Posts

Showing posts from October, 2016

ಮತ್ತೆ ನೆನಪಾಗಿಹೇ...!!

Image
ಅತಿ ಮೊದಲ ಬಾರಿಗೆ ಒಂದು ವಿಮರ್ಶೆ, ಕಾರಣ ಇಷ್ಟೇ ಅದೇಕೋ ಗೊತ್ತಿಲ್ಲ ಕೇಳಿದಾಗಿನಿಂದಲೂ ಮನಕೆ  ಅತೀ ಹತ್ತಿರವದಂತಿದೆ ಎದ್ದಾಗ ಮಲಗುವಾಗ ಒಂಟಿಯಾಗಿದ್ದಾಗ ಕೇಳಬೇಕೆನ್ನಿಸುವಂತಿದೆ... ಅದೇನು ಪದ ಜೋಡಣೆಯೋ - ಹಾಡುಗಾರನ ಕಲೆಯೋ - ಸಂಗೀತದ ಮುದವೋ ಅಥವಾ ನಮ್ಮೊಳಗಿನ ಭಾವನೆಯ ಆಟವೋ ಅರಿಯದು ಆದರೆ ಈ ಆಲ್ಬಂ ಸಾಂಗ್ ನಮ್ಮ ಭಾವನೆಗಳನ್ನು ಕೆದರುವುದಂತು ಸುಳ್ಳಲ್ಲ. ನಿರ್ದೇಶನ : ಧ್ರುವ ಬೋರಯ್ಯ ಸಂಗೀತ - ಸಾಹಿತ್ಯ - ಗಾಯನ : ವಿಶ್ವನಾಥ ಪೈ 🎶🎵ಮತ್ತೆ ನೆನಪಾಗಿಹೆ . ಕೈ ಗೆಟುಕದ ಹೂವೆ ಬೇಕಾಗಿಹೆ ನೋಡು ನೆರಳೀಗ ಕೈ ಬೀಸಿ ಕರೆಯುತಿದೆ ಎದೆಯ ವರದಿ ಕೇಳು ಒಮ್ಮೆ ಅರೆ ಕ್ಷಣ ನೀ ಕುಳಿತು ತಬ್ಬಿಬ್ಬು ಆಗಿಹೆ ಈ ಪ್ರೀತಿಯಲಿ ಮಾತುಗಳ ಮರೆತು ಸಣ್ಣ ಕೋರಿಕೆ , ಬೇರಿಲ್ಲ ಕಾಣಿಕೆ ನಿನ್ನ ನಗುವಿಗೆ ಕಾರಣ ನಾನಾಗಲೇ ….??? ಕಳೆದೆ ಇರುಳು ಕಹಿ ನೋವಿನಲು ಸವಿ ನಾಳಿಗೆ ಕಾಡು ಕುಳಿತು ಬಯಸಿ ಬಂದೆ ಸಮೀಪದಲಿ ತುಸು ಭಾರವೆ ಈ ನೆರಳು ಕೊನೆಯ ಭೇಟಿಗೆ ನೀಡೊಮ್ಮೆ ಒಪ್ಪಿಗೆ ಈ ಹೃದಯಕೆ ನೀಡೆಯಾ ಪರವಾನಿಗೆ …??? ಮತ್ತೆ ನೆನಪಾಗಿಹೆ..!!🎵🎧 Listen & watch here :  ಮತ್ತೆ ನೆನಪಾಗಿಹೇ...!!  👍

ಕತ್ತಲ ಹಾದಿ

Image
ಕತ್ತಲ ಹಾದಿ  ಅದೊಂದು ಕತ್ತಲೆಂಬಂತೆ ಭಾವ ಸಾಲಿಗೆ ನಿಂತ ಬೀದಿ ದೀಪಗಳು ಕತ್ತಲನ್ನು ನುಂಗಿ ಹಾಕುತ್ತಿದ್ದವು... ತಲೆಯಲ್ಲಿದ್ದ ಯೋಚನೆಗಳು ಆಗಸದ ಮೋಡಗಳಂತೆ ಒಂದನ್ನೊಂದು ಹಿಂದಿಕ್ಕಿ ಓಡುತ್ತಿದ್ದವು... ಕಾಲುಗಳು ತಮ್ಮಿಷ್ಟದಂತೆ  ಮುಂದಡಿ ಇಡುತ್ತಿದ್ದರೂ ಏನೂ ಅರಿಯದ ಭಾವ ತುಂಬಿದ ದೇಹ... ಗುರಿ ಅರಿಯದ ಮನಕೆ ಏನೋ ಮಾಡುವ ಹಂಬಲ ಒಮ್ಮೊಮ್ಮೆ ಗಡಿ ಮೀರುತ್ತಿದ್ದ ಆಲೋಚನೆಗಳು... ಅಷ್ಟರಲ್ಲಿ  ವಾಸ್ತವ ಅರಿಯುತ್ತಿದ್ದ ತಲೆಗೆ ಏನೂ ಕಾಣದ ಮನಸ್ಥಿತಿ ... ತುಸು ದೂರದಲಿ ಸೂರು ಕಾಣಲು ಕೊನೆ ಗೋಚರವಾದಂತೆ ಎಲ್ಲವೂ ಮಾಯವಾಗಿ  ನಿದ್ರಾದೇವಿಯೇ ಆಸ್ತಿಯಾದಳು... !!