ಚೀಲ

ಕನಸುಗಳು ಚೂರಾಗಿ,
ದಾರಿಯೇ ಮರೆಯಾಗಿ,
ಬದುಕಿನಾಸರೆಯೇ ಇಲ್ಲದಿರೆ,
ಎತ್ತ ಹೋಗುವುದು?!
ಎಲ್ಲಿ ಉಳಿಯುವುದು?!೧!!

ಓಡುತ್ತಿದ್ದ ಕುದುರೆ - ಓಡೋಡಿ ಸಾಕಾಗಿ,
ನಡೆದು - ಕುಂಟಿ - ಕುಸಿದು ಬಿದ್ದಿದೆ,
ಎಬ್ಬಿಸುವ ಸ್ಫೂರ್ತಿಯೊಂದು ಬೇಕಾಗಿದೆ,
ಆದರೆ ಅದೆಲ್ಲೂ ಕಾಣದಾಗಿದೆ!!೨!!

ಎಂದಿಗೂ ಜೊತೆ ಬಾಳುವವರಿಗಿಂದು
ಜೀವ ಬೇಡವಾಗಿದೆ,
ಸ್ವಪ್ನ ಚೀಲ ಹೊತ್ತ ಮನವು
ಹೆಗಲೊಂದಿಲ್ಲದೆ ಸೊರಗಿದೆ!!೩!!

ಯಾರಿಗೇನೊಲಿದರೇನಂತೆ?
ಕೊನೆಗುಳಿಯುವುದು ನಿನಗೆ ನೀನೆ,
ಆದರೇನಂತೆ ಈ ನೆಲದಲ್ಲಿ,
ಚೀಲವ ತೂರದಿರೆ ಉಳಿಗಾಲವಿಲ್ಲ!!೪!!

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ