ನನಗಾಗಿ

ಬಿದ್ದಂತಿಹುದು ಆಲಿಕಲ್ಲು ಕನಸಿನಲಿ
ಬಿತ್ತಿಹಳಾ ರಾಗವ ಮನಸಿನಲಿ
ಇರುವ ಹೊತ್ತು ಜೊತೆಗಿದ್ದು, 
ಕರಗಿ ಹೋದಾಳೆಂಬ ಭಯ |
ಕಣ್ಬಿಟ್ಟರೆ ಮಳೆಯೋ ಮಳೆ
ಹರಿದಿಹಳು ಕೈಸಿಗದೆ ಝರಿಯಾಗಿ-ನದಿಯಾಗಿ
ಒಡೆದಿತ್ತು ಕನಸುಗಳು ನೂರಾಗಿ ಅವಳ ನೆನಪಾಗಿ ... !!
***

ಕಪ್ಪು ಕಮಲವ ಅರಳಿಸಿ
ನೋಟ ಬಂದೀತೆಂಬ ಹಂಬಲ
ಎದುರಿದ್ದರೂ ಬಾರದ ನೋಟ
ಎಲ್ಲೆಲ್ಲೂ ಕನಸುಗಳ ಹಾವಳಿ
ಒಂದೂ ನನಸಾಗುವ ಸುಳಿವಿಲ್ಲ
ಹುಚ್ಚುಕೋಡಿ ಮನಸಂತೂ ಹರಿದಿದೆ
ಅರಸುತ ಹೃದಯದ ಪೀಠ ... !!
***

                            ಚಿತ್ರ ಕೃಪೆ: ಗೂಗಲ್

:ಒಂಬಗೆಯ ಮೋಹ:

ಇತ್ತಿಂದೇನೂ ಹೇಳದೇ,
ಅತ್ತಿಂದೇನೂ ಇಲ್ಲದೆ,
ನೋಡಿ ನೋಡಿ ಸಂತೃಪ್ತನಾಗಿ,
ಇದ್ದ ನಾಲ್ಕ್ ವರುಷ ಮುಳುಗಿ,
ಉಳಿದೆಣಿಕೆಯ ದಿನಗಳಲಿ,
ಬೇಕೋ-ಬೇಡವೋ ಎಂಬ ದ್ವಂದ್ವದಲಿ,
ಮನದಾಳದಲ್ಲಚ್ಚೆ ಒತ್ತಿಹ ಮೊದಲ ಪ್ರೀತಿಯ,
ಸುಂದರ ಕನಸುಗಳ ರೂವಾರಿಯ,
ಮೆಲುಕು ಹಾಕುತ್ತಾ ಸಾಗುವುದೋ?!
ಹೇಳಿ ಏನಾದರೊಂದು ಮಾಡುವುದೋ?!
.
.
ಕನಸುಗಳ ಮಾರಿ ಏಕಾಂಗಿಯಾಗುವುದೋ?!

Note: Originally written in July month of 2016, Later merged to one post, while rearranging the articles. (17th June 2017)

Comments

Popular posts from this blog

Life Update

ನಂಬಿಕೆಯ ದೀಪ

ಪುರಸ್ಕಾರ