Posts

Showing posts from August, 2021

ಪಾಪ ದೇವರು!!

ಹೀಗೆ ಹಿರಿಯ ಗೆಳೆಯರೊಬ್ಬರ ಜೊತೆ ಮಾರನೇ ದಿನ ಇದ್ದ ಪರೀಕ್ಷೆಯೊಂದರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರು ಅದೇ ತಮ್ಮ ಜೀವನದ ನಿರ್ಣಾಯಕ ಪರೀಕ್ಷೆ ಅದರಲ್ಲಿ ಸೋತರೆ‌ ಜೀವನವೇ ಮುಗಿದಂತೆ‌ ಅನ್ನೋ ಪರೀಕ್ಷಾ ಭಯದಲ್ಲಿ ಮುಳುಗಿ, ಆರಾಮಾಗಿದ್ದ ನನಗೂ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು.   ನಾನು ವಿಚಲಿತನಾಗದೆ, ಸಮಚಿತ್ತದಿಂದ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಓದಿ ಮುಗಿಸಿ, ಅತೀವ ಆತ್ಮಸ್ಥೈರ್ಯದಿಂದ ಇದ್ದೆನೆಂದಲ್ಲ. ಮಾರನೇ ದಿನ ಇದ್ದ ಪರೀಕ್ಷೆ ನನಗೆ ಪ್ರಮುಖವಾಗಿರಲಿಲ್ಲ ಅದು ನನ್ನ  ಪರೀಕ್ಷೆಯಾಗಿತ್ತೆಂದರೆ ತಪ್ಪಲ್ಲ. ಹಾಗಾಗಿ ಆ ಪರೀಕ್ಷೆಗೆ ಕಟ್ಟಿದ್ದೆನೇ ಹೊರತು ಯಾವುದೇ ತಯಾರಿ ಮಾಡಿರಲಿಲ್ಲ. ಹೀಗೆ ಮಾತುಕತೆಯಲ್ಲಿ,  ಗೆಳೆಯರು: ನೀವಿಷ್ಟು ಆರಾಮಾಗಿದ್ದೀರಾ, ಎಲ್ಲವೂ ಮುಗಿಸಿದ್ದೀರಾ ಅನ್ಸುತ್ತೆ... ನಾನು: ಹಾಗೇನಿಲ್ಲ, ನಾಳೆ‌ ಪರೀಕ್ಷೆಯ ನನ್ನ ಎಲ್ಲಾ ಭಾರವನ್ನೂ ದೇವರ ಮೇಲೆ ಹಾಕಿ ಬಿಟ್ಟಿದ್ದೇನೆ ಹಾಗಾಗಿ ಚಿಂತೆಯಿಲ್ಲ. ಗೆಳೆಯರು: ಅಯ್ಯೋ! ಪಾಪ!! ದೇವರು!!! ನನಗೂ ಇಲ್ಲಿ ವಿಡಂಬನೆ ಅರಿಯಲು ಸ್ವಲ್ಪ ಸಮಯ ಬೇಕಾಯಿತು, ಆದರೆ ಆ ಭಯದಲ್ಲೂ ಅವರ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಳಿಸಿತು.