ಏಕಾಂಗಿ
ಮೇಳೈಸಿದ ಬೆಳಕಿನ ಹಬ್ಬ
ಎಲ್ಲೆಲ್ಲೂ ಮಧುರ ವಾದ್ಯಗೋಷ್ಠಿ,
ಹಾಡುವವರು ಹಾಡುತ
ಕುಣಿಯುವವರು ಕುಣಿಯುತ
ಅವರವರ ಲೋಕದಲಿ,
ಆ ಹಾದಿ - ಈ ಬೀದಿ
ಎಲ್ಲವೂ ವರ್ಣಮಯ,
ಎಷ್ಟೊಂದು ಆಡಂಬರ
ಎಲ್ಲಾ ನಮ್ಮವರೇ ...!!
ಅದೋ ಅಲ್ಲಿ..,
ಜನಜಂಗುಳಿಯ ನಟ್ಟ ನಡುವಿನಲಿ,
ನಿಂತಿಹನು ಎಲ್ಲಾ ಇದ್ದೂ
'ಏಕಾಂಗಿ'ಯಾಗಿ,
ತನ್ನದೇ ಲೋಕದಲ್ಲಿ ,
ಸ್ವಾರ್ಥ ಜಗತ್ತಿನಿಂದ ದೂರಾಗಿ ...!!
*******************
*******************
ಎಲ್ಲರೂ ನಿನ್ನೊಂದಿಗಿದ್ದಾಗ
ಎಲ್ಲರೊಂದಿಗೂ ನೀನಿರುವಾಗ
ಒಂದು ಉಸಿರಿಗಾಗಿ ನೀ ಎಲ್ಲವ
ಬಿಟ್ಟು ನಡೆದೆ,
ನಡೆವ ಹಾದಿ ಗುರುತೇ ಆಗಲಿಲ್ಲ.
ಆದರೆ ಈಗ,
ಕಾಲ ಬದಲಾಗಿದೆ
ಒಂದು ಉಸಿರು ಕ್ಷಣಿಕವೆಂಬಂತೆ
ತನ್ನ ದೀರ್ಘಕಾಲಿಕರನ್ನು ಸೇರಿದೆ
ನೀನು ತೃಣ-ತುಚ್ಚವಾಗಿದ್ದೀಯೇ
ನಿನಗಾಗಿ ಆರು ಇಲ್ಲ
ನೀನು ಹುಟ್ಟುತ್ತಲೂ ಏಕಾಂಗಿ
ಇನ್ನು ಕೊನೆಯವರೆಗೂ ಏಕಾಂಗಿ.
Comments
Post a Comment