ಪೆಟ್ರೋಲ್ ಬಂಕು
ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ. ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು... ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು. ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ...