Posts

Showing posts from October, 2017

ಪುರಸ್ಕಾರ

ಕರ್ಣನ ಗೆಳೆಯ ರಾಮ ಒಂದು ಪ್ರಾಥಮಿಕ ಶಾಲೆಯ ಶಿಕ್ಷಕ, ಒಮ್ಮೆ ಅವನು ತನಗೆ ದಿಲ್ಲಿಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ಇರುವುದಾಗಿಯೂ, ತಾನು ಅಲ್ಲಿಗೆ ಹೋಗುತ್ತಿರುವುದಾಗಿಯೂ ಹೇಳಿದ್ದ. ಹೋಗಿದ್ದ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದದ್ದೂ ಆಯ್ತು ವಾಪಾಸ್ ಬಂದ. ಬಂದ ನಂತರ ಕರ್ಣನಿಗೆ ಒಂದು ದಿನ ಸಿಕ್ಕ ರಾಮನು ಅವನನ್ನು ತನ್ನ ಮನೆಗೆ ಕರೆದೊಯ್ದು ಟೀ ಕುಡಿಸಿದ ಸುಮ್ಮನಿರಲಾರದ ಕರ್ಣ ಎಲಿ, ನಿನಗೆ ಪ್ರಶ್ತಸ್ತಿ ಕೊಡಲು ಕಾರಣವೇನು ಹೇಳು ಎಂದ. ರಾಮ ತನ್ನ ಕೋಣೆಯಿಂದ ಎರಡು ಬೃಹತ್ತಾದ ಫೈಲುಗಳನ್ನು ಹೊತ್ತು ತಂದ. ಅದನ್ನ ತೆರೆದು "ಇಷ್ಟು ಕಡೆ ಸಭೆ ಮಾಡಿದ್ದೇನೆ, ಇಷ್ಟು ಕಾರ್ಯಕ್ರಮ ಆಯೋಜಿಸಿದ್ದೇನೆ, ಪ್ರಶಸ್ತಿ ನೀಡಿದ್ದೇನೆ, ರೈತ ಸಂವಾದಗಳನ್ನು ಮಾಡಿದ್ದೇನೆ, ಇತ್ಯಾದಿ" ಇದನ್ನೆಲ್ಲಾ ನೋಡಿ ಕರ್ಣ ಮಡಚಿ ಪಕ್ಕಕ್ಕಿಟ್ಟು, ಕರ್ಣ: ನಿನ್ನ ವೃತ್ತಿ ಏನು?! ರಾಮ: ಪ್ರಾಥಮಿಕ ಶಾಲಾ ಶಿಕ್ಷಕ. ಕರ್ಣ: ನಿನ್ನ ಶಾಲೆಗೆ ಮತ್ತು ನಿನ್ನ ವಿದ್ಯಾರ್ಥಿಗಳ ಅಭಿವೃದ್ಧಿಗೆ ಏನು ಮಾಡಿದ್ದೀಯೇ ತೋರಿಸು. ರಾಮ ಅಲ್ಲೆ ದಂಗಾಗಿ ಹೋದ ತನ್ನ ಗೆಳೆಯನಿಂದ ಈ ಮಾತುಗಳನ್ನು ಅಪೇಕ್ಷಿಸಿರಲಿಲ್ಲ. ಆದರೆ ಅವನಿಗೆ ತನ್ನ ತಪ್ಪಿನ ಅರಿವಾಯಿತು. ಅವನು ತಾನು ಮಾಡಬೇಕಾದ ಕೆಲಸವನ್ನು ಬಿಟ್ಟು ಬೇರೆಲ್ಲವನ್ನೂ ಮಾಡಿದ್ದ . ಎಲ್ಲರೂ ಅಷ್ಟೇ ಪುರಸ್ಕಾರಗಳು, ಲಾಭದ ಆಸೆಗೆ ಒಳಗಾಗದೆ ತಮ್ಮ ಕಾಯಕವನ್ನು ನಿಷ್ಠೆ ಇಂದ ಮಾಡಬೇಕು.

ಇಂಡೋ-ಅಮೇರಿಕನ್ ಶಾಲೆ

ಕರ್ಣ ತುಂಬಾ ಬುದ್ಧಿವಂತ, ಚಾಣಾಕ್ಷ, ಮೇಧಾವಿ.            ಒಂದಿನ ಗೆಳೆಯರೊಡಗೂಡಿ ಅವರ ಮಕ್ಕಳಿದ್ದ ಬೆಂಗಳೂರಿನ ಇಂಡೋ-ಅಮೇರಿಕನ್ ಶಾಲೆಗೆ ಹೋಗ್ತಾನೆ. ಎಷ್ಟೇ ಆಗಲಿ ಅವನದು ಮೇಷ್ಟ್ರ ಬುದ್ಧಿ ಅಲ್ಲೇ ಇದ್ದ ಹುಡುಗನನ್ನ ಕರೆದ. ಕರೆದು ಮಾತನಾಡಿದ, ಕರ್ಣ: ಏನಪ್ಪಾ, ಏನು ನಿನ್ನ ಹೆಸರು?! ಹುಡುಗ: ಚಂದನ್ ಕರ್ಣ: ಹೇಗಿದೆ ಶಾಲೆ?! ಹೇಗಿದೆ ವಾತಾವರಣ?! ಹುಡುಗ: ಶಾಲೆ ತುಂಬಾ ಚೆನ್ನಾಗಿದೆ, ಏನು ಬೇಕೋ ಎಲ್ಲಾ ಇದೆ. ಏನೂ ಕೊರತೆ ಇಲ್ಲ. ( ಹುಡುಗನ ಸ್ವಚ್ಚ ಕನ್ನಡ ಕೇಳಿ) ಕರ್ಣ: ಯಾವ ಊರು ನಿಂದು?! ಅಪ್ಪ-ಅಮ್ಮ ಏನ್ಮಾಡ್ತಿದಾರೆ?! ಹುಡುಗ: ಅವರು ಅಮೇರಿಕೆಯಲ್ಲಿದ್ದಾರೆ ದುಡಿಯುತ್ತಿದ್ದಾರೆ, ವರುಷಕ್ಕೊಮ್ಮೆ ಬರುತ್ತಾರೆ ನಾನೂ ಒಮ್ಮೆ ಹೋಗುತ್ತೇನೆ. ( ಸುಮ್ಮನಿರಲಾಗದ ಕರ್ಣ) ಕರ್ಣ: ಮಗೂ, ನಿಮ್ಮ ತಂದೆ-ತಾಯಿಯ ಬಗ್ಗೆ ನಿನ್ನ ಅನಿಸಿಕೆ ಏನು?! ಹುಡುಗ: ನಾನೂ ಜೀವನದಲ್ಲಿ ಒಂದು ಒಳ್ಳೆ ಕೆಲಸ ಹಿಡಿದು ಸಮಾಧಾನಕರ ಜೀವನ ನಡೆಸುವ ಸ್ಥಿತಿಗೆ ಬಂದ ಮೇಲೆ ಅವರನ್ನು ಇದೇ ಬೆಂಗಳೂರಿನ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ.             ಇಷ್ಟು ಹೇಳಿ ಹೊರಟು ಹುಡುಗ ಹೋದ, ಕರ್ಣ ಅಲ್ಲೇ ಅವಾಕ್ಕಾಗಿ ನಿಂತಿದ್ದ. ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳ ಅಳಿವು ಅವನ ಮುಂದೆ ಉದಾಹರಣೆಯಾಗಿ ನಿಂತಿತ್ತು. ಹುಟ್ಟಿನಿಂದ ೧೮ ವರ್ಷದವರೆಗಿನ ಆ ಹುಡುಗನ ಆ ಬೋರ್ಡಿಂಗ್ ಶಾಲೆಯ ಜೀವನ ಈ ಹಂತ ತಲುಪಿಸಿತ್ತು. ಎಲ್ಲಾ ಇದ್ದೂ ಅನಾಥನಾಗಿ ಬೆಳೆದಿದ್ದ, ತನಗೆ ಕಷ್ಟ ಇದ್