ಬಾಡಿದ ನೆನಪು



ಬದುಕಿನ ಹಾದಿಯ ಬವಣೆಯ ತಿರುವಿನಲಿ
ನೀ ಕೈಬಿಟ್ಟರೇನು.. ಮುಗಿದಿಲ್ಲ ಪಯಣವಿನ್ನೂ
ಸುಂದರ ದಿನದ ಮೋಹಕ ಮುಸ್ಸಂಜೆ ಕಳೆದು
ಕತ್ತಲಾದರೇನು.. ಆಗಿಲ್ಲ ಮುಂಜಾನೆಯಿನ್ನೂ…

ಬಾಡಿ ಹೋದ ನಿನ್ನ ನೆನಪಿನ ಹೂಗಳನು
ಮರೆವೆಂಬ ಮೂಟೆಗೆ ತುರುಕಿ,
ಭೋರ್ಗರೆವ ಕಾಲದ ನದಿಯ ತಳಕ್ಕೆಸೆದು
ಮುಂದುವರೆಸಿರುವೆ ಪಯಣವ, ಒಂಟಿ ಕಾಳರಾತ್ರಿಯಲಿ
ಮುಂಜಾನೆಯ ಕಿರಣಗಳನರಸುತ್ತಾ…

ಹರಿವ ಕಾಲದ ನದಿಯ ಶುಭ್ರ ಜಲವನ್ನು
ಎರಚಿ ಮನದ ಮೂತಿಗೆ, ತೊಳೆದು ನಿನ್ನೆಯ ಕೊಳೆಯ,
ಮಾಡಿ ಇಂದಿನ ಜಳಕವ, ಸಜ್ಜಾಗಿ ಮುಂದಕ್ಕೆ
ನಿಂತಿರುವೆ ಹೊರಟು, ಬಾಳ ಹಾದಿಯಲಿ
ಮುಂಜಾನೆಯ ಕಿರಣಗಳ ಸ್ವಾಗತಿಸಿ…


Comments

Popular posts from this blog

ಒಂದು ಅಲಾರಾಂನ ಕಥೆ

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ