ಕಾಲೇಜು ಮುಗಿದ ಬಳಿಕ ಮೈಸೂರಿಗೆ ಹಿಂದಿರುಗಿದಾಗ, ಸುಂದರ ತಾಣ ತೊಣ್ಣೂರು ಕೆರೆಗೂ ಹೋಗುವ ಮನಸಾಯಿತು. ಹಿಂದೊಮ್ಮೆ ಗೆಳೆಯರ ಜೊತೆ ಹೋಗಿದ್ದು ಆ ಸ್ಥಳ ಹಾಗೂ ಅಲ್ಲಿಯ ಸೂರ್ಯಾಸ್ತಮಾನ ನನ್ನ ಮನಸೂರೆಗೊಂಡಿತ್ತು. ಬೆಂಗಳೂರಿನಿಂದ ಬೆಳಗ್ಗೆ ನನ್ನ ಬೈಕ್ ನಲ್ಲೇ ಹೊರಟು ಮೈಸೂರು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ, ಕೆ.ಎಸ್.ಓ.ಯು ಹಾಸ್ಟೆಲ್ ನಲ್ಲಿ ತಂಗಲು ವ್ಯವಸ್ಥೆ ಆಗಿತ್ತು ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆ ತೊಣ್ಣೂರು ಕೆರೆಗೆ ಹೋಗುವ ನಿರ್ಣಯ ಮಾಡಿದೆ. ನಿದ್ದೆಯಿಂದೆದ್ದು ಹೊರಡುವುದು ಸ್ವಲ್ಪ ಸಮಯವಾದ್ದರಿಂದ ಸೂರ್ಯಾಸ್ತದ ಸುಂದರ ಚಿತ್ರಣ ಸಿಗುವುದೋ ಇಲ್ಲವೋ ಎಂಬ ಭಯದಲ್ಲೇ ಹೊರಟೆ. ನಾನು ಅವತ್ತು ಬೈಕ್ ಓಡಿಸಿದ್ದು, ಮುಳುಗಲು ಹೋಗುತ್ತಿರುವ ಸೂರ್ಯನೊಂದಿಗೇ ರೇಸ್ ಹತ್ತಿದಂತಿತ್ತು. ಅಂತೂ ತಡವಾಗದೇ ಸಮಯಕ್ಕೆ ಸರಿಯಾಗಿ ತಲುಪಿದ್ದಾಯಿತು, ಸೂರ್ಯಾಸ್ತ ದರ್ಶನಕ್ಕೆ ಅಡ್ಡಿಯಾಗುವಂತೆ ಮೋಡಗಳಿದ್ದರಿಂದ ಅಷ್ಟೇನು ಸುಂದರವಾಗಿ ಕಾಣುತ್ತಿರಲಿಲ್ಲ, ಇದಕ್ಕೆ ಹಿಂದೆ ನಾನು ನೋಡಿದ ಅಮೋಘ ಸೂರ್ಯಾಸ್ತಮಾನದ ಸ್ಮರಣೆಯೇ ಕಾರಣ ಎಂದರೆ ತಪ್ಪಲ್ಲ. ಈ ಬಾರಿ ಅಲ್ಲೊಂದು ಸಿನೆಮ...
ಮೊನ್ನೆ ಪರೀಕ್ಷೆಯೊಂದರ ಇನ್ವಿಜಿಲೇಷನ್ ಗಾಗಿ ಕಾಲೇಜೊಂದಕ್ಕೆ ಹೋಗಬೇಕಾಯಿತು, ಸ್ವಲ್ಪ ತಡವಾಗಿ ಕೇಂದ್ರ ತಲುಪಿದ ನನಗೆ... ನಾನು ಹೋಗಬೇಕಾದ ಕೊಠಡಿ ಹಾಗೂ ಪತ್ರಿಕೆಗಳ ಕವರ್ ನೀಡಿ ಸಂಯೋಜಕರು ಹಾದಿ ತೋರಿದರು. ಹೋದವನೇ ಉತ್ತರ ಪತ್ರಿಕೆಗಳ ಬಂಡಲ್ ತೆಗೆದು, ಮೊದಲನೇ ಬೆಂಚಿನಲ್ಲಿ ಕೂತಿದ್ದ ಹುಡುಗಿಗೆ ಒಂದು ಶೀಟ್ ತೆಗೆದುಕೊಂಡು ಉಳಿದವನ್ನು ಹಿಂದಕ್ಕೆ ಪಾಸ್ ಮಾಡುವಂತೆ ಹೇಳಿದೆ, ಆ ಹುಡುಗಿ ನನ್ನ ಮುಖವನ್ನೇ ನೋಡುತ್ತಿತ್ತು... ಆಗ ನಾನು ಕನ್ನಡ ಗೊತ್ತಿಲ್ಲವೇನೋ ಎಂದುಕೊಂಡು ಇಂಗ್ಲೀಷಿನಲ್ಲಿ ಒಮ್ಮೆ ಹೇಳಿದೆ, ಆಗಲೂ ಆ ಹುಡುಗಿ ಹಿಂದೆ ತಿರುಗಿ ಸಹಪಾಠಿಯನ್ನು ನೋಡಿ ನಕ್ಕು ಮತ್ತೆ ನನ್ನ ಕಣ್ಣು ಬಾಯಿಯನ್ನೇ ನೋಡಿತು... ಏನಾಗುತ್ತಿದೆ ಎನ್ನುವಷ್ಟರಲ್ಲಿ ನಾನು ಸ್ವಲ್ಪ ಏರು ಧ್ವನಿಯಲ್ಲಿ ಮತ್ತೊಮ್ಮೆ ಹೇಳಿದೆ. ಆಗ ಆ ಮಗು ತನ್ನ ಕಿವಿ - ಬಾಯಿಯನ್ನು ತೋರಿಸುತ್ತಾ ತನಗೆ ಶ್ರವಣ - ಮಾತು ಬರುವುದಿಲ್ಲ ಎಂದು ಸನ್ನೆಯಲ್ಲಿ ತೋರಿಸಿತು... ಅಲ್ಲಿಂದ ಮುಂದೆ ಹತ್ತು-ಹದಿನೈದು ನಿಮಿಷ ನನ್ನ ದೇಹ ಯಾಂತ್ರಿಕವಾಗಿ, ಕೆಲಸ ಮಾಡಿತೇ ವಿನಃ ಮೆದುಳು ಮಾತ್ರ ಮಂಕು ಬಡಿದಂತೆಯೇ ಆಗಿಬಿಟ್ಟಿತು.
ಪಿಯು ಓದುವ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಕವಿತಾ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ. ನಮ್ಮ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರೂ...
Comments
Post a Comment