Posts

Showing posts from June, 2017

ನನಗಾಗಿ

Image
ಬಿದ್ದಂತಿಹುದು ಆಲಿಕಲ್ಲು ಕನಸಿನಲಿ ಬಿತ್ತಿಹಳಾ ರಾಗವ ಮನಸಿನಲಿ ಇರುವ ಹೊತ್ತು ಜೊತೆಗಿದ್ದು,  ಕರಗಿ ಹೋದಾಳೆಂಬ ಭಯ | ಕಣ್ಬಿಟ್ಟರೆ ಮಳೆಯೋ ಮಳೆ ಹರಿದಿಹಳು ಕೈಸಿಗದೆ ಝರಿಯಾಗಿ-ನದಿಯಾಗಿ ಒಡೆದಿತ್ತು ಕನಸುಗಳು ನೂರಾಗಿ ಅವಳ ನೆನಪಾಗಿ ... !! *** ಕಪ್ಪು ಕಮಲವ ಅರಳಿಸಿ ನೋಟ ಬಂದೀತೆಂಬ ಹಂಬಲ ಎದುರಿದ್ದರೂ ಬಾರದ ನೋಟ ಎಲ್ಲೆಲ್ಲೂ ಕನಸುಗಳ ಹಾವಳಿ ಒಂದೂ ನನಸಾಗುವ ಸುಳಿವಿಲ್ಲ ಹುಚ್ಚುಕೋಡಿ ಮನಸಂತೂ ಹರಿದಿದೆ ಅರಸುತ ಹೃದಯದ ಪೀಠ ... !! ***                             ಚಿತ್ರ ಕೃಪೆ: ಗೂಗಲ್ :ಒಂಬಗೆಯ ಮೋಹ: ಇತ್ತಿಂದೇನೂ ಹೇಳದೇ, ಅತ್ತಿಂದೇನೂ ಇಲ್ಲದೆ, ನೋಡಿ ನೋಡಿ ಸಂತೃಪ್ತನಾಗಿ, ಇದ್ದ ನಾಲ್ಕ್ ವರುಷ ಮುಳುಗಿ, ಉಳಿದೆಣಿಕೆಯ ದಿನಗಳಲಿ, ಬೇಕೋ-ಬೇಡವೋ ಎಂಬ ದ್ವಂದ್ವದಲಿ, ಮನದಾಳದಲ್ಲಚ್ಚೆ ಒತ್ತಿಹ ಮೊದಲ ಪ್ರೀತಿಯ, ಸುಂದರ ಕನಸುಗಳ ರೂವಾರಿಯ, ಮೆಲುಕು ಹಾಕುತ್ತಾ ಸಾಗುವುದೋ?! ಹೇಳಿ ಏನಾದರೊಂದು ಮಾಡುವುದೋ?! . . ಕನಸುಗಳ ಮಾರಿ ಏಕಾಂಗಿಯಾಗುವುದೋ?! Note: Originally written in July month of 2016, Later merged to one post, while rearranging the articles. (17th June 2017)

ನನ್ನ ತಾಯಿ

Image
ಹೌದು, ಇವಳೇ ನನ್ನ ತಾಯಿ, ಕೊಳಕಾದ ಮತ್ತು ಹರಿದ ಸೀರೆ ಉಟ್ಟಿದ್ದಾಳೆ, ದಾರಿ-ದಾರಿಯಲ್ಲಿ ನಿಂತು ತನ್ನ ಮಕ್ಕಳನ್ನು ಕಾಯುತ್ತಿದ್ದಾಳೆ. ತನ್ನ ಅಸ್ತಿತ್ವವೇ ಅಲುಗಾಡುತ್ತಿದ್ದರೂ ತನ್ನ ಮಕ್ಕಳೂ- ತನ್ನಲ್ಲಿರುವ ಇತರರಿಗೂ ಆಲಂಗಿಸಿ ತುತ್ತಿಟ್ಟಿದ್ದಾಳೆ-ಸಾಕಿದ್ದಾಳೆ. ತನ್ನ ಕೈಲಾದ ಮಟ್ಟಿಗೆ ಆಕೆ  ಎಲ್ಲರನ್ನೂ ಪ್ರೀತಿಸಿದ್ದಾಳೆ, ಆದರೆ, ತನ್ನ ಮಕ್ಕಳೇ ಬೇರೆ ಪ್ರೀತಿಗೆ ವಾಲಿದ್ದಾರೆಂದರೆ ಹೇಗೆ ತಡೆದುಕೊಂಡಾಳು?! ಬಂದವರೊಂದಿಗೆ ಸೇರಿ ತನ್ನಮ್ಮನನ್ನೇ ಹೊರಹಾಕಿದರೆ ಆಕೆ ಏನು ಮಾಡಿಯಾಳು?! ಮಾತು ಕೊಟ್ಟವಳನ್ನು ಮರೆತು, ಪರರಿಗೆ ಗುಲಾಮರಾದದ್ದನ್ನು ಕಂಡು, ಕೊರಗಿದ್ದಾಳೆ - ಮರುಗಿದ್ದಾಳೆ. ರಸ್ತೆ-ರಸ್ತೆಯಲ್ಲಿ ತನ್ನನ್ನು ಉಳಿಸುವಂತೆ ಕೋರಿದ್ದಾಳೆ. ಆಕೆಗೇನು ನೋಡಿ ನೋಡಿ ಕೊನೆಗೆ, ಮರುಗಿ ಮರೆಯಾಗುತ್ತಾಳೆ. ಆಮೇಲೆ, ಬೆಲೆಕಟ್ಟಲಾಗದಿಹ ಅವಳ ಪ್ರಸ್ತುತಿ ಇಲ್ಲದಿರೆ, ನಾವೆಲ್ಲಿ?! ಈ ನಾಡೆಲ್ಲಿ?!

ಬಸ್ಸು-ಬೆಂಗಳೂರು

Image
ಜೀವನ ಎಷ್ಟು ಸುಂದರ ಅಲ್ವಾ, ಜೀವನ ಅನ್ನೋ ದಾರೀಲಿ ಅದೆಷ್ಟು ಅನುಭವ ಪಡಿತೀವಿ, ಆದೆಷ್ಟು ತರಹದ ಜನ ನೋಡ್ತೀವಿ, ಜೀವನದಲ್ಲಿ ಏಗೋದು ತುಂಬಾ ಕಷ್ಟ ಆದ್ರೆ ಅಷ್ಟೇ ಅದ್ಭುತ. ಎಷ್ಟೋ ಜನ ಬಾಳಲ್ಲಿ ತುಂಬಾ ದಿನ ಇರ್ತಾರೆ ಅನ್ಕೊಂಡವ್ರು ಸಡನ್ ಮಾಯ ಆಗ್ತಾರೆ, ಕಮ್ಮಿ ದಿನ ಇದ್ದವ್ರು ಪರ್ಮನೆಂಟ್ ಆಗ್ಬಿಡ್ತಾರೆ ಏನೋಪಾ ಇದೆಲ್ಲಾ ಜೀವನದ ಹುಚ್ಚಾಟಗಳು. ಯಾಕೆ ಇದೆಲ್ಲಾ ಅಂದ್ರೆ, ೧೮/೦೬/೨೦೧೭ ಕ್ಕೆ ಇ-ಲಿಟ್ಮಸ್ ಎಕ್ಸಾಮ್ ಬರಿಯಣ ಅಂತ ಬೆಂಗ್ಳೂರಿಗೆ ಹೋಗಿದ್ದೆ. ಬೆಳಿಗ್ಗೆ ೪:೩೦ ಕ್ಕೆ ಮೈಸೂರಿಂದ ಬಸ್ ಹತ್ತಿ ಹೊರಟೆ. ಸುಮಾರು ೭:೧೦ ಕ್ಕೆ ಸ್ಯಾಟಲೈಟ್ ಸ್ಟೇಷನ್ ಗೆ ಇಳ್ದು ಮ್ಯಾಪ್ ಹಾಕಿ ನೋಡಿದೆ, ೯ ಕಿ.ಮೀ. ಇತ್ತು ಬಾಲ್ಡ್ವಿನ್ ಹೈ ಸ್ಕೂಲ್ ಅಲ್ಲೇ ನನ್ ಎಕ್ಸಾಮ್ ಇದ್ದಿದ್ದು. ಅಲ್ಲಿಂದ ಮೇಲೆ ಇರೋ BMTC bus stand ಗೆ ಬಂದೆ. I was waiting for the bus no. K4 which was showing in Google maps. But it  didn't arrive, ಸೋ I asked a Tea stall holder, he said "ಹಿಂದೆ ಹೋಗಿ ಸಿಗತ್ತೆ ", ಅರೇ ಅಲ್ಲಿಂದಾನೆ ಬಂದಿದೀನಿ ಅಲ್ಲಿ ಮೆಜಸ್ಟಿಕ್ ಕನೆಕ್ಷನ್ ಬಸ್ ಬಿಟ್ರೆ ಬೇರೆ ಯಾವ ಬಸ್ಸು ಬರಲ್ಲ. ಸರಿ ಅಲ್ಲೇ ಬಂದ ಬಸ್ಸಿನ ಕಂಡಕ್ಟರ್ ಕೇಳ್ದೆ ಅವ್ರ್ ಹೇಳಿದ್ರೂ ಆನಂದ ಭವನ್ ಎದುರುಗಡೆ ಸ್ವಲ್ಪ ಮುಂದಿರೋ ಬಸ್ ಸ್ಟಾಪ್ಗೆ ಹೋಗಿ ಅಂತ. ಅಲ್ಲಿ ಹೋದೆ ಅಲ್ಲೂ ಯಾವ್ದ್ಯಾವ್ದೋ ಬಸ್ ಬರ್ತಿತ್ತು ಸರಿ ಅಂತ ಅ

"ನನ್ನ ಹಣತೆ"

Image
ಹಣತೆ ಹಚ್ಚುತ್ತೇನೆ ನಾನೂ. ಈ ಕತ್ತಲನು ಗೆದ್ದು ನಿಲ್ಲುತ್ತೇನೆಂಬ ಜಿದ್ದಿನಿಂದಲ್ಲ ; ಲೆಕ್ಕವೇ ಇರದ ದೀಪಾವಳಿಯ ಹಡಗುಗಳೆ ಇದರಲ್ಲಿ ಮುಳುಗಿ ಕರಗಿರುವಾಗ ನಾನು ಹಚ್ಚುವ ಹಣತೆ ಶಾಶ್ವತವೆಂಬ ಭ್ರಾಂತಿ ನನಗಿಲ್ಲ. ಹಣತೆ ಹಚ್ಚುತ್ತೇನೆ ನಾನೂ ; ಈ ಕತ್ತಲಿನಿಂದ ಬೆಳಕಿನ ಕಡೆಗೆ ನಡೆದೇನೆಂಬ ಆಸೆಯಿಂದಲ್ಲ. ಕತ್ತಲಿನಿಂದ ಕತ್ತಲಿಗೇ ತಡಕಾಡಿಕೊಂಡು ಬಂದಿವೆ ಹೆಜ್ಜೆ ಶತಮಾನದಿಂದಲೂ. ನಡು ನಡುವೆ ಒಂದಷ್ಟು ಬೆಳಕು ಬೇಕೆಂದು ಅಗಾಗ ಕಡ್ಡಿ ಗೀಚಿದ್ದೇವೆ, ದೀಪ ಮುಡಿಸಿದ್ದೇವೆ, ವೇದ, ಶಾಸ್ತ್ರ, ಪುರಾಣ, ಇತಿಹಾಸ, ಕಾವ್ಯ, ವಿಜ್ಞಾನಗಳ ಮತಾಪು-ಪಟಾಕಿ-ಸುರುಸುರುಬತ್ತಿ-ಹೂಬಾಣ ಸುಟ್ಟಿದ್ದೇವೆ. ‘ತಮಸೋಮಾ ಜ್ಯೋತಿರ್ಗಮಯಾ’ ಎನ್ನುತ್ತ ಬರೀ ಬೂದಿಯನ್ನೇ ಕೊನೆಗೆ ಕಂಡಿದ್ದೇವೆ. ನನಗೂ ಗೊತ್ತು, ಈ ಕತ್ತಲೆಗೆ ಕೊನೆಯಿರದ ಬಾಯಾರಿಕೆ, ಎಷ್ಟೊಂದು ಬೆಳಕನ್ನು ಇದು ಉಟ್ಟರೂ, ತೊಟ್ಟರೂ, ತಿಂದರೂ, ಕುಡಿದರೂ ಇದಕ್ಕೆ ಇನ್ನೂ ಬೇಕು ಇನ್ನೂ ಬೇಕು ಎನ್ನುವ ಬಯಕೆ. ಆದರೂ ಹಣತೆ ಹಚ್ಚುತ್ತೇನೆ ನಾನೂ ; ಕತ್ತಲೆಯನ್ನು ದಾಟುತ್ತೇನೆಂಬ ಭ್ರಮೆಯಿಂದಲ್ಲ, ಇರುವಷ್ಟು ಹೊತ್ತು ನಿನ್ನ ಮುಖ ನಾನು, ನನ್ನ ಮುಖ ನೀನು ನೋಡಬಹುದೆಂಬ ಒಂದೇ ಒಂದು ಆಸೆಯಿಂದ ; ಹಣತೆ ಆರಿದ ಮೇಲೆ, ನೀನು ಯಾರೋ, ಮತ್ತೆ ನಾನು ಯಾರೋ. - ಜಿ ಎಸ್ ಶಿವರುದ್ರಪ್ಪ