ನರನಿಲ್ಲದ ನೀರವ ಮೌನ

ಕಾಡು-ಕಾನನ ಹರಿವ ಝರಿ ಗಿರಿ-ಬೆಟ್ಟಗಳು,
ಅರಣ್ಯವಾಸಿಗಳ ಪರಮ ಬೀಡು,
ನರನಿಲ್ಲದ ನೀರವ ಮೌನ,
ಕಾಲಚಕ್ರಕ್ಕೆ ಹೊಂದಿಕೊಂಡ ಜೀವರಾಶಿ,
ಭೂ ಲೋಕ ಸ್ವರ್ಗ ಅಲ್ಲಿತ್ತು  !!೧!!

ಗುಡ್ಡದಿಂದ ಅನತಿ ದೂರಕ್ಕೆ ಮನೆ ಮಾಡಿ,
ಬೆಳಗೆದ್ದು ಸಗಣಿ ಬಾಚಿ ಹಾಲ್ಕರೆದು,
ಹೊಟ್ಟೆಯ ಕೂಳಿಗೆ ಉಳುಮೆ ಮಾಡಿ,
ಮತ್ತದೇ ಪ್ರಕೃತಿಯೇ ತನ್ನ ಜೀವನಾಡಿಯಾಗಿ,
ಮನತುಂಬಿ ಸಂಸ್ಕೃತಿ ಪರಂಪರೆ ಬೆಳೆಸಿದ
ಇವರೇ ಪುಣ್ಯಾತ್ಮರು  !!೨!!

ಗಿರಿ ಪರ್ವತಗಳ ಸಾವರಿಸಿ ಮರಗಿಡಗಳ ತುಂಡರಿಸಿ,
ಆಗಸವನ್ನೇ ಮುಟ್ಟುವ ಕೃತಕ ಪರ್ವತ ನಿರ್ಮಿಸಿ,
ಬಣ್ಣ ಬಣ್ಣಗಳ ಅಲಂಕಾರ,
ಗಾಜಿನಿಂದಲೇ ನಿರ್ಮಿತ ಮಹಲುಗಳು,
ಮುಂದೊಬ್ಬ ಟೊಪ್ಪಿ-ಕೋಲಿನ ಕೈಗೊಂಬೆ,
ಏನಿದ್ದರೂ ಎಲ್ಲಾ ಬೇಕೆನ್ನುವ ಹಪಾಹಪಿ,
ಕೊನೆಗೂ ತೀರದ ಬವಣೆ !!೩!!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ