ಭಾಸ


ಸುಯ್ಯ್... ಸ್ಸ್....
ಎಂದು ಸದಾ ಸುತ್ತುತ್ತಿದ್ದ ಗಾಳಿ
ಇಂದು ಸದ್ದಿಲ್ಲದೇ ನಿಂತು ಹೋಗಿದೆ |

ಕೇಳದಿದ್ದ ಮೆಟ್ರೋ ಶಬ್ದ
ಈಗ ನಾನೂ ಇಲ್ಲಿದ್ದೇನೆ ಎಂಬಂತೆ
ಗರ್ವದಿಂದ ಗಿರಕಿ ಹೊಡೆಯುತ್ತಿದೆ |

ಹುಚ್ಚು ಬಂದಂತೆ ಕುಣಿಯುತ್ತಿದ್ದ
ಮರದ ರೆಂಬೆ ಕೊಂಬೆಗಳು
ಶಾಕ್ ಹೊಡೆಸಿಕೊಂಡ ಕಾಗೆಗಳಂತೆ
ಸೆಟೆದು ನಿಂತಿವೆ |

ಅರೇ ನಾನಿರುವಲ್ಲಿಯೂ ಹಕ್ಕಿ-ಪಕ್ಷಿಗಳಿವೆ,
ಅದೋ ಮದುವೆಯಾದ ಗಂಡಿನ ಕಷ್ಟವೂ 
ಪಕ್ಕದ ಮನೆಯಿಂದ ಕೇಳುತಿದೆ |

ಒಟ್ಟಿನಲ್ಲಿ, ಬಾಲ ಸುಟ್ಟ 
ಬೆಕ್ಕಿನಂತೆ ತಿರುಗುತ್ತಿದ್ದ ಗಾಳಿಯು ಇಲ್ಲದಾಗಿ
ಹೊಸತೇನೆನೋ ಕಾಣುತಿದ್ದರೂ,
ಅತಿಮುಖ್ಯವಾದುದೇನೋ ಕಳೆದುಹೋಗಿರುವ ಭಾವ
ಭಾಸವಾಗಿದೆ.

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ