ನನಗಾಗಿ

ಬಿದ್ದಂತಿಹುದು ಆಲಿಕಲ್ಲು ಕನಸಿನಲಿ ಬಿತ್ತಿಹಳಾ ರಾಗವ ಮನಸಿನಲಿ ಇರುವ ಹೊತ್ತು ಜೊತೆಗಿದ್ದು, ಕರಗಿ ಹೋದಾಳೆಂಬ ಭಯ | ಕಣ್ಬಿಟ್ಟರೆ ಮಳೆಯೋ ಮಳೆ ಹರಿದಿಹಳು ಕೈಸಿಗದೆ ಝರಿಯಾಗಿ-ನದಿಯಾಗಿ ಒಡೆದಿತ್ತು ಕನಸುಗಳು ನೂರಾಗಿ ಅವಳ ನೆನಪಾಗಿ ... !! *** ಕಪ್ಪು ಕಮಲವ ಅರಳಿಸಿ ನೋಟ ಬಂದೀತೆಂಬ ಹಂಬಲ ಎದುರಿದ್ದರೂ ಬಾರದ ನೋಟ ಎಲ್ಲೆಲ್ಲೂ ಕನಸುಗಳ ಹಾವಳಿ ಒಂದೂ ನನಸಾಗುವ ಸುಳಿವಿಲ್ಲ ಹುಚ್ಚುಕೋಡಿ ಮನಸಂತೂ ಹರಿದಿದೆ ಅರಸುತ ಹೃದಯದ ಪೀಠ ... !! *** ಚಿತ್ರ ಕೃಪೆ: ಗೂಗಲ್ :ಒಂಬಗೆಯ ಮೋಹ: ಇತ್ತಿಂದೇನೂ ಹೇಳದೇ, ಅತ್ತಿಂದೇನೂ ಇಲ್ಲದೆ, ನೋಡಿ ನೋಡಿ ಸಂತೃಪ್ತನಾಗಿ, ಇದ್ದ ನಾಲ್ಕ್ ವರುಷ ಮುಳುಗಿ, ಉಳಿದೆಣಿಕೆಯ ದಿನಗಳಲಿ, ಬೇಕೋ-ಬೇಡವೋ ಎಂಬ ದ್ವಂದ್ವದಲಿ, ಮನದಾಳದಲ್ಲಚ್ಚೆ ಒತ್ತಿಹ ಮೊದಲ ಪ್ರೀತಿಯ, ಸುಂದರ ಕನಸುಗಳ ರೂವಾರಿಯ, ಮೆಲುಕು ಹಾಕುತ್ತಾ ಸಾಗುವುದೋ?! ಹೇಳಿ ಏನಾದರೊಂದು ಮಾಡುವುದೋ?! . . ಕನಸುಗಳ ಮಾರಿ ಏಕಾಂಗಿಯಾಗುವುದೋ?! Note: Originally written in July month of 2016, Later merged to one post, while rearranging the articles. (17th June 2017)