Posts

Showing posts with the label ಲೇಖನ

ಒಂದು ಅಲಾರಾಂನ ಕಥೆ

Image
ಪಿಯು ಓದುವ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ‌ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಜ್ಯೋತಿ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ‌ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು‌‌. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ.      ನಮ್ಮ‌ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರ...

ಪೆಟ್ರೋಲ್ ಬಂಕು

ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ‌ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ.           ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು‌ ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು...           ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು.  ‌          ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ...

ಪಾಪ ದೇವರು!!

ಹೀಗೆ ಹಿರಿಯ ಗೆಳೆಯರೊಬ್ಬರ ಜೊತೆ ಮಾರನೇ ದಿನ ಇದ್ದ ಪರೀಕ್ಷೆಯೊಂದರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರು ಅದೇ ತಮ್ಮ ಜೀವನದ ನಿರ್ಣಾಯಕ ಪರೀಕ್ಷೆ ಅದರಲ್ಲಿ ಸೋತರೆ‌ ಜೀವನವೇ ಮುಗಿದಂತೆ‌ ಅನ್ನೋ ಪರೀಕ್ಷಾ ಭಯದಲ್ಲಿ ಮುಳುಗಿ, ಆರಾಮಾಗಿದ್ದ ನನಗೂ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು.   ನಾನು ವಿಚಲಿತನಾಗದೆ, ಸಮಚಿತ್ತದಿಂದ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಓದಿ ಮುಗಿಸಿ, ಅತೀವ ಆತ್ಮಸ್ಥೈರ್ಯದಿಂದ ಇದ್ದೆನೆಂದಲ್ಲ. ಮಾರನೇ ದಿನ ಇದ್ದ ಪರೀಕ್ಷೆ ನನಗೆ ಪ್ರಮುಖವಾಗಿರಲಿಲ್ಲ ಅದು ನನ್ನ  ಪರೀಕ್ಷೆಯಾಗಿತ್ತೆಂದರೆ ತಪ್ಪಲ್ಲ. ಹಾಗಾಗಿ ಆ ಪರೀಕ್ಷೆಗೆ ಕಟ್ಟಿದ್ದೆನೇ ಹೊರತು ಯಾವುದೇ ತಯಾರಿ ಮಾಡಿರಲಿಲ್ಲ. ಹೀಗೆ ಮಾತುಕತೆಯಲ್ಲಿ,  ಗೆಳೆಯರು: ನೀವಿಷ್ಟು ಆರಾಮಾಗಿದ್ದೀರಾ, ಎಲ್ಲವೂ ಮುಗಿಸಿದ್ದೀರಾ ಅನ್ಸುತ್ತೆ... ನಾನು: ಹಾಗೇನಿಲ್ಲ, ನಾಳೆ‌ ಪರೀಕ್ಷೆಯ ನನ್ನ ಎಲ್ಲಾ ಭಾರವನ್ನೂ ದೇವರ ಮೇಲೆ ಹಾಕಿ ಬಿಟ್ಟಿದ್ದೇನೆ ಹಾಗಾಗಿ ಚಿಂತೆಯಿಲ್ಲ. ಗೆಳೆಯರು: ಅಯ್ಯೋ! ಪಾಪ!! ದೇವರು!!! ನನಗೂ ಇಲ್ಲಿ ವಿಡಂಬನೆ ಅರಿಯಲು ಸ್ವಲ್ಪ ಸಮಯ ಬೇಕಾಯಿತು, ಆದರೆ ಆ ಭಯದಲ್ಲೂ ಅವರ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಳಿಸಿತು.

ಬಸ್ಸು-ಬೆಂಗಳೂರು

Image
ಜೀವನ ಎಷ್ಟು ಸುಂದರ ಅಲ್ವಾ, ಜೀವನ ಅನ್ನೋ ದಾರೀಲಿ ಅದೆಷ್ಟು ಅನುಭವ ಪಡಿತೀವಿ, ಆದೆಷ್ಟು ತರಹದ ಜನ ನೋಡ್ತೀವಿ, ಜೀವನದಲ್ಲಿ ಏಗೋದು ತುಂಬಾ ಕಷ್ಟ ಆದ್ರೆ ಅಷ್ಟೇ ಅದ್ಭುತ. ಎಷ್ಟೋ ಜನ ಬಾಳಲ್ಲಿ ತುಂಬಾ ದಿನ ಇರ್ತಾರೆ ಅನ್ಕೊಂಡವ್ರು ಸಡನ್ ಮಾಯ ಆಗ್ತಾರೆ, ಕಮ್ಮಿ ದಿನ ಇದ್ದವ್ರು ಪರ್ಮನೆಂಟ್ ಆಗ್ಬಿಡ್ತಾರೆ ಏನೋಪಾ ಇದೆಲ್ಲಾ ಜೀವನದ ಹುಚ್ಚಾಟಗಳು. ಯಾಕೆ ಇದೆಲ್ಲಾ ಅಂದ್ರೆ, ೧೮/೦೬/೨೦೧೭ ಕ್ಕೆ ಇ-ಲಿಟ್ಮಸ್ ಎಕ್ಸಾಮ್ ಬರಿಯಣ ಅಂತ ಬೆಂಗ್ಳೂರಿಗೆ ಹೋಗಿದ್ದೆ. ಬೆಳಿಗ್ಗೆ ೪:೩೦ ಕ್ಕೆ ಮೈಸೂರಿಂದ ಬಸ್ ಹತ್ತಿ ಹೊರಟೆ. ಸುಮಾರು ೭:೧೦ ಕ್ಕೆ ಸ್ಯಾಟಲೈಟ್ ಸ್ಟೇಷನ್ ಗೆ ಇಳ್ದು ಮ್ಯಾಪ್ ಹಾಕಿ ನೋಡಿದೆ, ೯ ಕಿ.ಮೀ. ಇತ್ತು ಬಾಲ್ಡ್ವಿನ್ ಹೈ ಸ್ಕೂಲ್ ಅಲ್ಲೇ ನನ್ ಎಕ್ಸಾಮ್ ಇದ್ದಿದ್ದು. ಅಲ್ಲಿಂದ ಮೇಲೆ ಇರೋ BMTC bus stand ಗೆ ಬಂದೆ. I was waiting for the bus no. K4 which was showing in Google maps. But it  didn't arrive, ಸೋ I asked a Tea stall holder, he said "ಹಿಂದೆ ಹೋಗಿ ಸಿಗತ್ತೆ ", ಅರೇ ಅಲ್ಲಿಂದಾನೆ ಬಂದಿದೀನಿ ಅಲ್ಲಿ ಮೆಜಸ್ಟಿಕ್ ಕನೆಕ್ಷನ್ ಬಸ್ ಬಿಟ್ರೆ ಬೇರೆ ಯಾವ ಬಸ್ಸು ಬರಲ್ಲ. ಸರಿ ಅಲ್ಲೇ ಬಂದ ಬಸ್ಸಿನ ಕಂಡಕ್ಟರ್ ಕೇಳ್ದೆ ಅವ್ರ್ ಹೇಳಿದ್ರೂ ಆನಂದ ಭವನ್ ಎದುರುಗಡೆ ಸ್ವಲ್ಪ ಮುಂದಿರೋ ಬಸ್ ಸ್ಟಾಪ್ಗೆ ಹೋಗಿ ಅಂತ. ಅಲ್ಲಿ ಹೋದೆ ಅಲ್ಲೂ ಯಾವ್ದ್ಯಾವ್ದೋ ಬಸ್ ಬರ್ತಿತ್ತು ಸರಿ ಅಂತ ಅ...

India - Farmer

Image
Only people who live in the cities are citizen’s!!.Media and government actions seems to be in that way that, people who live in rural part are uncivilized suggestively. Each year’s budget or any yojanas ( projects) is confined only to cities like Bengaluru, No projects have been to useful to villages, none of projects made keeping villages solely in mind. Every year any party coming to power just makes lame effort to solve problems of farmers across. Even during the terrible famine governments just care for supplying water in any means to the cities but never they support villagers or farmers .Dam-lakes were built keeping main objective of agriculture ,providing water to farming ,but those built dam-lakes are now confined for supplying water to cities. Farmers are quitting agriculture, leaving villages due to unavailability of feeds to chattels and even unavailability water for farming. Due to no income by any means farmers are committing suicide . Even after such so many suic...

ರೈತ - ಭಾರತ

Image
ನಗರಗಳಲ್ಲಿ ವಾಸಿಸುವವರು ಮಾತ್ರ ನಾಗರಿಕರು, ಗ್ರಾಮೀಣ ಭಾಗದಲ್ಲಿ ವಾಸಿಸುವವರು ಅನಾಗರಿಕರೇನೋ ಎಂಬ ಭಾವ ಮೂಡಿಸುವಂತೆ ಮಾಧ್ಯಮ ಹಾಗೂ ಸರ್ಕಾರದ ನಡೆಗಳು ತೋರುತ್ತವೆ. ಪ್ರತೀ ಬಾರಿಯ ಬಜೆಟ್ ಅಥವಾ ಯಾವುದೇ ಯೋಜನೆಗಳಲ್ಲಾದರೂ ಬೆಂಗಳೂರಿಗಿಷ್ಟು, ಬೆಳಗಾವಿಗಿಷ್ಟು ಎಂಬ ಯೋಜನೆ ಕೇಳಿದ್ದೇವೆಯೇ ಹೊರತು ಆ ಹಳ್ಳಿಗಿಷ್ಟು ಈ ಹಳ್ಳಿಗಿಷ್ಟು ಎಂದು ಎಲ್ಲೂ ಕೇಳೋಲ್ಲ. ಪ್ರತಿ ಬಾರಿಯೂ ರೈತನನ್ನು ಮುಂದಿಟ್ಟುಕೊಂಡು ಕಣ್ಣೊರೆಸುವ ನಾಟಕವನ್ನು ಎಲ್ಲಾ ಪಕ್ಷಗಳು ಮಾಡಿಯೇ ತೀರುತ್ತವೆ.              ಭಯಾನಕ ಬರಗಾಲದ ಸಮಯದಲ್ಲೂ ನಗರಗಳಿಗೆ ನೀರೊದಗಿಸಲು ಸರಕಾರಗಳು ಮುಂದಾಗುತ್ತವೆಯೇ ಹೊರತು ಹಳ್ಳಿಗರ ಗೋಳು ಎಂದಿಗೂ ಕೇಳಲಾರವು. ಕೃಷಿಯೇ ಮುಖ್ಯ ಉದ್ದೇಶವಾಗಿ ನಿರ್ಮಿಸಿದ ಆಣೆಕಟ್ಟೆ-ಕೆರೆ ಗಳು ಈಗ ನಗರಗಳಿಗೆ ನೀರು ಸರಬರಾಜು ಮಾಡುವ ಆಗರಗಳಾಗಿವೆ. ರಾಸುಗಳಿಗೆ ಮೇವಿಲ್ಲದೇ, ಇತ್ತ ಬೆಳೆಯೂ ಇಲ್ಲದೇ, ಬೆಳೆಸಾಲ - ಕುಡಿವ ನೀರಿಗೂ ಹಾಹಾಕಾರವಾಗಿ ಹಳ್ಳಿ ತೊರೆದು ರೈತ ಗುಳೇ ಹೊರಟಿದ್ದಾನೆ. ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾನೆ. ಇದೆಲ್ಲದರ ಮೇಲೂ ಸರಕಾರಗಳಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಮಹಾನಗರಗಳ ಹೆಸರು ಕಾಣಲು ಉತ್ಸಾಹ. ಸಾಯುವವರು ಸತ್ತರೆ ನಮಗೇನು ನಷ್ಟ ಎಂಬಂತೆ ಅವರ ಭಾವ.              ಇದನ್ನೇ ನೋಡುತ್ತಾ ಬೆಳೆಯುವ ಯುವ ಜನತೆ ಮುಂದೊಂದು ದಿನ ಊರ ಬಾಗಿಲು ...

ಭಾರತ - ಕನ್ನಡ

Image
೧೮೫೭ ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭ ಆಯ್ತು. ಇದಾದ ನಂತರ ಅನೇಕ ಚಳುವಳಿಗಳು, ದಂಗೆಗಳು ನಡೆದು ಹೋದುವು. ಅಸಂಖ್ಯ ಹೊರಟಗಾರರು ನಡೆಸಿದ ಅವಿರತ ಪ್ರಯತ್ನದ ಫಲವಾಗಿ ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ತು. ಆದರೂ ಅಖಂಡ ಭಾರತದ ಕನಸು ಕನಸಾಗಿಯೇ ಉಳಿಯುವಂತಾಯ್ತು. ಇನ್ನು  ಸಂವಿಧಾನ ಅಸ್ತಿತ್ವಕ್ಕೆ ಬಂದದ್ದು ೧೯೫೦ ರಲ್ಲಿ. ಭಾಷಾವಾರು ಪ್ರಾಂತ್ಯಗಳ ರಚನೆ ಆಗಿದ್ದು ೧೯೫೬ ರಲ್ಲಿ.                ಇದೇ ರೀತಿ ಕನ್ನಡ ಭಾಷೆ, ಸುತ್ತಲಿನ ವಾತಾವರಣ ಹಾಗೂ ಅನೇಕ ನಿರ್ದಿಷ್ಟ ಕಾರಣಗಳೊಂದಿಗೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉಗಮವಾಯಿತು, ಕಾಲಾಂತರದಲ್ಲಿ ಇದು ಕರ್ನಾಟಕ ರಾಜ್ಯವೂ ಆಯ್ತು. ಕನ್ನಡ ಈಗ ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದು. ಸುಮಾರು ೧೭೦೦ ವರ್ಷಗಳಿಗೂ ಹಳೆಯ ಇತಿಹಾಸ ಹೊಂದಿರುವ ಭಾಷೆ. ತನ್ನ ಸಾಹಿತ್ಯವನ್ನು ವಿವಿಧ ಪ್ರಕಾರಗಳಲ್ಲಿ ಸಂಪನ್ನವಾಗಿಸಿಕೊಂಡಿದೆ.                   ೧೯೪೭ ಕ್ಕಿಂತ ಹಿಂದೆ ತಮ್ಮ ದೇಶ ಯಾವುದು ಎಂಬುದಕ್ಕೆ ಉತ್ತರಗಳೇ ಬೇರೆ ಇದ್ದವೋ ಏನೋ.! ಆದರೆ ಬ್ರಿಟಿಷರು ತೊಲಗಿದ ನಂತರ ಇದು ತಾಯಿ ಭಾರತಾಂಬೆಯ ಆಸ್ಥಾನವಾಯಿತು. ಮೊದಲ ದಂಗೆಯಿಂದ ಇಲ್ಲಿಯವರೆಗೂ ಸುಮಾರು ೧೫೦ ವರ್ಷಗಳಾಗಿರಬಹುದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಾರ ಏಕೋ ಕ್ರಮೇಣ ಬದ...

ರಾಜಕೀಯ ಬಿಕ್ಕಟ್ಟು

Image
ನಮ್ಮದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲವೂ ಪ್ರಜೆಯ ಆಯ್ಕೆಯಂತೆಯೇ ನಡೆಯಬೇಕು. ಆದರೆ ಇದು ವಾಸ್ತವವಾಗುವುದು ಮಾತ್ರ ಕೆಲವೊಮ್ಮೆ.  ಹಲವು ಬಾರಿ ಆಯ್ಕೆ ಮಾಡುವಲ್ಲಿಗೆ ಅಂತ್ಯವಾಗುವ ಮತದಾರನ ಅಧಿಕಾರ. ಇದಕ್ಕೆ ಸಾಕ್ಷಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟುಗಳು.             ಸದಾ ಆರೋಪ ಪ್ರತ್ಯಾರೋಪ, ದಬ್ಬಾಳಿಕೆ, ಭ್ರಷ್ಟಾಚಾರ, ಹಗರಣ, ಅಧಿಕಾರ ದುರ್ಬಳಕೆ ಮತ್ತು ಇನ್ನಿತರೆ ಹತ್ತು ಹಲವು ಆಯಾಮಗಳೇ ನಮ್ಮ ಸದ್ಯದ ರಾಜಕೀಯ ಕಾರ್ಯವೈಖರಿಯ ಸಾಧನಗಳು. ಬೇಡದಿರುವ ಯೋಜನೆಗಳು, ಉಪಯುಕ್ತ ಯೋಜನೆಗಳ ಮೂಲೆಗುಂಪು, ನೆಪಮಾತ್ರದ ಅಧಿವೇಶನಗಳು, ಅಭಿವೃದ್ಧಿಗಿಂತ ಪ್ರಕೃತಿ ನಾಶಕ್ಕೆ ಒತ್ತು  ಹಾಗಂತ ಆಡಳಿತ ಪಕ್ಷಗಳೇ ಹೊಣೆಯಾಗಬೇಕಿಲ್ಲ. ಪರೋಕ್ಷವಾಗಿ ಇತರ ಪಕ್ಷಗಳು ಸಮಸ್ತ ನಾಗರಿಕರು ಸಮಾನ ಹೊಣೆಗಾರರು.             ರಾಜಕೀಯ ಬಿಕ್ಕಟ್ಟು ಒಂದು ರೀತಿ ಭಾರತದ ಸಂವಿಧಾನಕ್ಕೇ ಅಪಮಾನ ಇದ್ದಂತೆ. ವಿಶ್ವದಲ್ಲೇ  ಅತೀ ದೊಡ್ಡ ಸಂವಿಧಾನ ಇದಾಗಿದ್ದು ಅಂತಹ ಸಂವಿಧಾನವನ್ನೂ ಮೀರುವಂತೆ ನಮ್ಮ ಕೆಲವು ಚುನಾಯಿತ ರಾಜಕಾರಣಿಗಳು  ಕೆಲವೊಮ್ಮೆ ವರ್ತಿಸಿಬಿಡುತ್ತಾರೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿನ ತಂದೆ ಮಗನ ನಡುವಿನ ರಾಜಕೀಯ ಬಿಕ್ಕಟ್ಟು ಮತ್ತು  ಪಕ್ಕದ ತಮಿಳುನಾಡಿನ ...

ಕನ್ನಡಿಗನ ಮನವಿ

Image
ಸಾಂಧರ್ಭಿಕ ಚಿತ್ರ ಈಗೊಂದು ತಿಂಗಳ ಕೆಳಗೆ ನಮಗೆ ರಜೆ ಇದ್ದ ಸಂದರ್ಭ ಎಂದೆಣಿಸುತ್ತೇನೆ. ಮನೆಯಲ್ಲಿದ್ದ ನನ್ನನ್ನು ದೊಡ್ಡಪ್ಪ ಕರೆದರು. ನಾನು ಅವರೊಂದಿಗೆ ಪಕ್ಕದೂರಿಗೆ ಬ್ಯಾಂಕಿಗೆ ಹೋಗಬೇಕಾಗಿ ಬಂತು, ಸರಿ ಹೊರಟೆ. ತಕ್ಕ ಮಟ್ಟಿಗೆ ಓದಿದವರೇ, ಆಗಿನ ಕಾಲಕ್ಕೆ ಐದು-ಆರನೇ ತರಗತಿ ಹೆಚ್ಚಲ್ಲವೇ?! ಆದರೆ ಸಮಸ್ಯೆ ಅದಲ್ಲ ಬ್ಯಾಂಕಿನ ಚೀಟಿಗಳಲ್ಲಿರುವ ಭಾಷೆ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ. ಓಕೆ ಆ ಸಂದರ್ಭದಲ್ಲಿ ನಾನವರಿಗೆ ನೆರವಾದೆ. ವಾಪಾಸು ಬರಲು ಅಣಿಯಾಗುವಾಗ "ತಮ್ಮಾ, ಇದೊಂಚೂರು ಏನು ನೋಡ್ತೀಯಾ?!" ಶಬ್ದ, ತಿರುಗಿ ನೋಡಿದೆ. ೫೦-೫೫ ವರ್ಷದವ ಮಗನಿಗೆ ಹಣ ತುಂಬಲು ಚಲನ್ ಬರೆಯಬೇಕಿತ್ತು, ಆಯ್ತು ಬರೆದುಕೊಟ್ಟೆ. ಸುತ್ತಲೂ ನೋಡಿದೆ ಅಲ್ಲಲ್ಲಿ ಅದೇ ವಾತಾವರಣ. ಇನ್ನೇನು ಮನೆ ಕಡೆಗೆ ಹೊರಟೆ, ಮಿರ್ಚಿ-ಮಂಡಕ್ಕಿ ತಿಂದು.            ಸುಮ್ನೆ ಉದಾಹರಣೆಗೆ ಇರ್ಲಿ ಅಂತ ಹೇಳ್ದೆ ಅಷ್ಟೇ.  ಇದೇ ಪರಿಸ್ಥಿತಿ ರೈಲ್ವೇ, ಅಂಚೆ ಕಛೇರಿ, ಗ್ಯಾಸ್ ಸಿಲಿಂಡರ್, ಪಾಸ್ ಪೋರ್ಟ್, ಇತ್ಯಾದಿ ಎಲ್ಲೆಡೆ ಸರ್ವೇ ಸಾಮಾನ್ಯ. ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬಲ್ಲಿ, ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಆದಿ...