ನಂಬಿಕೆಯ ದೀಪ


ನನ್ನೊಡನೆ‌‌ ನಾ ಕಳೆದು, ಮೌನ‌ ಮೇಲಾಗಿ,

ಹೃದಯಯದ ಭಾರದಿ ಪದಗಳೆಲ್ಲ ಸಿಲುಕಿವೆ.

ನೆನಪುಗಳ ರಾಶಿ ಎದೆಯನಾವರಿಸಿ,

ಕನಸುಗಳರಮನೆಯೇ ನೆಲಕಚ್ಚಿದೆ.


ಬಾಳಿನ ಪಯಣದಿ, ದಾರಿಗಳು ಕವಲೊಡೆದು,

ಒಂದು ಮನದ ಬಯಕೆಯಾಸೆಗೆ ಪಯಣವೇ ದಿಕ್ಕು ತಪ್ಪಿದೆ.

ನಂಬಿಕೆಯ ದೀಪವು, ಮಸುಕಾಗಿ ನಿಂತು,

ಇಂದಿನ ನೋವಿಗೆ, 

ನಾಳೆ ಉತ್ತರವಿರಬಹುದೆಂದು, 

ಕಾದು ಕುಳಿತಿದೆ.

Comments

Popular posts from this blog

Life Update

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ