ಮತ್ತೆ ನೆನಪಾಗಿಹೇ...!!




ಅತಿ ಮೊದಲ ಬಾರಿಗೆ ಒಂದು ವಿಮರ್ಶೆ,

ಕಾರಣ ಇಷ್ಟೇ ಅದೇಕೋ ಗೊತ್ತಿಲ್ಲ ಕೇಳಿದಾಗಿನಿಂದಲೂ ಮನಕೆ  ಅತೀ ಹತ್ತಿರವದಂತಿದೆ ಎದ್ದಾಗ ಮಲಗುವಾಗ ಒಂಟಿಯಾಗಿದ್ದಾಗ ಕೇಳಬೇಕೆನ್ನಿಸುವಂತಿದೆ...
ಅದೇನು ಪದ ಜೋಡಣೆಯೋ - ಹಾಡುಗಾರನ ಕಲೆಯೋ - ಸಂಗೀತದ ಮುದವೋ ಅಥವಾ ನಮ್ಮೊಳಗಿನ ಭಾವನೆಯ ಆಟವೋ ಅರಿಯದು ಆದರೆ ಈ ಆಲ್ಬಂ ಸಾಂಗ್ ನಮ್ಮ ಭಾವನೆಗಳನ್ನು ಕೆದರುವುದಂತು ಸುಳ್ಳಲ್ಲ.

ನಿರ್ದೇಶನ : ಧ್ರುವ ಬೋರಯ್ಯ
ಸಂಗೀತ - ಸಾಹಿತ್ಯ - ಗಾಯನ : ವಿಶ್ವನಾಥ ಪೈ

🎶🎵ಮತ್ತೆ ನೆನಪಾಗಿಹೆ .
ಕೈ ಗೆಟುಕದ ಹೂವೆ ಬೇಕಾಗಿಹೆ
ನೋಡು ನೆರಳೀಗ ಕೈ ಬೀಸಿ ಕರೆಯುತಿದೆ
ಎದೆಯ ವರದಿ ಕೇಳು ಒಮ್ಮೆ ಅರೆ ಕ್ಷಣ ನೀ ಕುಳಿತು
ತಬ್ಬಿಬ್ಬು ಆಗಿಹೆ ಈ ಪ್ರೀತಿಯಲಿ ಮಾತುಗಳ ಮರೆತು
ಸಣ್ಣ ಕೋರಿಕೆ , ಬೇರಿಲ್ಲ ಕಾಣಿಕೆ
ನಿನ್ನ ನಗುವಿಗೆ ಕಾರಣ ನಾನಾಗಲೇ ….???
ಕಳೆದೆ ಇರುಳು ಕಹಿ ನೋವಿನಲು ಸವಿ ನಾಳಿಗೆ ಕಾಡು ಕುಳಿತು
ಬಯಸಿ ಬಂದೆ ಸಮೀಪದಲಿ ತುಸು ಭಾರವೆ ಈ ನೆರಳು
ಕೊನೆಯ ಭೇಟಿಗೆ ನೀಡೊಮ್ಮೆ ಒಪ್ಪಿಗೆ
ಈ ಹೃದಯಕೆ ನೀಡೆಯಾ ಪರವಾನಿಗೆ …??? ಮತ್ತೆ ನೆನಪಾಗಿಹೆ..!!🎵🎧

Comments

  1. Namaste Anushku.. Vishwanath Pai here..got to know on this blog by my fnd.. thanks a lot for the kind writing..me and my team is curious to know about you and how u know us, how u know our song...etc

    ReplyDelete

Post a Comment

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ