ಹೋರಾಟ

ಹುಟ್ಟು ಯಾಕಾಗತ್ತೆ ಸಾವು ಯಾವಾಗ ಬರತ್ತೆ?! ಯಾರ್ಗಾದ್ರೂ ಗೊತ್ತಾ?! ಎಲ್ಲಾ ಅನಿರೀಕ್ಷಿತ! ಜೀವನ ತುಂಬಾ ಏನೇನಕ್ಕೋ ಹೊಡೆದಾಟ ಹೋರಾಟ 😂
      ನಾವು ನಡೆಯೋ ದಾರಿ ಸರೀನಾ?!  ತಪ್ಪಾ?! ಯಾರಿಗೂ ಗೊತ್ತಿಲ್ಲ ಆದ್ರೆ ಅದು ಎಲ್ಲಿಗೆ ಹೋಗತ್ತೆ?! ಏನಾಗತ್ತೆ?! ಅಂತ್ಯ ಏನು?! ಎಲ್ಲಾ ಪ್ರಶ್ನೆಗಳೇ.
     ಇಷ್ಟು ದಿನ ಆಯ್ತು ಬರಿಯಕೇ ಆಗ್ಲಿಲ್ಲಾ ಏನನ್ನೂ 😂😂 ಯಾಕೆ ನಗ್ತಿದೀನಿ ಅಂತಾನಾ?! ಇದ್ನ ಯಾರು ಓದ್ತಾರೆ ಅಂತ ಹೇಳ್ಬೇಕು ನನಗೆ ನಾನೇ ಹೇಳ್ಕೊತಿದಿನಿ ಯಾಕಂದ್ರೆ ಇದ್ನ ನಾಳೆ ಓದೋನು ನಾನೇ 😃
      ಓಕೆ, ಮುಂದೊಂದು ದಿನ ಏನೋ ಆಗ್ತೀನಿ ಅನ್ನೋ ಆಸೆ ಅಂತೂ ಇದೆ ಅದು ೧ವರ್ಷ ೫ ವರ್ಷ ೧೦ ವರ್ಷ ೩೦ ವರ್ಷ ಎಷ್ಟಾದ್ರೂ ಆಗ್ಬಹುದು ಸರಿ ಕಾಯ್ತೀನಿ, ಅದೇ ನಂಬಿಕೇಲಿ ಬರೀತೀನಿ.
      ಕಾಲೇಜು ಮುಗೀತು ಎಲ್ಲಾ ಕಾಲೇಜಲ್ಲಿ ಕ್ಯಾಂಪಸ್ ಸೆಲೆಕ್ಟ್ ಆದವ್ರೂ ತಮ್ಮ ಕಂಪನಿಗಳಲ್ಲಿ ಕೆಲಸಕ್ಕೆ ಸೇರಿನೂ ಆಯ್ತು ಆದ್ರೆ ನಾನಿಲ್ಲಿ ಅದೇ ಹಾಸ್ಟೆಲ್ ಅದೇ ಕಾಲೇಜ್ ಅದೇ ನೈಟ್ ಔಟ್ಸ್ ಇದೇ ನೆನಪಲ್ಲಿ ಇದೀನಿ.
     ಈ ಯೂನಿವರ್ಸ್ ಅಲ್ಲಿ ನಮ್ಮ ಗ್ಯಾಲಾಕ್ಸಿ ಅದ್ರಲ್ಲಿ ಈ ಸೌರಮಂಡಲ ಅಲ್ಲಿ ಭೂಮಿ ಭಾರತ ಕನ್ನಡನಾಡು ನಾನು ನೀವು. ನಾನು ಇದರಲ್ಲಿ ತೃಣದಲ್ಲಿ ತೃಣಕ್ಕೆ ಸಮಾನ ಆದ್ರೆ ಈ ಜಗತ್ತು ಈ ಜೀವನ ಎಲ್ಲಾ ಎಷ್ಟು ಸುಂದರ 😍
     ನಾನು ಕೆಲ್ಸ ಎಲ್ಲಾ ಹುಡುಕಿದೆ ಜಾಬ್ ಫೇರ್ ಅಟೆಂಡ್ ಮಾಡಿದೆ ಎಲ್ಲೂ ಸರಿ ಆಗ್ಲಿಲ್ಲ. ಮಹಾರಾಜ ಕಾಲೇಜಿನಲ್ಲಿ ನಡೆದ ಜಾಬ್ ಫೇರ್ ನಲ್ಲಿ ಎಸ್ ಎಸ್ ಇಲೆಕ್ಟ್ರಿಕಲ್ಸ್, ನಮ್ಮ ಸೀನಿಯರ್ ಪ್ರಮೋದ್ ಇಂದ ವೈನೆಟ್ ಅಲ್ಲಿ ಸಿಗುವಂತಿದ್ದ ಕೆಲಸವನ್ನು  ಅಲ್ಲಿದ್ದ ಸಮಯ ಮತ್ತು ಬೇರೆ ಕಾರಣಗಳಿಗೆ ಬೇಡ ಎನ್ನಬೇಕಾಯ್ತು. ಪಿಜಿಸಿಇಟಿ ಬರ್ದಿದ್ದೆ ಆದ್ರೂ ಎಮ್ ಟೆಕ್ ಮಾಡಕೆ ಮನಸಿಲ್ಲ ಅಂತ ಬಿಟ್ಟೆ. ಆರ್ಮಿಗೆ ಸೇರಣ ಅಂತ ಅಲಹಾಬಾದ್ ಹೋಗಿಬಂದೆ (ಅದರ ಬಗ್ಗೆ ಇನ್ನೊಂದ್ಸಲ ಬರುತೀನಿ). ಪಿ ಎಸ್ ಐ ಪಿಜಿಕಲ್ ಆಗ್ಲಿಲ್ಲ, ಕೆ ಎ ಎಸ್ ಒಳ್ಳೆಯ ಸ್ಕೋರ್ ಅಗ್ಲಿಲ್ಲ ಪ್ರಿಲಿಮ್ನರಿ ಕ್ಲಿಯರ್ ಆಗ್ಲಿಲ್ಲ, ನಿನ್ನೆ ತಾನೆ ಟ್ರೈ ಮಾಡಿದ ರಾಬರ್ಟ್ ಬಾಷ್ ಜಾಬ್ ಸಿಕ್ಕಿದ್ದು ಕೈ ಜಾರಿದಂತೆ ಹೋಯ್ತು. ಇನ್ನೂ ಏನೇನು ಮಾಡ್ಬೇಕು ಗೊತ್ತಿಲ್ಲ. ಈ ಯಾಂತ್ರಿಕ ಜಗತ್ತಲ್ಲಿ ಏನ್ ಮಾಡ್ಬಹುದು ನಾನು ಗೊತ್ತಿಲ್ಲ.
      ದಾರೀಲಿ ಹೋಗ್ತಿದ್ರೆ ಬಜ್ಜಿ ಮಾಡವ್ನು, ೧ ಲಕ್ಷ ೮೦ ಸಾವಿರದಿಂದ ತಂದ ಆಟೋ ಓಲಾದಿಂದ ಓಡ್ಸೋದು, ಪಾಠ ಮಾಡೋರು ಕಂಡ್ರೆ ಪಾಠ ಮಾಡೋದು ಇನ್ನೂ ಏನೇನೋ ಮಾಡ್ಬೇಕು ಅನ್ಸುತ್ತೆ. ಆದ್ರೆ ಯಾವ್ದರಲ್ಲೂ ಒಂದೊಳ್ಳೆ ಗಟ್ಟಿ ನಿರ್ಧಾರ ಇಲ್ಲ. ಒಂದು ಪ್ರಶಾಂತ - ತಿಳಿ ನೀರಿನ ಜೀವನ ಇಲ್ಲ. ಏನು ಅಂತ ಗೊತ್ತಿಲ್ಲ.
      ಹಿಂಗೆ ಇದ್ರೆ ಆಗಲ್ಲ ಏನಾದ್ರೂ ಮಾಡ್ಬೇಕು ಅಂತ ಸದ್ಯ ವಿಜಯನಗರದ ಯೂನಿವರ್ಸಲ್ ಅಲ್ಲಿ ಐ ಎ ಎಸ್ ಕ್ಲಾಸ್ ಸೇರಿದಿನಿ. ಏನಾದ್ರೂ ಮಾಡ್ಬೇಕು ಅನ್ನೋ ಆಸೆ ಇದೆ ಆದ್ರೆ ದಾರಿ ಗೊತ್ತಿಲ್ಲ ನನಗೆ ಸರಿಯಾದ ಮಾರ್ಗದರ್ಶನ ನೀಡೋರು ಯಾರು ಸಿಗ್ತಿಲ್ಲ. ಈಗಿನ ಕಾಲದಲ್ಲಿ ಯಾರು ಸಿಗ್ತಾರೆ ಅಲ್ವಾ?😂
ನಿನ್ನೆ ಬಾಷ್ ಇಂಟರ್ವೀವ್ ಅಡೆಂಡ್ ಮಾಡಕೆ ಅಭಿಷೇಕ್ ವೈ ಎನ್ ಮೊನ್ನೆ ಬಂದಿದ್ದ ಇಬ್ಬರ್ದೂ ಅಗ್ಲಿಲ್ಲ. ಎರಡು ದಿನ ನಮ್ಮ ರೂಮ್ ಅಲ್ಲೇ ಇದ್ದ ಈಗ  ಶಿವಮೊಗ್ಗಕ್ಕೆ ಹೊರಟ ಮೆಟ್ರೋಗೆ ಬಿಟ್ಟು ಬಂದೆ. ಈಗ ಬರೀತಿದಿನಿ. ಕಾಲೇಜು ಮುಗ್ದು ಇಷ್ಟು ದಿನ ಮಾತಾಡಿರ್ಲಿಲ್ಲ ಸರಿಯಾಗಿ ಬಂದ ಇಷ್ಟೂ ದಿನದ ಮಾತುಗಳು ಈಗ ಆದವು.

ನನ್ನ ಈಗಿನ ಸಂದರ್ಭಕ್ಕೆ ಸರಿಯಾದ ಪದ್ಯ ಡಿವಿಜಿ ಅವರಿಗೆ ನಾನು ಋಣಿ 😃

"ಎಲ್ಲ ಬರಿ ಗೊಣಗಾಟ, ತಿಣಕಾಟ, ತಡಕಾಟ ।
ಇಲ್ಲ ನಮಗೊರೆಕೋಲ್, ತಿಳಿಬೆಳಕುಮಿಲ್ಲ ॥
ಬಲ್ಲತನ ಮಬ್ಬಿನಲಿ ನಿದ್ರಿಸದೆ ತೆವಳುವುದು ।
ಸಲ್ಲದುಬ್ಬಟೆ ನಮಗೆ - ಮಂಕುತಿಮ್ಮ ॥ "

ಸಾಗಲಿ ಭಯವಿಲ್ಲ ಜೀವನ ಹಿಂಗೆ,
ಎಲ್ಲವೂ ಸ್ಥಿರತೆಗಾಗಿ ಹೋರಾಟ,
ಆದರೆ,
ಕೊನೆಗಿರಲಿ ಸಿಹಿಯಾದ ಗಂಟೊಂದು!!
ಶುಭರಾತ್ರಿ. 

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ