ಕತ್ತಲ ಹಾದಿ
![]() |
ಕತ್ತಲ ಹಾದಿ |
ಅದೊಂದು ಕತ್ತಲೆಂಬಂತೆ ಭಾವ
ಸಾಲಿಗೆ ನಿಂತ ಬೀದಿ ದೀಪಗಳು
ಕತ್ತಲನ್ನು ನುಂಗಿ ಹಾಕುತ್ತಿದ್ದವು...
ತಲೆಯಲ್ಲಿದ್ದ ಯೋಚನೆಗಳು
ಆಗಸದ ಮೋಡಗಳಂತೆ
ಒಂದನ್ನೊಂದು ಹಿಂದಿಕ್ಕಿ ಓಡುತ್ತಿದ್ದವು...
ಕಾಲುಗಳು ತಮ್ಮಿಷ್ಟದಂತೆ
ಮುಂದಡಿ ಇಡುತ್ತಿದ್ದರೂ
ಏನೂ ಅರಿಯದ ಭಾವ ತುಂಬಿದ ದೇಹ...
ಗುರಿ ಅರಿಯದ ಮನಕೆ
ಏನೋ ಮಾಡುವ ಹಂಬಲ
ಒಮ್ಮೊಮ್ಮೆ ಗಡಿ ಮೀರುತ್ತಿದ್ದ ಆಲೋಚನೆಗಳು...
ಅಷ್ಟರಲ್ಲಿ ವಾಸ್ತವ ಅರಿಯುತ್ತಿದ್ದ
ತಲೆಗೆ ಏನೂ ಕಾಣದ ಮನಸ್ಥಿತಿ ...
ತುಸು ದೂರದಲಿ ಸೂರು ಕಾಣಲು
ಕೊನೆ ಗೋಚರವಾದಂತೆ
ಎಲ್ಲವೂ ಮಾಯವಾಗಿ
ನಿದ್ರಾದೇವಿಯೇ ಆಸ್ತಿಯಾದಳು... !!
Comments
Post a Comment