಡ್ ಅಂತೂ ಅಲ್ಟಿಮೇಟ್ ಅನ್ಸ್ತು ಆ ವೆದರ್ ಗೆ.

ಕಾರ್ಮೋಡ ಕವಿದ ವಾತಾವರಣ 

          ಇನ್ನು ಜೆ.ಎಸ್.ಎಸ್. ಮೆಡಿಕಲ್ ಕಾಲೇಜ್ ಹತ್ರ ೭:೧೫ ಕ್ಕೆ ಬಂದು, ಫ್ರೆಂಡ್ ಕೊಡ್ಸಿದ ಎಗ್ ಗೋಬಿ- ಕಟ್ಟಾ ಮೀಟಾ ದೋಸೆ ತಿಂದೆ. ಆ ಚಳಿಗೆ ಬಿಸಿ-ಬಿಸಿಯಾಗಿ ಸಖತ್ ಇತ್ತು. ಆಮೇಲೆ ಫ್ರೆಂಡ್ ನಾ ಹಾಸ್ಟೆಲ್ ಗೆ ಬಿಟ್ಟು. ದಾರೀಲಿ ಒಂದು ಚಾಯ್ ಕುಡಿದು ನಾನು ಹಾಸ್ಟೆಲ್ ಮುಟ್ಟೋ ಹೊತ್ತಿಗೆ ೮:೧೫ ಆಗಿತ್ತು. ಮಳೆಗೆ ನೆಂದಿದ್ದ ಬಟ್ಟೆ ಚೇಂಜ್ ಮಾಡಿ ಗುಬ್ರಾಕ್ಕೊಂಡು ಬಿದ್ಕೊಂಡೆ. ಇಲ್ಲಿಗೆ ಒಂದು ದಿನದ ಟ್ರಿಪ್ ಮುಗಿದಿತ್ತು, ಮಾರನೇ ಅಂದ್ರೆ ಇವತ್ತು ಅದನ್ನ ಮೆಲುಕು ಹಾಕೋ ಕೆಲಸ ನಡೆದಿತ್ತು.




Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ