ಶ್ರೀ ವೇಣು ಗೋಪಾಲಸ್ವಾಮಿ ದೇವಾಲಯ, ಹೊಸ ಕನ್ನಂಬಾಡಿ

This article was published in Prajavani on 06 May 2019 in Reformed format Please Read it Here click here (Read Below) ಫೈನಲ್ ಇಯರ್, ಕಾಲೇಜು ಬೇರೆ ಇಲ್ಲ ಸೋಮವಾರ ಏನ್ಮಾಡೋದು ಅಂತಾ ಇದ್ದಾಗ, ನಾನು ನೋಡದೇ ಇರೋ ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನ ನೋಡಣ ಅಂತ ಡಿಸೈಡ್ ಮಾಡಿದೆ. ನಾನು ಮತ್ತೆ ಫ್ರೆಂಡ್ ಹೊರಟ್ವಿ ನಂದೇ ಬೈಕ್ ಅಲ್ಲಿ. ಬೃಂದಾವನ ಗಾರ್ಡನ್ ನಮ್ ಕಾಲೇಜಿಂದ ಸುಮಾರು 25 ಕಿ.ಮೀ. ಇರ್ಬಹುದು. ಮಧ್ಯಾಹ್ನ ೨ ಗಂಟೆ ಸುಮಾರಿಗೆ ಹೊರಟ್ವಿ. ಅದೇ ದಾರೀಲಿ ಮೊದ್ಲು ಬಲಮುರಿಗೆ ಹೋಗೋ ದಾರಿ ತಿರುವು ಬರತ್ತೆ ಆದ್ರೆ ನಾನು ಸುಮಾರು ಸಲ ನೋಡಿದ್ರಿಂದ ಹಂಗೆ ಮುಂದೆ ಹೋದ್ವಿ. ಮೈಸೂರಿಂದ ೧೪ ಕಿ.ಮೀ. ದೂರ ಅನ್ಸುತ್ತೆ ಅಲ್ಲಿ ಕೆ.ಅರ್.ಎಸ್ ಡ್ಯಾಮ್ & ಬೃಂದಾವನ ಗಾರ್ಡನ್ ಇದೆ. ನೋಡಿ ೨ ವರ್ಷ ಆಗಿದ್ರಿಂದ ನೋಡನ ಅಂತ ಹೋದೆ. ಒಬ್ಬರಿಗೆ ೨೫/- ಟಿಕೆಟ್ಟು, ಯಪ್ಪಾ ಹೆವೀ ಬಿಸಿಲು ಎಷ್ಟು ಬಿಸಿಲು ಅಂದ್ರೆ ಕಾಲು ನೆಲದ ಮೇಲೆ ಇಡಕಾಗಲ್ಲ ಅಷ್ಟು . ಬೇಗ ಹೋಗಿ ಅಲ್ಲಿರೋ ಕಾವೇರಮ್ಮನಿಗೆ ನಮಸ್ಕಾರ ಮಾಡಿ ವಾಪಾಸ್ ಬರೋ ದಾರೀಲಿ ಗೇಟ್ ಹತ್ರ ಮತ್ಸ್ಯಾಲಯ ಇತ್ತು. ೫ ರೂ ಟಿಕೆಟ್ ಸಖತ್ ಇತ್ತು ಹೋದ್ರೆ ಮರಿದೇ ನೋಡ್ಬೇಕು. ತರ-ತರದ ಮೀನು ಇದ್ವು ಡೆಕೋರೇಷನ್ ಫಿಷ...