Posts

Showing posts from December, 2023

ಒಂದು ಅಲಾರಾಂನ ಕಥೆ

Image
ಪಿಯು ಓದುವ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ‌ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಕವಿತಾ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ‌ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು‌‌. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ.      ನಮ್ಮ‌ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರೂ...