Posts

Showing posts from May, 2017

ಕುಂತಿಬೆಟ್ಟ - ಒಂದು ರಾತ್ರಿ

Image
              ಎಕ್ಸಾಮ್ ಮುಗೀತು, ಕಾಲೇಜು ಮುಗೀತು, ಇನ್ನೇನು ಪ್ರಾಜೆಕ್ಟ್ ಸಬ್ಮಿಷನ್ ಆದ್ರೆ ಮೈಸೂರಿನ ಜೊತೆ ೪ ವರ್ಷದ ಸಂಬಂಧನೂ ಮುಗಿಯತ್ತೆ. ಈ ಎಂಜಿನಿಯರಿಂಗ್ ಲೈಫ್ ಅಲ್ಲಿ ಏನು ಇಷ್ಟ ಆಗದಿದ್ರೂ ಹಾಸ್ಟೆಲ್ ಲೈಫ್ ಮಾತ್ರ ಜೀವನಪರ್ಯಂತ ಮರೆಯೋಕಾಗಲ್ಲ. ಅಂತಾ ಸಿಹಿ-ಕಹಿ ನೆನಪುಗಳನ್ನು ಕೊಟ್ಟಿದೆ. ಓಕೆ ಈಗ ಮ್ಯಾಟ್ರಿಗೆ ಬರೋಣ, ೨೫ ಮೇ ೨೦೧೭ ಗುರುವಾರ ಹಾಸ್ಟೆಲ್ ಅಲ್ಲಿ ಏನ್ ಕೆಲ್ಸಾನೂ ಇಲ್ಲ ಮಾಡಕೆ ಎಲ್ಲಾದ್ರೂ ಹೋಗಣ ಅಂತ ಮಾತಾಡ್ಕೊಂಡು ಕುಂತಿಬೆಟ್ಟಕ್ಕೆ ಹೊರಟ್ವಿ ರಾತ್ರಿ ೧೦:೦೦ ಗಂಟೆ ಸುಮಾರಿಗೆ. ಬೆಳಗಿನ ಸುಂದರ ನೋಟ ಕುಂತಿ ಬೆಟ್ಟದಿಂದ             ನಮ್ಮ ಚಾರಣದ ಬಗ್ಗೆ ಹೇಳುವ ಮುನ್ನ ಕುಂತಿ ಬೆಟ್ಟದ ಬಗ್ಗೆ ಮಾಹಿತಿ ನೀಡಲೇಬೆಕು. ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್‌ರಾಕ್ಸ್‌ಎಂದೂ ಹೆಸರಾಗಿತ್ತು. ಶ್ರೀರಂಗಪಟ್ಟಣ-ಪಾಂಡವಪುರ ಹಾದಿಯಲ್ಲಿ ಒಂದು ಫೋಟೊ    

ಚೀಲ

Image
ಕನಸುಗಳು ಚೂರಾಗಿ, ದಾರಿಯೇ ಮರೆಯಾಗಿ, ಬದುಕಿನಾಸರೆಯೇ ಇಲ್ಲದಿರೆ, ಎತ್ತ ಹೋಗುವುದು?! ಎಲ್ಲಿ ಉಳಿಯುವುದು?!೧!! ಓಡುತ್ತಿದ್ದ ಕುದುರೆ - ಓಡೋಡಿ ಸಾಕಾಗಿ, ನಡೆದು - ಕುಂಟಿ - ಕುಸಿದು ಬಿದ್ದಿದೆ, ಎಬ್ಬಿಸುವ ಸ್ಫೂರ್ತಿಯೊಂದು ಬೇಕಾಗಿದೆ, ಆದರೆ ಅದೆಲ್ಲೂ ಕಾಣದಾಗಿದೆ!!೨!! ಎಂದಿಗೂ ಜೊತೆ ಬಾಳುವವರಿಗಿಂದು ಜೀವ ಬೇಡವಾಗಿದೆ, ಸ್ವಪ್ನ ಚೀಲ ಹೊತ್ತ ಮನವು ಹೆಗಲೊಂದಿಲ್ಲದೆ ಸೊರಗಿದೆ!!೩!! ಯಾರಿಗೇನೊಲಿದರೇನಂತೆ? ಕೊನೆಗುಳಿಯುವುದು ನಿನಗೆ ನೀನೆ, ಆದರೇನಂತೆ ಈ ನೆಲದಲ್ಲಿ, ಚೀಲವ ತೂರದಿರೆ ಉಳಿಗಾಲವಿಲ್ಲ!!೪!!

ಸಗ್ಗ

Image
ತಮದೊಳಗಿಂದರಳಿ ಬರುವಾತನ ಕಾದು ಕುಳಿತು, ಏರಿ, ಮೋಡ ಮೈ ತಾಕುವಂತಿರುವ ಅವುಗಳ ನಡುವೆ ನಿಂತು, ಕಂಡ ಬಂಡೆಯ ಮೇಲೆ ಅಂಗಾತ ಮಲಗಿ ಮೇಲ್ನೋಡಿದೊಡೆ ಸಗ್ಗಕ್ಕೆ ಮೂರೇ ಇಂಚು!!