ನನ್ನ ಬಗ್ಗೆ

ಕರ್ನಾಟಕದ ಒಂದು ಕಾಲದ ಮ್ಯಾಂಚೆಸ್ಟರ್,  ಬೆಣ್ಣೆ ದೋಸೆ, ಮಿರ್ಚಿ ಮಂಡಕ್ಕಿ ಊರು ನನ್ನದು.
ಈ ಬ್ಲಾಗ್ ಬರಿಯೋ ಮುಖ್ಯ ಉದ್ದೇಶ ನನ್ನ ಜೀವನದಲ್ಲಿ ನಡಿಯೋ ಸಂಗತಿಗಳನ್ನು ದಾಖಲಿಸೋದು, ಮನದ ಭಾವನೆಗಳನ್ನು ಯಥಾವತ್ತಾಗಿ ಅಚ್ಚೆ ಹಾಕೋದು.
ಜೊತೆಗೆ ಈ ನಾಡಲ್ಲಿ ಹುಟ್ಟಿರೋ ನಾವು ಕನ್ನಡ ತಾಯಿಯ ಸೇವೆ ಸ್ವಲ್ಪ ನಮ್ಮ ಕೈಲಾದ ಮಟ್ಟಿಗೆ ಮಾಡೋದು.
ಓದಿ ಹರಸಿ ಆಶೀರ್ವದಿಸಿ.

೦೪/೦೬/೨೦೨೦ 

ಈ ಬ್ಲಾಗ್ ೨೦೧೬ ರಲ್ಲೇ ಪ್ರಾರಂಭವಾದರೂ ಕಳೆದೆರಡು ವರ್ಷದಿಂದ ಇದರ ಬಳಕೆ ನಾನು ಮಾಡಲಿಲ್ಲ ಈಗ ಅನಿಸುತ್ತಿದೆ ಎಷ್ಟೊಂದು ನಾನು ಕಳೆದುಕೊಂಡಿದ್ದೇನೆಂದು.

ಇಂದು ೦೪/೦೬/೨೦೨೦, ಇಂದಿನಿಂದ ಹೊಸ ರೂಪದಲ್ಲಿ ಈ ಬ್ಲಾಗ್ ಅನ್ನು ಮುಂದೆ ತೆಗೆದುಕೊಂಡು ಹೋಗಲು ಇಚ್ಚಿಸಿದ್ದೇನೆ. ಆದರೆ ನನ್ನ ಹಳೆಯ ಹಲವು ಬರಹಗಳು ವಿಚಿತ್ರವೆನಿಸಿವೆ, ಕಾಲ ಬದಲಾದಂತೆ ನಮ್ಮ ಮನಸ್ಸು, ಜಗವನ್ನು ನೋಡುವ ದೃಷ್ಟಿ ಮತ್ತು ಆಲೋಚನೆಗಳು ಹೇಗೆ ಬದಲಾಗುತ್ತವೆ ಎಂಬುದಕ್ಕೆ ಇದೇ ಸಾಕ್ಷಿ. ಆದರೆ ನಾನು ಯಾವುದೇ ಹಳೆಯ ಬರಹಗಳನ್ನು ತೆಗೆಯಲು ಇಚ್ಚಿಸಿಲ್ಲ ಆದರೆ ಓದುಗರು ನನ್ನ ಹಳೆಯ ಬರಹಗಳಲ್ಲಿ ಆಭಾಸ ಕಂಡರೆ ಅದನ್ನು ಕ್ಷಮಿಸಬೇಕು ಮತ್ತು ಈಗಿನ ಬರಹಗಳ ಅನಿಸಿಕೆಯನ್ನು ಪರಿಗಣಿಸಬೇಕೆಂದು ಕೇಳಿಕೊಳ್ಳುತ್ತೇನೆ.

ಹೊಸತಾಗಿ ನನ್ನ ಪ್ರೊಫೈಲ್ ಗೆ ಅನಂತ ಪ್ರಣಯ ಎಂಬ ಹೆಸರು ಇಟ್ಟುಕೊಂಡಿದ್ದೇನೆ ಕಾರಣ ನನಗೆ ಬರವಣಿಗೆ ಹಾಗೂ ಸಾಹಿತ್ಯದ ಮೇಲೆಯಿರುವ ಅಗಾಧವಾದ ಪ್ರಣಯದಿಂದ. ಈ ಶೀರ್ಷಿಕೆಯನ್ನು ವರಕವಿ ದ. ರಾ. ಬೇಂದ್ರೆ ಯವರ "ಅನಂತ ಪ್ರಣಯ" ಕವಿತೆಯಿಂದ ಸ್ಪೂರ್ತಿ ಹೊಂದಿ ಎರವಲು ಪಡೆದಿದ್ದೇನೆ.

-ಅನಂತ ಪ್ರಣಯ

Connect with me via instagram: Chethan’s Gallery

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ