Posts

ಪಾಪ ದೇವರು!!

ಹೀಗೆ ಹಿರಿಯ ಗೆಳೆಯರೊಬ್ಬರ ಜೊತೆ ಮಾರನೇ ದಿನ ಇದ್ದ ಪರೀಕ್ಷೆಯೊಂದರ ಬಗ್ಗೆ ಮಾತುಕತೆ ನಡೆಯುತ್ತಿತ್ತು. ಅವರು ಅದೇ ತಮ್ಮ ಜೀವನದ ನಿರ್ಣಾಯಕ ಪರೀಕ್ಷೆ ಅದರಲ್ಲಿ ಸೋತರೆ‌ ಜೀವನವೇ ಮುಗಿದಂತೆ‌ ಅನ್ನೋ ಪರೀಕ್ಷಾ ಭಯದಲ್ಲಿ ಮುಳುಗಿ, ಆರಾಮಾಗಿದ್ದ ನನಗೂ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದ್ದರು.   ನಾನು ವಿಚಲಿತನಾಗದೆ, ಸಮಚಿತ್ತದಿಂದ ಅವರೊಂದಿಗೆ ಸಂಭಾಷಣೆ ನಡೆಸುತ್ತಿದ್ದೆ. ಹಾಗೆಂದ ಮಾತ್ರಕ್ಕೆ ಎಲ್ಲವನ್ನೂ ಓದಿ ಮುಗಿಸಿ, ಅತೀವ ಆತ್ಮಸ್ಥೈರ್ಯದಿಂದ ಇದ್ದೆನೆಂದಲ್ಲ. ಮಾರನೇ ದಿನ ಇದ್ದ ಪರೀಕ್ಷೆ ನನಗೆ ಪ್ರಮುಖವಾಗಿರಲಿಲ್ಲ ಅದು ನನ್ನ  ಪರೀಕ್ಷೆಯಾಗಿತ್ತೆಂದರೆ ತಪ್ಪಲ್ಲ. ಹಾಗಾಗಿ ಆ ಪರೀಕ್ಷೆಗೆ ಕಟ್ಟಿದ್ದೆನೇ ಹೊರತು ಯಾವುದೇ ತಯಾರಿ ಮಾಡಿರಲಿಲ್ಲ. ಹೀಗೆ ಮಾತುಕತೆಯಲ್ಲಿ,  ಗೆಳೆಯರು: ನೀವಿಷ್ಟು ಆರಾಮಾಗಿದ್ದೀರಾ, ಎಲ್ಲವೂ ಮುಗಿಸಿದ್ದೀರಾ ಅನ್ಸುತ್ತೆ... ನಾನು: ಹಾಗೇನಿಲ್ಲ, ನಾಳೆ‌ ಪರೀಕ್ಷೆಯ ನನ್ನ ಎಲ್ಲಾ ಭಾರವನ್ನೂ ದೇವರ ಮೇಲೆ ಹಾಕಿ ಬಿಟ್ಟಿದ್ದೇನೆ ಹಾಗಾಗಿ ಚಿಂತೆಯಿಲ್ಲ. ಗೆಳೆಯರು: ಅಯ್ಯೋ! ಪಾಪ!! ದೇವರು!!! ನನಗೂ ಇಲ್ಲಿ ವಿಡಂಬನೆ ಅರಿಯಲು ಸ್ವಲ್ಪ ಸಮಯ ಬೇಕಾಯಿತು, ಆದರೆ ಆ ಭಯದಲ್ಲೂ ಅವರ ಹಾಸ್ಯಪ್ರಜ್ಞೆ ನನ್ನ ಮನಸೂರೆಗೊಳಿಸಿತು.

ಮಡಕೆ ಮೂತಿಯವ ಬಂದು ಹೋದಾಗ.....

Image
ಸೌಭಾಗ್ಯಪುರ ಅಂತ ಊರು, ಎಲ್ಲಾ ತಕ್ಕಮಟ್ಟಿಗೆ ಅನುಕೂಲಸ್ಥರೇ ಇದ್ರು. ಸುಮಾರು ಒಂದು ನೂರು ಮನೆಗಳಿದ್ವು. ಅದೇ ಊರವ್ರಂತೆ ಆದ್ರೆ ಒಂದ್ಹತ್ತು ಮನೆಗಳು ಊರಿಂದ ಸ್ವಲ್ಪ ದೂರದಲ್ಲಿ ಇದ್ವು. ರಾತ್ರಿ ಆದ್ರೆ ಊರಲ್ಲಿ ಬೀದಿನಾಟಕ, ಮುದುಕರ ಕಟ್ಟೆ, ಯುವಕರ ಗುಂಪು ಮನೆ ಮಾಡಿರ್ತಿದ್ವು. ಆದ್ರೆ ಅದ್ಯಾಕೋ ಊರಾಚೆಗಿದ್ದ ಮನೆಗಳು ಕತ್ತಲಾದ್ರೆ ತಟ್ಟನೆ ಮಾಯ ಆಗ್ತಾ ಇದ್ವು, ಏನೂ ಅಂತ ಗೊತ್ತಾಗ್ತಿರ್ಲಿಲ್ಲ.                        ಹೀಗೆ ಇದ್ದಾಗ ರಾತ್ರಿ ಸುರಿದ ಮಳೆಗೆ, ಸೋಮಣ್ಣನ ಮನೆ ಹಿಂದಿನ ಬಚ್ಚಲುಮನೆಗೆ ಹೊಂದಿಕೊಂಡಿದ್ದ ಚರಂಡಿ ಕಟ್ಟಿಕೊಂಡಿತ್ತು. ಆ ನೀರಿನೊಂದಿಗೆ ಬಂದು ನಿಂತಿದ್ದ ಎಲ್ಲಾ ಹೊಲಸನ್ನು ಆತ ನೋಡದಾದ, ಬಚ್ಚಲಿಗೆ ಹೋಗುವುದನ್ನೇ ನಿಲ್ಲಿಸಿ ಎಲ್ಲದಕ್ಕೂ ಮನೆಯವರೆಲ್ಲಾ ಬಯಲಿನ ಹಾದಿ ಹಿಡಿದ್ರು.                       ಅವತ್ತು ಬೆಳಿಗ್ಗೆ ಊರಿಂದ ಹೋದ ಸೋಮ ಇನ್ನು ಬಂದಿರಲಿಲ್ಲ. ಅಷ್ಟರಲ್ಲಿ ಯಾರೋ ಬಾರಿಸ್ತಿದ್ದ ಗಂಟೆ ಶಬ್ದ ಕೇಳ್ತಾ ಇತ್ತು. ರಾಮ ತನ್ನ ಗೆಳೆಯ ರಾಜೀವನಿಗೆ ಹೇಳ್ದಾ "ನೋಡೋ ನಮ್ ಶಾಲೆಗೆ ರಜೆ ಅಂತ ಗೊತ್ತಾಗಿ ಇವತ್ತೂ ಬಂದಿದಾನೆ ಐಸ್ ಕ್ಯಾಂಡಿ ಅವ್ನು", ಪ್ರತ್ಯುತ್ತರವಾಗಿ ರಾಜೀವ್ "ಯಾಕೋ ಗಂಟೆ ಶಬ್ದ ಬೇರೆ ಥರಾ ಇದ್ಯಲ್ಲಾ?!". ಅಷ್ಟರಲ್ಲಿ ರಾಜೀವನ ತಾಯ...

ಒಂಟಿತನವೊಮ್ಮೆ ಹೇಳಿತು

Image
ಒಂಟಿತನವೊಮ್ಮೆ  ಹೇಳಿತು ಎಲ್ಲರನೂ  ಕಾಡಲು ಯತ್ನಿಸಿದೆ ಆದರೆ, ನಿನಗಿಂತ ಏಕಾಂಗಿ ಎಲ್ಲೂ ಸಿಗಲಿಲ್ಲ ಅದಕ್ಕೇ ನಿನ್ನ ಬಳಿ ಉಳಿದೆ ಎಂದು!!

ಬಾಡಿದ ನೆನಪು

Image
ಬದುಕಿನ ಹಾದಿಯ ಬವಣೆಯ ತಿರುವಿನಲಿ ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ… ಬಾಡಿ ಹೋದ ನಿನ್ನ ನೆನಪಿನ ಹೂಗಳನು ಮರೆವೆಂಬ ಮೂಟೆಗೆ ತುರುಕಿ, ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ ಮುಂಜಾನೆಯ ಕಿರಣಗಳನರಸುತ್ತಾ… ಹರಿವ ಕಾಲದ ನದಿಯ ಶುಭ್ರ ಜಲವನ್ನು ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ, ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ ನಿಂತಿರುವೆ ಹೊರಟು, ಬಾಳ ಹಾದಿಯಲಿ ಮುಂಜಾನೆಯ ಕಿರಣಗಳ ಸ್ವಾಗತಿಸಿ… ಪ್ರಕವಿ

ವರುಷ

Image
(Image Courtesy: Google) ವರುಷ ಕಳೆದಿದೆ-ಹೊಸತು ಹೊಸಿಲಲ್ಲಿದೆ, ಸಿಹಿ-ಕಹಿಗಳ ಸಮಾಗಮವೇ ಆದ ವರುಷ ಕಹಿಯೊಂದ ಬಿಟ್ಟು ಸಿಹಿಯೆಲ್ಲಾ ಹೀರಿ ಹಿಂದೆ ಸರಿದಿದೆ, ಇದ್ದ ಸಂತಸಗಳೇನಿಲ್ಲದಿದ್ದರೂ ಅರಿಯದ ಹೊಸ ವರುಷದಲಿ  ಏನಾಗಬಹುದೋ ಎಂಬ ಆತಂಕವಂತೂ ಇದೆ, ಎಲ್ಲರೊಂದಿಗೆ ಪ್ರಾರಂಭವಾಗಿದ್ದ ವರುಷ ಒಂಟಿ ಮಾಡಿ ಕಳೆದು ಹೋಗುತ್ತಿದೆ, ಇನ್ನಾಸಕ್ತಿಗಳೇನು ಇಲ್ಲ ಹರುಷ ಇಲ್ಲದಿರಲೂ ಪರವಾಗಿಲ್ಲ ಕಹಿಯ ಉಡುಗೊರೆ ಬೇಡ, ಕನಸುಗಳ ವ್ಯರ್ಥ ಪ್ರಯತ್ನವೇ ಮೇಲೋಗರವಾಗಿ ಮನದಲ್ಲೇನೂ ಆಸೆ ಇಲ್ಲ, ಇರುವ ಬದುಕೇ ಸಮಾಧಾನವಾಗಿ ಮುನ್ನಡೆದರೆ ಅದುವೇ ನನ್ನ ತೃಪ್ತಿ. *********************** 29-ಡಿಸೆಂಬರ್-2017 (Image Courtesy:Google) ಮನದುಂಬಿ ನಿಂತಿದೆ ಕಟ್ಟೆಯೊಡೆದರೇನಾಗಬಹುದೋ ಕಾಣೆ, ಇಷ್ಟು ದಿನ ಅನಿಸದ ನೋವು ದಡಾರನೆ ವರ್ಷಾಂತ್ಯಕ್ಕೆ ನುಗ್ಗಿದೆ, ತಣ್ಣಗಿದ್ದ ಮನವು ಕಳೆದೆಲ್ಲವ ನೆನೆ-ನೆನೆದು ಮೌನದಿ ಗೋಗರೆದಿದೆ, ಕಳೆದುಹೋದ ಕಾಲೇಜು-ಹಾಸ್ಟೆಲ್ಲು-ಆ ಊರು ಏನೂ ಇಲ್ಲದ ಈಗಿನ ಸ್ಥಿತಿಗೆ ಅತೀವ ವಿರೋಧಿಯಾಗಿದೆ, ಆ ಸುಸಮಯ ಮೆಲುಕು ಹಾಕಲೂ ಗತಿಯಿಲ್ಲದ ತಿರುಕನಂತಾಗಿ ಪ್ರಕೃತಿಯೇ ನನ್ನ ವಿರೋಧಿ ಎಂಬ ಭಾಸವಾಗಿದೆ.

ದಿಕ್ಕು

Image
(Courtesy: Google Images) ಏನಾಗಿದೆಯೋ ತಿಳಿಯದು ಮನವು ಕಾರಣಗಳು ನೂರು ಮನ ಹಿಂಡಲು, ಆಪ್ತವಾದೊಂದು ಹಂಗು ಸಾಕು  ಮನ ಕಾದಿದೆ ಆ ಒಂದು ಕ್ಷಣ  ಬರಬಹುದೆಂದು, ಬಾಗಿಲು ತೆರೆದಿದೆ ದನಿ ಒಣಗಿದೆ ಪುಟ ತೆರೆದಿದೆ, ಖಾಲಿತನ ಹಿಂಡುತ್ತಿದೆ. ಎದೆ ಹೊತ್ತಿ ಉರಿದಿದೆ  ಉಸಿರು ಬತ್ತಿ ಸಾಯುತಿದೆ, ದಿಕ್ಕು ಬದಲಾದಂತಾಗಿ  ಹಾದಿಯೇ ಬಯಲಾದಂತಾಗಿದೆ, ಏನಾದರೇನಂತೆ,  ಈಗ ನನ್ನ ದಾರಿ ಕಂಡಿದೆ ಅದೋ ಕೈ ಬೀಸಿ ಬಾ ಎಂದು ಕರೆದಿದೆ!! ಮಳೆಯಿಲ್ಲದ ಮುಗಿಲಲಿ ಮೌನವೇ ನನ್ನ ಸ್ನೇಹಿಯಾಗಿದೆ, ನಾ ಬರುತಿರುವೆ ದೂರ ಹೋಗದಿರು, ಅಲ್ಲೇ ನಿಂತಿರು ನನ್ನನಾಲಂಗಿಸಲು!!

ಚಳಿ

Image
(Courtesy: Google) ಚಳಿಗಾಳಿ ತುಂಬಿಹುದು ಮೈಯೆಲ್ಲಾ ನಡುಗಿಹುದು, ಮೇಲೇರುತಿಹ ಭಾಸ್ಕರನಿಗೂ ಕಿಂಚಿತ್ತೂ ಬೆಲೆ ಇಲ್ಲದಾಗಿಹುದು, ಮನಕೀಗ ಭಯವೇರಿ ಚಳಿಯಿದೋ?! ಅಸಖ್ಯವಿದೋ?! ದಾರಿ ತಪ್ಪಿದ ಮನದಂತೆ ದೇಹವೂ ಅದೇ ದಾರಿ ಹಿಡಿದಿಹುದು, ಅಭಯವೊಂದು ಸಿಗಲಿ  ಇಲ್ಲಾ, ಸರ್ವವೂ ನಶಿಸಿ ಹೋಗಲಿ.