Posts

Showing posts from March, 2018

ಮಡಕೆ ಮೂತಿಯವ ಬಂದು ಹೋದಾಗ.....

Image
ಸೌಭಾಗ್ಯಪುರ ಅಂತ ಊರು, ಎಲ್ಲಾ ತಕ್ಕಮಟ್ಟಿಗೆ ಅನುಕೂಲಸ್ಥರೇ ಇದ್ರು. ಸುಮಾರು ಒಂದು ನೂರು ಮನೆಗಳಿದ್ವು. ಅದೇ ಊರವ್ರಂತೆ ಆದ್ರೆ ಒಂದ್ಹತ್ತು ಮನೆಗಳು ಊರಿಂದ ಸ್ವಲ್ಪ ದೂರದಲ್ಲಿ ಇದ್ವು. ರಾತ್ರಿ ಆದ್ರೆ ಊರಲ್ಲಿ ಬೀದಿನಾಟಕ, ಮುದುಕರ ಕಟ್ಟೆ, ಯುವಕರ ಗುಂಪು ಮನೆ ಮಾಡಿರ್ತಿದ್ವು. ಆದ್ರೆ ಅದ್ಯಾಕೋ ಊರಾಚೆಗಿದ್ದ ಮನೆಗಳು ಕತ್ತಲಾದ್ರೆ ತಟ್ಟನೆ ಮಾಯ ಆಗ್ತಾ ಇದ್ವು, ಏನೂ ಅಂತ ಗೊತ್ತಾಗ್ತಿರ್ಲಿಲ್ಲ.                        ಹೀಗೆ ಇದ್ದಾಗ ರಾತ್ರಿ ಸುರಿದ ಮಳೆಗೆ, ಸೋಮಣ್ಣನ ಮನೆ ಹಿಂದಿನ ಬಚ್ಚಲುಮನೆಗೆ ಹೊಂದಿಕೊಂಡಿದ್ದ ಚರಂಡಿ ಕಟ್ಟಿಕೊಂಡಿತ್ತು. ಆ ನೀರಿನೊಂದಿಗೆ ಬಂದು ನಿಂತಿದ್ದ ಎಲ್ಲಾ ಹೊಲಸನ್ನು ಆತ ನೋಡದಾದ, ಬಚ್ಚಲಿಗೆ ಹೋಗುವುದನ್ನೇ ನಿಲ್ಲಿಸಿ ಎಲ್ಲದಕ್ಕೂ ಮನೆಯವರೆಲ್ಲಾ ಬಯಲಿನ ಹಾದಿ ಹಿಡಿದ್ರು.                       ಅವತ್ತು ಬೆಳಿಗ್ಗೆ ಊರಿಂದ ಹೋದ ಸೋಮ ಇನ್ನು ಬಂದಿರಲಿಲ್ಲ. ಅಷ್ಟರಲ್ಲಿ ಯಾರೋ ಬಾರಿಸ್ತಿದ್ದ ಗಂಟೆ ಶಬ್ದ ಕೇಳ್ತಾ ಇತ್ತು. ರಾಮ ತನ್ನ ಗೆಳೆಯ ರಾಜೀವನಿಗೆ ಹೇಳ್ದಾ "ನೋಡೋ ನಮ್ ಶಾಲೆಗೆ ರಜೆ ಅಂತ ಗೊತ್ತಾಗಿ ಇವತ್ತೂ ಬಂದಿದಾನೆ ಐಸ್ ಕ್ಯಾಂಡಿ ಅವ್ನು", ಪ್ರತ್ಯುತ್ತರವಾಗಿ ರಾಜೀವ್ "ಯಾಕೋ ಗಂಟೆ ಶಬ್ದ ಬೇರೆ ಥರಾ ಇದ್ಯಲ್ಲಾ?!". ಅಷ್ಟರಲ್ಲಿ ರಾಜೀವನ ತಾಯಿ, "ಕಾಲು ಮುರಿತೀನಿ ಹೊರಗೆ ಕಾಲಿಟ್ರೆ, ನಾಳೆ ತಿನ್ನುವಂತ್ರಿ" ಅಂದವ್ಳೆ, ಸರಸರನೆ ಹೋಗಿ ಬಾಗಿಲು ದಡಾ

ಒಂಟಿತನವೊಮ್ಮೆ ಹೇಳಿತು

Image
ಒಂಟಿತನವೊಮ್ಮೆ  ಹೇಳಿತು ಎಲ್ಲರನೂ  ಕಾಡಲು ಯತ್ನಿಸಿದೆ ಆದರೆ, ನಿನಗಿಂತ ಏಕಾಂಗಿ ಎಲ್ಲೂ ಸಿಗಲಿಲ್ಲ ಅದಕ್ಕೇ ನಿನ್ನ ಬಳಿ ಉಳಿದೆ ಎಂದು!!

ಬಾಡಿದ ನೆನಪು

Image
ಬದುಕಿನ ಹಾದಿಯ ಬವಣೆಯ ತಿರುವಿನಲಿ ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ… ಬಾಡಿ ಹೋದ ನಿನ್ನ ನೆನಪಿನ ಹೂಗಳನು ಮರೆವೆಂಬ ಮೂಟೆಗೆ ತುರುಕಿ, ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ ಮುಂಜಾನೆಯ ಕಿರಣಗಳನರಸುತ್ತಾ… ಹರಿವ ಕಾಲದ ನದಿಯ ಶುಭ್ರ ಜಲವನ್ನು ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ, ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ ನಿಂತಿರುವೆ ಹೊರಟು, ಬಾಳ ಹಾದಿಯಲಿ ಮುಂಜಾನೆಯ ಕಿರಣಗಳ ಸ್ವಾಗತಿಸಿ… ಪ್ರಕವಿ