Posts

Showing posts with the label ಸುತ್ತಾಟ

ಪೆಟ್ರೋಲ್ ಬಂಕು

ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ‌ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ.           ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು‌ ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು...           ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು.  ‌          ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ...

ತೊಣ್ಣೂರು ಕೆರೆಯ ಗೆಳೆತನ

Image
ಕಾಲೇಜು ಮುಗಿದ ಬಳಿಕ ಮೈಸೂರಿಗೆ ಹಿಂದಿರುಗಿದಾಗ, ಸುಂದರ ತಾಣ ತೊಣ್ಣೂರು ಕೆರೆಗೂ ಹೋಗುವ ಮನಸಾಯಿತು. ಹಿಂದೊಮ್ಮೆ ಗೆಳೆಯರ ಜೊತೆ ಹೋಗಿದ್ದು ಆ ಸ್ಥಳ ಹಾಗೂ ಅಲ್ಲಿಯ ಸೂರ್ಯಾಸ್ತಮಾನ ನನ್ನ ಮನಸೂರೆಗೊಂಡಿತ್ತು.                     ಬೆಂಗಳೂರಿನಿಂದ ಬೆಳಗ್ಗೆ ನನ್ನ ಬೈಕ್ ನಲ್ಲೇ ಹೊರಟು ಮೈಸೂರು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ, ಕೆ.ಎಸ್.ಓ.ಯು ಹಾಸ್ಟೆಲ್ ನಲ್ಲಿ ತಂಗಲು ವ್ಯವಸ್ಥೆ ಆಗಿತ್ತು ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆ ತೊಣ್ಣೂರು ಕೆರೆಗೆ ಹೋಗುವ ನಿರ್ಣಯ ಮಾಡಿದೆ. ನಿದ್ದೆಯಿಂದೆದ್ದು  ಹೊರಡುವುದು ಸ್ವಲ್ಪ‌ ಸಮಯವಾದ್ದರಿಂದ ಸೂರ್ಯಾಸ್ತದ ಸುಂದರ‌ ಚಿತ್ರಣ ಸಿಗುವುದೋ ಇಲ್ಲವೋ‌ ಎಂಬ ಭಯದಲ್ಲೇ ಹೊರಟೆ. ನಾನು ಅವತ್ತು ಬೈಕ್ ಓಡಿಸಿದ್ದು, ಮುಳುಗಲು ಹೋಗುತ್ತಿರುವ ಸೂರ್ಯನೊಂದಿಗೇ ರೇಸ್ ಹತ್ತಿದಂತಿತ್ತು.                     ಅಂತೂ ತಡವಾಗದೇ ಸಮಯಕ್ಕೆ ಸರಿಯಾಗಿ ತಲುಪಿದ್ದಾಯಿತು, ಸೂರ್ಯಾಸ್ತ ದರ್ಶನಕ್ಕೆ‌ ಅಡ್ಡಿಯಾಗುವಂತೆ‌ ಮೋಡಗಳಿದ್ದರಿಂದ ಅಷ್ಟೇನು ಸುಂದರವಾಗಿ ಕಾಣುತ್ತಿರಲಿಲ್ಲ, ಇದಕ್ಕೆ ಹಿಂದೆ ನಾನು ನೋಡಿದ ಅಮೋಘ ಸೂರ್ಯಾಸ್ತಮಾನದ ಸ್ಮರಣೆಯೇ ಕಾರಣ ಎಂದರೆ ತಪ್ಪಲ್ಲ.                    ಈ ಬಾರಿ‌ ಅಲ್ಲೊಂದು ಸಿನೆಮ...

ಕುಂತಿಬೆಟ್ಟ - ಒಂದು ರಾತ್ರಿ

Image
              ಎಕ್ಸಾಮ್ ಮುಗೀತು, ಕಾಲೇಜು ಮುಗೀತು, ಇನ್ನೇನು ಪ್ರಾಜೆಕ್ಟ್ ಸಬ್ಮಿಷನ್ ಆದ್ರೆ ಮೈಸೂರಿನ ಜೊತೆ ೪ ವರ್ಷದ ಸಂಬಂಧನೂ ಮುಗಿಯತ್ತೆ. ಈ ಎಂಜಿನಿಯರಿಂಗ್ ಲೈಫ್ ಅಲ್ಲಿ ಏನು ಇಷ್ಟ ಆಗದಿದ್ರೂ ಹಾಸ್ಟೆಲ್ ಲೈಫ್ ಮಾತ್ರ ಜೀವನಪರ್ಯಂತ ಮರೆಯೋಕಾಗಲ್ಲ. ಅಂತಾ ಸಿಹಿ-ಕಹಿ ನೆನಪುಗಳನ್ನು ಕೊಟ್ಟಿದೆ. ಓಕೆ ಈಗ ಮ್ಯಾಟ್ರಿಗೆ ಬರೋಣ, ೨೫ ಮೇ ೨೦೧೭ ಗುರುವಾರ ಹಾಸ್ಟೆಲ್ ಅಲ್ಲಿ ಏನ್ ಕೆಲ್ಸಾನೂ ಇಲ್ಲ ಮಾಡಕೆ ಎಲ್ಲಾದ್ರೂ ಹೋಗಣ ಅಂತ ಮಾತಾಡ್ಕೊಂಡು ಕುಂತಿಬೆಟ್ಟಕ್ಕೆ ಹೊರಟ್ವಿ ರಾತ್ರಿ ೧೦:೦೦ ಗಂಟೆ ಸುಮಾರಿಗೆ. ಬೆಳಗಿನ ಸುಂದರ ನೋಟ ಕುಂತಿ ಬೆಟ್ಟದಿಂದ             ನಮ್ಮ ಚಾರಣದ ಬಗ್ಗೆ ಹೇಳುವ ಮುನ್ನ ಕುಂತಿ ಬೆಟ್ಟದ ಬಗ್ಗೆ ಮಾಹಿತಿ ನೀಡಲೇಬೆಕು. ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್‌ರಾಕ್ಸ್‌ಎಂದೂ ಹೆಸ...

ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯ, ಹೊಸ ಕನ್ನಂಬಾಡಿ

Image
  This article was published in Prajavani on 06 May 2019 in Reformed format Please Read it Here  click here     (Read Below)            ಫೈನಲ್ ಇಯರ್, ಕಾಲೇಜು ಬೇರೆ ಇಲ್ಲ ಸೋಮವಾರ ಏನ್ಮಾಡೋದು ಅಂತಾ ಇದ್ದಾಗ,  ನಾನು ನೋಡದೇ ಇರೋ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಣ ಅಂತ ಡಿಸೈಡ್ ಮಾಡಿದೆ. ನಾನು ಮತ್ತೆ ಫ್ರೆಂಡ್ ಹೊರಟ್ವಿ ನಂದೇ ಬೈಕ್ ಅಲ್ಲಿ. ಬೃಂದಾವನ ಗಾರ್ಡನ್             ನಮ್ ಕಾಲೇಜಿಂದ ಸುಮಾರು 25 ಕಿ.ಮೀ. ಇರ್ಬಹುದು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊರಟ್ವಿ. ಅದೇ ದಾರೀಲಿ ಮೊದ್ಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಹಂಗೆ ಮುಂದೆ ಹೋದ್ವಿ.  ಮೈಸೂರಿಂದ ೧೪ ಕಿ.ಮೀ. ದೂರ ಅನ್ಸುತ್ತೆ ಅಲ್ಲಿ ಕೆ.ಅರ್.ಎಸ್ ಡ್ಯಾಮ್ & ಬೃಂದಾವನ ಗಾರ್ಡನ್ ಇದೆ. ನೋಡಿ ೨ ವರ್ಷ ಆಗಿದ್ರಿಂದ ನೋಡನ ಅಂತ ಹೋದೆ. ಒಬ್ಬರಿಗೆ ೨೫/- ಟಿಕೆಟ್ಟು, ಯಪ್ಪಾ ಹೆವೀ ಬಿಸಿಲು ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು . ಬೇಗ ಹೋಗಿ ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಾಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ೫ ರೂ ಟಿಕೆಟ್ ಸಖತ್ ಇತ್ತು ಹೋದ್ರೆ ಮರಿದೇ ನೋಡ್ಬೇಕು. ತರ-ತರದ ಮೀನು ಇದ್ವು ಡೆಕೋರೇಷನ್ ಫಿಷ...