Posts

Showing posts from 2016

ಭಾರ

ಒಬ್ಬಂಟಿಯೆಂದಡಿಗಡಿಗೆ ಅಂಜದಿರು, ಬೆಳಗುವ ಸೂರ್ಯ-ಚಂದ್ರರೂ ಒಬ್ಬಂಟಿಗರೇ, ಹುಟ್ಟು-ಸಾವುಗಳೂ ಒಂಟಿಯೇ, ಜೀವನವೂ ಒಂದು ಒಂಟಿ ದಾರಿಯೇ, ಒಡನೆ ಬರುವವರೂ ದ್ವಿಪಥ - ಚತುಷ್ಪಥಗಳಂತೆ ಭಾರಗಳನ್ನು ಕಡಿಮೆಗೊಳಿಸಬಹುದು, ಕೆಲವರು ಕೂಡಿಕೊಳ್ಳಬಹುದು-ಕೆಲವರು ತೊರೆಯಬಹುದು, ಆದರೆ ಕೊನೆಗುಳಿಯುವ ಹಾದಿ ನಿನ್ನದೊಂದೆ...!!

ಮತ್ತೆ ನೆನಪಾಗಿಹೇ...!!

Image
ಅತಿ ಮೊದಲ ಬಾರಿಗೆ ಒಂದು ವಿಮರ್ಶೆ, ಕಾರಣ ಇಷ್ಟೇ ಅದೇಕೋ ಗೊತ್ತಿಲ್ಲ ಕೇಳಿದಾಗಿನಿಂದಲೂ ಮನಕೆ  ಅತೀ ಹತ್ತಿರವದಂತಿದೆ ಎದ್ದಾಗ ಮಲಗುವಾಗ ಒಂಟಿಯಾಗಿದ್ದಾಗ ಕೇಳಬೇಕೆನ್ನಿಸುವಂತಿದೆ... ಅದೇನು ಪದ ಜೋಡಣೆಯೋ - ಹಾಡುಗಾರನ ಕಲೆಯೋ - ಸಂಗೀತದ ಮುದವೋ ಅಥವಾ ನಮ್ಮೊಳಗಿನ ಭಾವನೆಯ ಆಟವೋ ಅರಿಯದು ಆದರೆ ಈ ಆಲ್ಬಂ ಸಾಂಗ್ ನಮ್ಮ ಭಾವನೆಗಳನ್ನು ಕೆದರುವುದಂತು ಸುಳ್ಳಲ್ಲ. ನಿರ್ದೇಶನ : ಧ್ರುವ ಬೋರಯ್ಯ ಸಂಗೀತ - ಸಾಹಿತ್ಯ - ಗಾಯನ : ವಿಶ್ವನಾಥ ಪೈ 🎶🎵ಮತ್ತೆ ನೆನಪಾಗಿಹೆ . ಕೈ ಗೆಟುಕದ ಹೂವೆ ಬೇಕಾಗಿಹೆ ನೋಡು ನೆರಳೀಗ ಕೈ ಬೀಸಿ ಕರೆಯುತಿದೆ ಎದೆಯ ವರದಿ ಕೇಳು ಒಮ್ಮೆ ಅರೆ ಕ್ಷಣ ನೀ ಕುಳಿತು ತಬ್ಬಿಬ್ಬು ಆಗಿಹೆ ಈ ಪ್ರೀತಿಯಲಿ ಮಾತುಗಳ ಮರೆತು ಸಣ್ಣ ಕೋರಿಕೆ , ಬೇರಿಲ್ಲ ಕಾಣಿಕೆ ನಿನ್ನ ನಗುವಿಗೆ ಕಾರಣ ನಾನಾಗಲೇ ….??? ಕಳೆದೆ ಇರುಳು ಕಹಿ ನೋವಿನಲು ಸವಿ ನಾಳಿಗೆ ಕಾಡು ಕುಳಿತು ಬಯಸಿ ಬಂದೆ ಸಮೀಪದಲಿ ತುಸು ಭಾರವೆ ಈ ನೆರಳು ಕೊನೆಯ ಭೇಟಿಗೆ ನೀಡೊಮ್ಮೆ ಒಪ್ಪಿಗೆ ಈ ಹೃದಯಕೆ ನೀಡೆಯಾ ಪರವಾನಿಗೆ …??? ಮತ್ತೆ ನೆನಪಾಗಿಹೆ..!!🎵🎧 Listen & watch here :  ಮತ್ತೆ ನೆನಪಾಗಿಹೇ...!!  👍

ಕತ್ತಲ ಹಾದಿ

Image
ಕತ್ತಲ ಹಾದಿ  ಅದೊಂದು ಕತ್ತಲೆಂಬಂತೆ ಭಾವ ಸಾಲಿಗೆ ನಿಂತ ಬೀದಿ ದೀಪಗಳು ಕತ್ತಲನ್ನು ನುಂಗಿ ಹಾಕುತ್ತಿದ್ದವು... ತಲೆಯಲ್ಲಿದ್ದ ಯೋಚನೆಗಳು ಆಗಸದ ಮೋಡಗಳಂತೆ ಒಂದನ್ನೊಂದು ಹಿಂದಿಕ್ಕಿ ಓಡುತ್ತಿದ್ದವು... ಕಾಲುಗಳು ತಮ್ಮಿಷ್ಟದಂತೆ  ಮುಂದಡಿ ಇಡುತ್ತಿದ್ದರೂ ಏನೂ ಅರಿಯದ ಭಾವ ತುಂಬಿದ ದೇಹ... ಗುರಿ ಅರಿಯದ ಮನಕೆ ಏನೋ ಮಾಡುವ ಹಂಬಲ ಒಮ್ಮೊಮ್ಮೆ ಗಡಿ ಮೀರುತ್ತಿದ್ದ ಆಲೋಚನೆಗಳು... ಅಷ್ಟರಲ್ಲಿ  ವಾಸ್ತವ ಅರಿಯುತ್ತಿದ್ದ ತಲೆಗೆ ಏನೂ ಕಾಣದ ಮನಸ್ಥಿತಿ ... ತುಸು ದೂರದಲಿ ಸೂರು ಕಾಣಲು ಕೊನೆ ಗೋಚರವಾದಂತೆ ಎಲ್ಲವೂ ಮಾಯವಾಗಿ  ನಿದ್ರಾದೇವಿಯೇ ಆಸ್ತಿಯಾದಳು... !!

ಕನ್ನಡಿಗನ ಮನವಿ

Image
ಸಾಂಧರ್ಭಿಕ ಚಿತ್ರ ಈಗೊಂದು ತಿಂಗಳ ಕೆಳಗೆ ನಮಗೆ ರಜೆ ಇದ್ದ ಸಂದರ್ಭ ಎಂದೆಣಿಸುತ್ತೇನೆ. ಮನೆಯಲ್ಲಿದ್ದ ನನ್ನನ್ನು ದೊಡ್ಡಪ್ಪ ಕರೆದರು. ನಾನು ಅವರೊಂದಿಗೆ ಪಕ್ಕದೂರಿಗೆ ಬ್ಯಾಂಕಿಗೆ ಹೋಗಬೇಕಾಗಿ ಬಂತು, ಸರಿ ಹೊರಟೆ. ತಕ್ಕ ಮಟ್ಟಿಗೆ ಓದಿದವರೇ, ಆಗಿನ ಕಾಲಕ್ಕೆ ಐದು-ಆರನೇ ತರಗತಿ ಹೆಚ್ಚಲ್ಲವೇ?! ಆದರೆ ಸಮಸ್ಯೆ ಅದಲ್ಲ ಬ್ಯಾಂಕಿನ ಚೀಟಿಗಳಲ್ಲಿರುವ ಭಾಷೆ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ. ಓಕೆ ಆ ಸಂದರ್ಭದಲ್ಲಿ ನಾನವರಿಗೆ ನೆರವಾದೆ. ವಾಪಾಸು ಬರಲು ಅಣಿಯಾಗುವಾಗ "ತಮ್ಮಾ, ಇದೊಂಚೂರು ಏನು ನೋಡ್ತೀಯಾ?!" ಶಬ್ದ, ತಿರುಗಿ ನೋಡಿದೆ. ೫೦-೫೫ ವರ್ಷದವ ಮಗನಿಗೆ ಹಣ ತುಂಬಲು ಚಲನ್ ಬರೆಯಬೇಕಿತ್ತು, ಆಯ್ತು ಬರೆದುಕೊಟ್ಟೆ. ಸುತ್ತಲೂ ನೋಡಿದೆ ಅಲ್ಲಲ್ಲಿ ಅದೇ ವಾತಾವರಣ. ಇನ್ನೇನು ಮನೆ ಕಡೆಗೆ ಹೊರಟೆ, ಮಿರ್ಚಿ-ಮಂಡಕ್ಕಿ ತಿಂದು.            ಸುಮ್ನೆ ಉದಾಹರಣೆಗೆ ಇರ್ಲಿ ಅಂತ ಹೇಳ್ದೆ ಅಷ್ಟೇ.  ಇದೇ ಪರಿಸ್ಥಿತಿ ರೈಲ್ವೇ, ಅಂಚೆ ಕಛೇರಿ, ಗ್ಯಾಸ್ ಸಿಲಿಂಡರ್, ಪಾಸ್ ಪೋರ್ಟ್, ಇತ್ಯಾದಿ ಎಲ್ಲೆಡೆ ಸರ್ವೇ ಸಾಮಾನ್ಯ. ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬಲ್ಲಿ, ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಆದಿ ತೀರ

ಏಕಾಂಗಿ

ಮೇಳೈಸಿದ ಬೆಳಕಿನ ಹಬ್ಬ ಎಲ್ಲೆಲ್ಲೂ ಮಧುರ ವಾದ್ಯಗೋಷ್ಠಿ, ಹಾಡುವವರು ಹಾಡುತ ಕುಣಿಯುವವರು ಕುಣಿಯುತ ಅವರವರ ಲೋಕದಲಿ, ಆ ಹಾದಿ - ಈ ಬೀದಿ ಎಲ್ಲವೂ ವರ್ಣಮಯ, ಎಷ್ಟೊಂದು ಆಡಂಬರ ಎಲ್ಲಾ ನಮ್ಮವರೇ ...!! ಅದೋ ಅಲ್ಲಿ.., ಜನಜಂಗುಳಿಯ ನಟ್ಟ ನಡುವಿನಲಿ, ನಿಂತಿಹನು ಎಲ್ಲಾ ಇದ್ದೂ 'ಏಕಾಂಗಿ'ಯಾಗಿ, ತನ್ನದೇ ಲೋಕದಲ್ಲಿ , ಸ್ವಾರ್ಥ ಜಗತ್ತಿನಿಂದ ದೂರಾಗಿ ...!! *******************   October 01, 2017 ಎಲ್ಲರೂ ನಿನ್ನೊಂದಿಗಿದ್ದಾಗ ಎಲ್ಲರೊಂದಿಗೂ ನೀನಿರುವಾಗ ಒಂದು ಉಸಿರಿಗಾಗಿ ನೀ ಎಲ್ಲವ ಬಿಟ್ಟು ನಡೆದೆ, ನಡೆವ ಹಾದಿ ಗುರುತೇ ಆಗಲಿಲ್ಲ. ಆದರೆ ಈಗ, ಕಾಲ ಬದಲಾಗಿದೆ ಒಂದು ಉಸಿರು ಕ್ಷಣಿಕವೆಂಬಂತೆ ತನ್ನ ದೀರ್ಘಕಾಲಿಕರನ್ನು ಸೇರಿದೆ ನೀನು ತೃಣ-ತುಚ್ಚವಾಗಿದ್ದೀಯೇ ನಿನಗಾಗಿ ಆರು ಇಲ್ಲ ನೀನು ಹುಟ್ಟುತ್ತಲೂ ಏಕಾಂಗಿ ಇನ್ನು ಕೊನೆಯವರೆಗೂ ಏಕಾಂಗಿ.

ಉಲ್ಲಾಸ

ವ್ಹಾ...!! ಹಿಡಿದಿದ್ದ ಕಬಂಧ ಬಾಹುಗಳೆಲ್ಲಾ ಒಮ್ಮೆಲೇ ಬಿಟ್ಟರೆ ಎಂತಾ ಉಲ್ಲಾಸ

ಅಪೂರ್ವ

ಒಮ್ಮೆಲೇ ಉಸಿರು ಹಾರಿ, ಸುತ್ತಲೂ ಕತ್ತಲಾಗಿ ಎಲ್ಲವೂ ಸ್ತಬ್ಧವಾಗಿದೆ ಇಲ್ಲದ ಮನಸ್ಸಿನಿಂದ ಬೆಂಕಿ ಪೊಟ್ಟಣವ ತಡಕಾಡಬೇಕಿದೆ, ಛೇ...!! ಯಾರನ್ನು ಶಪಿಸುವುದು .. ಗಾಳಿಯನ್ನೋ ...?! ದೀಪದ ಎಣ್ಣೆಯನ್ನೋ...?!

ಮೂಟೆ

ಕನಸುಗಳ ಮೂಟೆ ಹೊತ್ತು,  ಬಹುದೂರ ಸಾಗಿ...... ಕಡಲಿಗಾಗಿ ಹುಡುಕುತಿರುವೆ ಎಲ್ಲವನು ಒಮ್ಮೆಲೆ ಮುಳುಗಿಸಲು ... !!

ಒಡಲು

ನೀನೊಮ್ಮೆ ಶರಧಿಯಾಗು ಸಾಕು, ಹಳ್ಳ-ಕೊಳ್ಳದೊಳ ಸೇರಿ ಕಾಡು-ಕಾನನವ ಸುತ್ತಿ ನದಿಯಾಗಿ ಬಂದೊಮ್ಮೆ  ನಿನ್ನೊಡಲ ಸೇರಿ ಬಿಡುವೆ...!!

ನಶ್ವರ

ನಿನ್ನೆ ಇದ್ದವರು ಮಲಗಿಹರು ಹಾಯಾಗಿ ತಮಗರಿಯದ ಜಾಗದಲಿ, ಇಂದಿನವರು ಬಡಿದಾಡುತಿಹರು  ತಮಗುಳಿಯದ ಜಾಗಕಾಗಿ...!!   

ಸಮಯ - ಮಾತು

ಸಮಯವ ನನ್ನೊಂದಿಗೆ ನಾನೆ ಕಳೆದು - ಮಾತು ಬೇಡವೆನಿಸಿದೆ ... !!

ಹಣತೆ

ಹಣತೆ ಆರಲು ಅಡಿ ಇಡುತಿದೆ, ಬತ್ತಿ ಇರುವ ಉಸಿರ ಒಗ್ಗೂಡಿಸಿ ಹೋಗಿ - ಬರುವವರ ಬೇಡುತಿದೆ, ಹುಟ್ಟಿನಿಂದಲೇ ಕತ್ತಲಿನೊಂದಿಗೆ ಜಿದ್ದಿಗೆ ಬಿದ್ದಿರುವ ಬೆಳಕಿನ ಸಾರಥಿಯ ಜೀವ ಅಳಿಯುವ ಅನತಿ ದೂರದಲ್ಲಿದೆ, ಬೇಕಾದವರು ಜೀವ ಜಲವ ನೀಡಿ ಪೊರೆಯಬೇಕಿದೆ...!!

ಹಾಳೆ - ಪೆನ್ನು

ನನ್ನದಲ್ಲದ ಹಾಳೆಯಲಿ ಸಿಕ್ಕ ಪೆನ್ನು ಹಿಡಿದು ಎಷ್ಟುದ್ದ ಗೀಚಿದರೇನು ...!?!

ಮುಗುಳು ನಗು

ನೀ ಮುಗುಳು ನಗು  ಸಾಕು, ನಾ ಸೋಲಿಸಿದಂತೆ ಎಲ್ಲರನು ... !

ಅಗೋಚರ

ಎಲ್ಲರೊಳಗೊಂದಾಗಿ ಲೋಕದೊಳು ತಾನಾಗಿ ಅರಿಯಲಾಗದ ಜಗದಿ ಇರಲಾಗದ ಜೋಗಿ ಜೋಳಿಗೆಯ ಬದಿಗಿಟ್ಟು ಹೊರಟನು ಅಗೋಚರದೆಡೆಗೆ..!!