ನನ್ನ ತಾಯಿ




ಹೌದು, ಇವಳೇ ನನ್ನ ತಾಯಿ,
ಕೊಳಕಾದ ಮತ್ತು ಹರಿದ ಸೀರೆ ಉಟ್ಟಿದ್ದಾಳೆ,
ದಾರಿ-ದಾರಿಯಲ್ಲಿ ನಿಂತು
ತನ್ನ ಮಕ್ಕಳನ್ನು ಕಾಯುತ್ತಿದ್ದಾಳೆ.
ತನ್ನ ಅಸ್ತಿತ್ವವೇ ಅಲುಗಾಡುತ್ತಿದ್ದರೂ
ತನ್ನ ಮಕ್ಕಳೂ- ತನ್ನಲ್ಲಿರುವ ಇತರರಿಗೂ
ಆಲಂಗಿಸಿ ತುತ್ತಿಟ್ಟಿದ್ದಾಳೆ-ಸಾಕಿದ್ದಾಳೆ.
ತನ್ನ ಕೈಲಾದ ಮಟ್ಟಿಗೆ ಆಕೆ 
ಎಲ್ಲರನ್ನೂ ಪ್ರೀತಿಸಿದ್ದಾಳೆ,
ಆದರೆ,
ತನ್ನ ಮಕ್ಕಳೇ ಬೇರೆ ಪ್ರೀತಿಗೆ
ವಾಲಿದ್ದಾರೆಂದರೆ ಹೇಗೆ ತಡೆದುಕೊಂಡಾಳು?!
ಬಂದವರೊಂದಿಗೆ ಸೇರಿ ತನ್ನಮ್ಮನನ್ನೇ
ಹೊರಹಾಕಿದರೆ ಆಕೆ ಏನು ಮಾಡಿಯಾಳು?!
ಮಾತು ಕೊಟ್ಟವಳನ್ನು ಮರೆತು,
ಪರರಿಗೆ ಗುಲಾಮರಾದದ್ದನ್ನು ಕಂಡು,
ಕೊರಗಿದ್ದಾಳೆ - ಮರುಗಿದ್ದಾಳೆ.
ರಸ್ತೆ-ರಸ್ತೆಯಲ್ಲಿ ತನ್ನನ್ನು ಉಳಿಸುವಂತೆ ಕೋರಿದ್ದಾಳೆ.
ಆಕೆಗೇನು ನೋಡಿ ನೋಡಿ ಕೊನೆಗೆ,
ಮರುಗಿ ಮರೆಯಾಗುತ್ತಾಳೆ.
ಆಮೇಲೆ,
ಬೆಲೆಕಟ್ಟಲಾಗದಿಹ ಅವಳ ಪ್ರಸ್ತುತಿ ಇಲ್ಲದಿರೆ,
ನಾವೆಲ್ಲಿ?! ಈ ನಾಡೆಲ್ಲಿ?!


Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ