ಸುಯ್ಯ್... ಸ್ಸ್.... ಎಂದು ಸದಾ ಸುತ್ತುತ್ತಿದ್ದ ಗಾಳಿ ಇಂದು ಸದ್ದಿಲ್ಲದೇ ನಿಂತು ಹೋಗಿದೆ | ಕೇಳದಿದ್ದ ಮೆಟ್ರೋ ಶಬ್ದ ಈಗ ನಾನೂ ಇಲ್ಲಿದ್ದೇನೆ ಎಂಬಂತೆ ಗರ್ವದಿಂದ ಗಿರಕಿ ಹೊಡೆಯುತ್ತಿದೆ | ಹುಚ್ಚು ಬಂದಂತೆ ಕುಣಿಯುತ್ತಿದ್ದ ಮರದ ರೆಂಬೆ ಕೊಂಬೆಗಳು ಶಾಕ್ ಹೊಡೆಸಿಕೊಂಡ ಕಾಗೆಗಳಂತೆ ಸೆಟೆದು ನಿಂತಿವೆ | ಅರೇ ನಾನಿರುವಲ್ಲಿಯೂ ಹಕ್ಕಿ-ಪಕ್ಷಿಗಳಿವೆ, ಅದೋ ಮದುವೆಯಾದ ಗಂಡಿನ ಕಷ್ಟವೂ ಪಕ್ಕದ ಮನೆಯಿಂದ ಕೇಳುತಿದೆ | ಒಟ್ಟಿನಲ್ಲಿ, ಬಾಲ ಸುಟ್ಟ ಬೆಕ್ಕಿನಂತೆ ತಿರುಗುತ್ತಿದ್ದ ಗಾಳಿಯು ಇಲ್ಲದಾಗಿ ಹೊಸತೇನೆನೋ ಕಾಣುತಿದ್ದರೂ, ಅತಿಮುಖ್ಯವಾದುದೇನೋ ಕಳೆದುಹೋಗಿರುವ ಭಾವ ಭಾಸವಾಗಿದೆ.